ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ಗೆ ಕಠಿಣ ಶಿಕ್ಷೆಗೆ ಆಗ್ರಹ

ಶಹಾಪುರ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೊಲನ್ನನುಭವಿಸಿದ್ದ ಚಿತ್ತಾಪುರ ಮತಕ್ಷೇತ್ರದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಕರ್ನಾಟಕದಿಂದ ಗಡಿಪಾರು ಮಡುವುದರೊಂದಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಯಾದಗಿರಿ ಜಿಲ್ಲಾ ಕಾಂಗ್ರಸ್ ಮಾಧ್ಯಮ ವಕ್ತಾರರಾದ ಚಂದ್ರಶೇಖರ ಕಟ್ಟಿಮನಿ ಆಗ್ರಹಿಸಿದರು.

ಪತ್ರಿಕೆಗೆ ಹೇಳಿಕೆ ನೀಡಿದ ಅವರು ನೀಡಿ ಸಚಿವರಾದ ಪ್ರಿಯಾಂಕ ಖರ್ಗೆ ಮೇಲೆ ಸುಳ್ಳು ಆರೋಪಿಸಿದ್ದ ಮಣಿಕಂಠ ರಾಠೋಡ್ ಅಪಘಾತಗೊಂಡಿದ್ದನ್ನು ದುರುದ್ದೇಶದಿಂದ ಸಚಿವರ ಹೆಸರನ್ನು ಬಳಕೆ ಮಾಡಿಕೊಂಡಿದ್ದು ಖಂಡನೀಯ. ಈಗಾಗಲೆ ರಾಠೋಡ್ ರವರನ್ನು ಬಂಧಿಸಿದ ಪೋಲಿಸರು ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತಾರೆ. ಇಂತವರನ್ನು ಬಂಧಿಸಬೇಕು. ಸಲ್ಲದ ಆರೋಪಗಳನ್ನು ಮಾಡಿದಲ್ಲಿ ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲವೆಂದು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಯುವ ಘಟಕದ ಕಾರ್ಯಕಾರಣಿ ಸದಸ್ಯರಾದ ಬಸವರಾಜ ನಾಯ್ಕಲ್ ಇದ್ದರು.

Leave a Reply

Your email address will not be published. Required fields are marked *