ದೇಶದ ಸಾಂಸ್ಕೃತಿಕ ಪರಂಪರೆಯ ಉಳಿಸಲು ಪೂಜ್ಯ ಗುರುಪಾದ ಶ್ರೀ ಕರೆ

ಶಹಾಪೂರ:ಈಗಿನ ಮಕ್ಕಳು ಹಿಂದಿನ ಕಲೆ ಸಾಹಿತ್ಯ ಯೋಗ ಚಿತ್ರ ಕಲೆ ಆಟ ಪಾಠಗಳು ಮಾಡುವುದರಿಂದ ಮಕ್ಕಳಿಗೆ ಬದಲಾವಣೆ ಆಗಲು ಸಾದ್ಯ ಮತ್ತು ದೇಶದ ಸಂಸ್ಕೃತಿಕ ಪರಂಪರೆಯ ಉಳಿಸಲು ಸಾಧ್ಯ ಎಂದು ನಗರದ ಫಕೀರೇಶ್ವರ ಮಠದ ಶ್ರೀ ಗುರುಪಾದ ಮಹಾಸ್ವಾಮಿಗಳು ಮಕ್ಕಳಿಗೆ ಕರೆ ನೀಡಿದರು.ಇಂದು ನಗರದ ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಭಾಲಭವನ ಸೂಸೈಟಿ ಜಿಲ್ಲಾ ಬಾಲ ಭವನ ಸೊಸೈಟಿ ಹಾಗೂ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯತ ಹಾಗೂ ತಾಲ್ಲೂಕು ಬಾಲ ಭವನ ಸೊಸೈಟಿ ಶಹಾಪೂರ ಮತ್ತು ಶಿಶು ಅಬಿವೃದ್ದಿ ಯೋಜನಧಿಕಾರಿಗಳ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವುರುಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಬೇಸಿಗೆ ಶಿಬಿರದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ ಮಾತಾನಾಡುತ್ತಾ ಮಕ್ಕಳ ರಕ್ಷಣೆ ಮಾಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ‌.ಮಕ್ಕಳು ಸಮಯವನ್ನು ವ್ಯರ್ಥ ಮಾಡದೆ ಇಂತಹ ಶಿಬಿರದಲ್ಲಿ ಪಾಲ್ಗೊಂಡು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದು ಅವಶ್ಯಕತೆ ಇದೆ ಎಂದು ತಾಲ್ಲೂಕು ಮಟ್ಟದ ಬೇಸಿಗೆ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ
ತಾಲ್ಲೂಕು ಶಿಶು ಅಭಿವೃದ್ಧಿ ಯೋಜನ ಅಧಿಕಾರಿ ಗುರುರಾಜ,ಗ್ರೇಟ್‌ 2 ತಹಶಿಲ್ದಾರರಾದ ಸೇತುಮಾದವ ಕುಲ್ಕರ್ಣೆ, ಕ್ಷೇತ್ರದ ಶಿಕ್ಷಣಾಧಿಕಾರಿ ಇಸಿಒ ಕಾಡಯ್ಯಸ್ವಾಮಿ ಹಿರೇಮಠ, ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶರಣು ಎಸ್ ಕಾಡಂಗೇರಾ ಇತರರು ಇದ್ದರು. ಮಲ್ಲಯ್ಯ ಸ್ವಾಮಿ ಇಟಗಿ ನಿರೂಪಿಸಿ ವಂದಿಸಿದರು.