ಡಾ.ಹೆಚ್ ಎನ್ ಪ್ರಶಸ್ತಿಗೆ ಚೆನ್ನಬಸಮ್ಮ ತಳವಾರ ಆಯ್ಕೆ

ಶಹಾಪು : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ 2023 ನೇ ಸಾಲಿನ ಡಾ. ಹೆಚ್ ಎನ್ ರಾಜ್ಯಮಟ್ಟದ ಪ್ರಶಸ್ತಿಯನ್ನು ಯಾದಗಿರಿ ಸುರಪುರ ತಾಲೂಕಿನ ಮಲ್ಲಾ ಬಿ ಗ್ರಾಮದ ಚನ್ನಬಸಮ್ಮ ತಳವಾರ್ ಅವರಿಗೆ ಸಾಮಾಜಿಕ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು  ಮೊಮ್ಮಗನಾದ ಪರಶುರಾಮ ತಳವಾರ ಪತ್ರಿಕಾ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.
******
ಚನ್ನಬಸಮ್ಮ ತಳವಾರ್ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಲ್ಲಾ ಬಿ ಗ್ರಾಮದಾಕೆ. 70 ವರ್ಷದ ಚನ್ನಬಸಮ್ಮ ಗರ್ಭಿಣಿ ಸ್ತ್ರೀಯರಿಗೆ ಸೂಲಗಿತ್ತಿಯಂತೆ ಹೆರಿಗೆ ಮಾಡುವ ವೃತ್ತಿಯಲ್ಲಿ ನಿರತರಾಗಿದ್ದು, ಸುಮಾರು 40 ವರ್ಷದಿಂದಲೂ 6,500ಕ್ಕಿಂತಲೂ ಅಧಿಕ ಸುರಕ್ಷಿತವಾದ ಹೆರಿಗೆಗಳನ್ನು ಮಾಡುತ್ತಾ ಬಂದಿದ್ದಾಳೆ. ಯಾವುದೇ ಹಣದ ಆಮಿಷಕ್ಕೆ ಒಳಗಾಗದೆ ಜಾತ್ಯತೀತವಾಗಿ ಎಲ್ಲಾ ಜನಾಂಗದವರಿಗೂ ಹೆರಿಗೆಯನ್ನು ಮಾಡುತ್ತಾ ಬಂದಿರುವ ಚನ್ನಬಸಮ್ಮನವರ ಸಾಮಾಜಿಕ ಸೇವೆಯನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಗುರುತಿಸಿ 2023ನೇ ಹೆಚ್ ಎನ್ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಲಾಗಿದೆ.

About The Author