ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಕ್ಷರ ದಾಸೋಹ ಇಲಾಖೆ ವತಿಯಿಂದ ರಾಯಪ್ಪ ಗೌಡರಿಗೆ ಸನ್ಮಾನ

ಶಹಾಪುರ:ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಕ್ಷರ ದಾಸೋಹ ಇಲಾಖೆ ವತಿಯಿಂದ ಸರ್ವೋನ್ನತ ಸೇವಾ ಪ್ರಶಸ್ತಿಗೆ ಭಾಜನರಾದ ರಾಯಪ್ಪಗೌಡ ಹುಡೇದ ರವರಿಗೆ ಆದರ್ಶ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರುದ್ರಗೌಡ ಪಾಟೀಲ ಮತ್ತು ಸಮನ್ವಯಾಧಿಕಾರಿ ರೇಣುಕಾ ಪಾಟೀಲ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಸೂರ್ಯವಂಶಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಯಾಳಗಿ,ವಡಗೇರಾ ತಾಲೂಕಿನ ನೌಕರರ ಸಂಘದ ಅಧ್ಯಕ್ಷರಾದ  ಶಂಕರಪ್ಪ ಗೊಂದೆನೂರ,ಸಾಬರೆಡ್ಡಿ ವಡಗೇರಾ,ರಾಮನಗೌಡ ಖಾನಾಪುರ,ಮಲ್ಕಪ್ಪ,ಈರಣ್ಣ ಯಾಳವಾರ,ಚಂದಪ್ಪ ಸೇರಿದಂತೆ ಶಿಕ್ಷಕರು ಶಿಕ್ಷಕಿಯರು ಭಾಗವಹಿಸಿದ್ದರು.ಲಕ್ಶ್ಮಣ ಲಾಳಸೇರಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *