ಮಹಾಶೈವ ಧರ್ಮಪೀಠದಲ್ಲಿ 73 ನೆಯ ‘ ಶಿವೋಪಶಮನ ಕಾರ್ಯ’

Raichur ದೇವದುರ್ಗ(ಗಬ್ಬೂರು,ಡಿಸೆಂಬರ್ 17,2023) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಡಿಸೆಂಬರ್ 17 ರ ಆದಿತ್ಯವಾರದಂದು 73 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ಮಾತನಾಡುವ ಮಹಾದೇವನೆಂದು ಬಿರುದುಗೊಂಡು ತನ್ನ ಸನ್ನಿಧಿಯನ್ನರಸಿ ಬರುತ್ತಿರುವ ಭಕ್ತರ ಸರ್ವವಿಧ ಸಂಕಷ್ಟಗಳನ್ನು ಕಳೆಯುತ್ತಿರುವ ವಿಶ್ವೇಶ್ವರ ಶಿವನು ಅರಕೇರಾದ ಸಾಖೀಬ್ ಎನ್ನುವ ತರುಣನಲ್ಲಿ ಚೈತನ್ಯವನ್ನುಂಟು ಮಾಡಿ ಲೀಲೆ ಮೆರೆದಿದ್ದು ಈದಿನ ಶಿವೋಪಶಮನದ ವಿಶೇಷವಾಗಿತ್ತು.ಮೂಲತಃ ಮಾನ್ವಿಯವರಾದ ಜಾಕೀರ್ ಹುಸೇನ್ ಅವರು ಪ್ರಸ್ತುತ ಅರಕೇರಾದಲ್ಲಿ ಗುತ್ತೆದಾರರಾಗಿ ಕೆಲಸ ಮಾಡುತ್ತ ಅರಕೇರಾದಲ್ಲಿ ನೆಲೆಸಿದ್ದು ಅವರ ಮಗನಾಗಿರುವ ಸಾಖೀಬ್ ಹುಟ್ಟಿನಿಂದಲೂ ಕೈಕಾಲುಗಳಲ್ಲಿ ತ್ರಾಣವಿಲ್ಲದೆ ಮಾತನಾಡಲು ಆಗದೆ ನಿಶ್ಚೇತನನಾಗಿ ಹಾಸಿಗೆಯಲ್ಲಿಯೇ ಮಲಗಿರುತ್ತಿದ್ದ.ಮಹಾಶೈವ ಧರ್ಮಪೀಠದಲ್ಲಿ ವಿಶ್ವನಿಯಾಮಕನಾಗಿರುವ ಪರಶಿವನು ವೈದ್ಯರವೈದ್ಯ ಭವರೋಗವೈದ್ಯನ ಲೀಲೆಯನ್ನಾಡುತ್ತಿರುವುದನ್ನು ಅರಿತ ಜಾಕೀರ್ ಹುಸೇನ್ ಅವರು ಮಹಾಶೈವ ಧರ್ಮಪೀಠದಲ್ಲಿ ಡಿಸೆಂಬರ್ 10 ರಂದು ನಡೆದಿದ್ದ 72 ನೆಯ ‘ ಶಿವೋಪಶಮನ ಕಾರ್ಯ’ ಕ್ಕೆ ತಮ್ಮ ಮಗನನ್ನು ಕರೆತಂದಿದ್ದರು.ನಡೆದಾಡಲು ಬಾರದೆ ಇದ್ದುದರಿಂದ ಕಾರಿನಲ್ಲಿಯೇ ಮಲಗಿದ್ದ ಸಾಖೀಬ್ ನ ಬಳಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರೇ ತೆರಳಿ ಹುಡುಗನನ್ನು ಪರೀಕ್ಷಿಸಿ,ಲೋಬಾನ ಮಂತ್ರಿಸಿಕೊಟ್ಟಿದ್ದರು.ಮೂರ್ನಾಲ್ಕು ದಿನಗಳಲ್ಲಿಯೇ ಮಗನು ಚೈತನ್ಯಗೊಂಡು ಚಟುವಟಿಕೆಯಿಂದ ಪ್ರತಿಕ್ರಿಯಿಸುತ್ತಿರುವುದನ್ನು ಸಾಕೀಬ್ ನ ತಂದೆ ಜಾಕೀರ್ ಹುಸೇನ್ ಅವರೇ ವಿಡಿಯೋ ಮಾಡಿಕೊಂಡು ಬಂದು ಪೀಠಾಧ್ಯಕ್ಷರಿಗೆ ಮತ್ತು ಮಹಾಶೈವ ಧರ್ಮಪೀಠದ ಭಕ್ತರುಗಳಿಗೆ ತೋರಿಸಿ,ಸಂತಸ ವ್ತಕ್ತಪಡಿಸಿದರು.ಕಳೆದ ಶಿವೋಪಶಮನ ಕಾರ್ಯದಲ್ಲಿ ಸಾಖೀಬ್ ನನ್ನು ಕಂಡಿದ್ದ ಮಹಾಶೈವ ಧರ್ಮಪೀಠದ ಭಕ್ತರುಗಳು ಇಂದು ವಿಡಿಯೋ ನೋಡಿ ವಿಶ್ವೇಶ್ವರ ಶಿವನ ಲೀಲೆಗೆ ಬೆರಗಾಗಿ,ಭಕ್ತಿಯಿಂದ ನಮಿಸಿದರು.ಭವರೋಗವೈದ್ಯನಾಗಿರುವ ವೈದ್ಯನಾಥ ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ಇಂತಹ ಘಟನೆಗಳು ನಡೆಯುವುದು ಸಾಮಾನ್ಯಸಂಗತಿಯಾಗಿದೆ.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲ ಕಾರ್ಯಕರ್ತ ಗೋಪಾಲ ಮಸೀದಪುರ,ದಾಸೋಹ ಸಮಿತಿಯ ಅಧ್ಯಕ್ಷರಾದ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ್,ಚಿತ್ರಕಲಾವಿದ ಶರಣಪ್ಪ ಬೂದಿನಾಳ, ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಯಲ್ಲಪ್ಪ ಕರಿಗಾರ, ಪತ್ರಕರ್ತರುಗಳಾದ ರಮೇಶ ಖಾನಾಪುರ,ಏಳುಬಾವೆಪ್ಪಗೌಡ,ರಂಗನಾಥ ಮಸೀದಪುರ,ವೆಂಕಟೇಶ ಮಸೀದಪುರ,ಸಿದ್ರಾಮಯ್ಯಸ್ವಾಮಿ ಹಳ್ಳಿ,ಚಿತ್ರಶೇಖರ ಪತ್ತಾರ ಮಲದಕಲ್,ಪರಶುರಾಮ ಜಡೇರ್, ಬೆಟ್ಟಪ್ಪ ಗದಾರ,ಆನಂದ ಬಾಡದ,ಶಿವಕುಮಾರ ವಸ್ತಾರ್ ಮತ್ತು ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು,ಭಕ್ತರುಗಳು ಉಪಸ್ಥಿತರಿದ್ದರು.

About The Author