ದೇವದುರ್ಗ ತಾಲೂಕು ಘಟಕ ರಚನೆ

ಶಹಾಪುರ : ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲ್ ರವರ ಆದೇಶದ ಮೇರೆಗೆ ರಾಯಚೂರು ಪ್ರದೇಶ ಯುವ ಕುರುಬರ ಸಂಘದ ನೇತೃತ್ವದಲ್ಲಿ ದೇವದುರ್ಗ ತಾಲೂಕು ಕರ್ನಾಟಕ ಪ್ರದೇಶ ಯುವ ಕುರುಬರ ಘಟಕದ ತಾಲೂಕು ಅಧ್ಯಕ್ಷರನ್ನಾಗಿ ಬೂದಿಬಸವ ಮಸೀದಪುರ, ಗೌರವಾಧ್ಯಕ್ಷರನ್ನಾಗಿ ಶಿವಾನಂದ ಪೂಜಾರಿ ಪಂದ್ಯಾನ ರವರನ್ನು ನೇಮಕ ಮಾಡಲಾಗಿದೆ ಎಂದು ರಾಯಚೂರು ಜಿಲ್ಲಾ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷರಾದ ರಮೇಶ್ ಮೂಡಲದಿನ್ನಿ ತಿಳಿಸಿದರು.

ದೇವದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಮುಖಂಡರ ಸಭೆ ಸೇರಿ ತಾಲೂಕು ಘಟಕವನ್ನು ಆಯ್ಕೆ ಮಾಡಲಾಗಿದ್ದು,ಇನ್ನುಳಿದ ಪದಾಧಿಕಾರಿಗಳನ್ನು ನೇಮಿಸುವಂತೆ ತಾಲೂಕು ಅಧ್ಯಕ್ಷರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸಬೆಯಲ್ಲಿ ಮಾಜಿ ಅಧ್ಯಕ್ಷರಾದ ಗುರುಪ್ರತಾಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ ನರಸಣ್ಣ ಶಾಸ್ತ್ರಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ಕೇ. ತಿಮ್ಮಪ್ಪ ಮುಖಂಡರಾದ ಹನುಮಂತಪ್ಪ ಸವಂತಗಲ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *