ಹ.ಮಾ ಪೂಜಾರ್ ಅವರಿಗೆ ಕರದಳ್ಳಿ ಸದ್ಭಾವನಾ ಪುರಸ್ಕಾರ ಪ್ರಶಸ್ತಿ

ಶಹಾಪೂರ : ತಾಲೂಕಿನ ಚಂದ್ರಕಾಂತ್ ಕರದಳ್ಳಿ ಪ್ರತಿಷ್ಠಾನ ವತಿಯಿಂದ 2023 ನೇ ಸಾಲಿನ ರಾಜ್ಯಮಟ್ಟದ ಕರದಳ್ಳಿ ಸದ್ಭಾವನ ಪುರಸ್ಕಾರಕ್ಕೆ ಮಕ್ಕಳ ಸಾಹಿತಿ ಹ. ಮಾ. ಪೂಜಾರ್ ಆಯ್ಕೆಯಾಗಿದ್ದಾರೆ ಎಂದು ಚಂದ್ರಕಾಂತ್ ಕರದಳ್ಳಿ ಪ್ರತಿಷ್ಠಾನ ಅಧ್ಯಕ್ಷರಾದ ನಾಗರಾಜ್ ಕರದಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****
ಆಯ್ಕೆ ಸಮಿತಿಯಲ್ಲಿ ಸಿ ಎಸ್ ಭೀಮರಾಯ, ಪತ್ರಕರ್ತ ರವಿ ಹಿರೇಮಠ, ಸಾಹಿತಿ ದೊಡ್ಡಬಸಪ್ಪ ಬಳೂರಗಿ ಅವರು ಸಮಿತಿಯಲ್ಲಿದ್ದು,ಹ.ಮಾ ಪೂಜಾರ್ ಅವರನ್ನು ಗುರುತಿಸಿ ಆಯ್ಕೆ ಮಾಡಲಾಯಿತು. ಡಿಸೆಂಬರ್ 19ರಂದು ತಾಲೂಕಿನಲ್ಲಿ ದಿವಂಗತ ಲಿಂಗೈಕ್ಯ ಚಂದ್ರಕಾಂತ್ ಕರದಳ್ಳಿ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಸ್ಮರಣೆಕೆ, ಪ್ರಶಸ್ತಿ ಪತ್ರ ಮತ್ತು 5000 ರೂ. ನಗದು ನೀಡಲಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *