ಅಕ್ಕಿ ನಾಪತ್ತೆ ಪ್ರಕರಣ : ಬಿಜೆಪಿ ಪ್ರತಿಭಟನೆ : ಟಿಎಪಿಎಂಸಿಯನ್ನು ಸೂಪರ್ ಸೀಡ್ ಮಾಡಿ :  ಸಚಿವರು ನೈತಿಕ ಹೊಣೆ ಒತ್ತು ರಾಜೀನಾಮೆ ನೀಡಲಿ : ರವಿಕುಮಾರ್ ಹೇಳಿಕೆ

ಮುಖ್ಯಾಂಶಗಳು
*ಪಡಿತರ ಅಕ್ಕಿ ನಾಪತ್ತೆಯಲ್ಲಿ ಸಚಿವರ ಕೈವಾಡದ ಶಂಕೆ.
*TAPCMS ಯನ್ನು ಸೂಪರ್ ಸೀಡ್ ಮಾಡಿ.
*ಅಧ್ಯಕ್ಷ ಗುರುನಾಥರೆಡ್ಡಿಯ ಬಂಧನಕ್ಕೆ ಒತ್ತಡ.
*ಅಕ್ರಮ ಮರಳುಗಾರಿಕೆ ನಿಲ್ಲಿಸಿ.
*ಪ್ರಸ್ತುತ ತನಿಖಾ ತಂಡವನ್ನು ವಜಾಗೊಳಿಸಿ ಸಿಓಡಿ           ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಿ.
ಶಹಾಪುರ : ನಗರದಲ್ಲಿ 6077 ಕ್ವಿಂಟಲ್ ಅಕ್ಕಿ  ಮಂಗಮಾಯವಾಗಿವೆ. ಎರಡು ಕೋಟಿ ಆರು ಲಕ್ಷ ಮೌಲ್ಯದ ದೊಡ್ಡ ಹಗರಣವಿದು. ಇದರ ಜವಾಬ್ದಾರಿ ವಹಿಸಿಕೊಂಡ TAPCMS ಸೂಪರ್ ಸೀಡ್ ಮಾಡಬೇಕು. ಪ್ರಸ್ತುತ ತನಿಖಾ ತಂಡವನ್ನು ವಜಾ ಗೊಳಿಸಿ ಸಿಓಡಿ ಅಥವಾ ನ್ಯಾಯಾಂಗ ತನಿಕೆಗೆ ಒಪ್ಪಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದರು.
ನಗರದ ಬಿಜೆಪಿ ಮುಖಂಡರಾದ ಅಮ್ಮಿನರೆಡ್ಡಿ ಯಾಳಗಿ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು.
ಅಕ್ಕಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಜನರನ್ನು ಬಂದಿಸಲಾಗಿದೆ. ಆದರೆ ಮುಖ್ಯ ಸ್ಥಾನದಲ್ಲಿರುವ TAPCMS ಅಧ್ಯಕ್ಷರಾದ ಗುರುನಾಥ ರೆಡ್ಡಿಯನ್ನು ಯಾಕೆ ಬಂಧಿಸಿಲ್ಲ. ಈತ ಈಗಾಗಲೇ ನಾಪತ್ತೆಯಾಗಿದ್ದಾನೆ.ಇದರಲ್ಲಿ ಶಾಮೀಲಾದ ಮಲ್ಲಿಕನನ್ನು ಕೂಡ ಬಂಧಿಸಲಾಗಿಲ್ಲ. ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯ ಸಚಿವರೆ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ. ಸಚಿವರು ಅಕ್ಕಿ ನಾಪತ್ತೆ ಪ್ರಕಾರದ ಹೊಣೆಯನ್ನು ಹೊತ್ತು ನೈತಿಕ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ತನಿಖಾ ತಂಡವನ್ನು ರಚಿಸಿದ್ದು ಪೊಲೀಸರು ಅಪರಾಧಿಯ ಜೊತೆಗೆ ಫೋಟೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ತನಿಖಾ ತಂಡದಲ್ಲಿರುವ ಉದುರಿದ ನ್ಯಾಯ ಸಿಗಲು ಸಾಧ್ಯವೇ.ಪ್ರಕರಣವನ್ನು ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು.ಕೋಲಾರ ರಾಯಚೂರಿನಲ್ಲಿ ಕೂಡ ಪಡಿತರ ಅಕ್ಕಿ ನಾಪತ್ತೆಯಾಗಿದ್ದು,ಎಲ್ಲವನ್ನು ಸಿಓಡಿ ತನಿಖೆಗೆ ಒಪ್ಪಿಸಲು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶರಣುಭೂಪಾಲ್ ರೆಡ್ಡಿ, ಬಿಜೆಪಿ ಹಿರಿಯ ಮುಖಂಡರಾದ ಡಾ.ಚಂದ್ರಶೇಖರ್ ಸುಬೇದಾರ, ಬಸವರಾಜ ವಿಭೂತಿಹಳ್ಳಿ,ಶಿವರಾಜ ದೇಶಮುಖ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ,ನಗರ ಮಂಡಲ ಅಧ್ಯಕ್ಷರಾದ ದೇವೇಂದ್ರಪ್ಪ ಕೊನೇರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಕಾಮಾ,ಸಿದ್ದಯ್ಯ ಸ್ವಾಮಿ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಕ್ಕಿ ನಾಪತ್ತೆಯ ಜೊತೆಗೆ ತಾಲೂಕಿನಲ್ಲಿ ರಾಯಲ್ಟಿ ಇಲ್ಲದೆ ಮರಳು ಮಾಫಿಯ ಭಯಂಕರವಾಗಿ ನಡೆಯುತ್ತಿದೆ.ರಸಗೊಬ್ಬರ ಮಾರಾಟದಲ್ಲಿ ದೊಡ್ಡ ಹಗರಣವಾಗಿದೆ.ಶಹಾಪುರ, ಕೆಂಭಾವಿ ನಗರದಲ್ಲಿರುವ ಜಾಗಗಳು ಸಚಿವರ ಹಿಂಬಾಲಕರಿಂದ ಒತ್ತುವರಿಯಾಗುತ್ತಿವೆ.ಶಹಾಪುರ ಅಕ್ರಮಗಳ ಕೂಟವಾಗಿದೆ.TAPCMS ಅಮಾನತ್ತು ಮಾಡಬೇಕು.ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಂದಲೇ ಇವೆಲ್ಲವು ನಡೆಯುತ್ತಿವೆ.ಕೂಡಲೆ ಸಚಿವರು ರಾಜೀನಾಮೆ ನೀಡಬೇಕು.
ಅಮೀನ್ ರೆಡ್ಡಿ ಪಾಟೀಲ್ ಬಿಜೆಪಿಯ ಹಿರಿಯ ಮುಖಂಡರು ಶಹಪುರ ವಿಧಾನಸಭಾ ಕ್ಷೇತ್ರ.
ಪಡಿತರ ಅಕ್ಕಿ ನಾಪತ್ತೆಯಾಗಿರುವುದು ಬಡವರ ಹೊಟ್ಟೆ ಮೇಲೆ ಹೊಡೆದಂತೆ. ನಾನು ಒಬ್ಬ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಮಂಡಳಿಯ ನಿರ್ದೇಶಕನಾಗಿದ್ದು ನಾಪತ್ತೆ ಅಕ್ಕಿಯ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು.ಅಪರಾಧಿಗಳು
ಯಾರೇ ಇದ್ದರೂ ಶಿಕ್ಷೆಯಾಗಬೇಕು.
ಬಸವರಾಜ ವಿಭೂತಿಹಳ್ಳಿ
ನಿರ್ದೇಶಕರು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಮಂಡಳಿ ಶಹಪುರ.ಅಕ್ಕಿ 

About The Author