ಅತ್ತನೂರು ಗ್ರಾಮದ ಆಂಜನೇಯ ಕ್ಯಾಂಪ್ ಕೆರೆಯೊಂದರಲ್ಲಿ ಈಜಾಡಲು ಹೋದ ವ್ಯಕ್ತಿ ಶವವಾಗಿ ಪತ್ತೆ!

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರಿನ ಆಂಜನೇಯ ಕ್ಯಾಂಪಿನಲ್ಲಿ ಈಜಾಡಲು ಹೋದ ಲಿಂಗಣ್ಣ ಎನ್ನುವ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ನಡೆದಿದ್ದು, 39 ವರ್ಷದ ಕೆ.ಲಿಂಗಣ್ಣನಿಗೆ ಮೂರು ಮಕ್ಕಳಿದ್ದು, ಬಿಸಿಲಿನ ವೇಳೆಯಲ್ಲಿ ತನ್ನ ಮಕ್ಕಳಿಗೆ ಕೆರೆಯಲ್ಲಿ ಈಜು ಕಲಿಸಲು ತೆರಳಿದ್ದು,ತನಗೂ ಕೂಡ ಅಲ್ಪಸ್ವಲ್ಪ ಈಜು ಬರುತ್ತಿದ್ದು ಎನ್ನಲಾಗಿದೆ !.

ಬೆನ್ನಿಗೆ ಈಜಾಡುವ ಡಬ್ಬಿಯನ್ನು ಕಟ್ಟಿಕೊಂಡು ಕೆರೆಗೆ ದುಮುಕಿದ ಲಿಂಗಣ್ಣ ಕೆರೆಯ ಮಧ್ಯಭಾಗದಲ್ಲಿ ಹೋದಾಗ ಬೆನ್ನಿಗೆ ಕಟ್ಟಿಕೊಂಡ ಡಬ್ಬಿ ಆಕಸ್ಮಿಕವಾಗಿ ಕಳಚಿದ ಕಾರಣ ಬಹುದೂರಕ್ಕೆ ಸಾಗಿದ್ದರಿಂದ ದಂಡ ಸೇರಲಾರದೆ ಕೆರೆಯೋಳಗೆ ಮುಳುಗಿದನು. ನೀರಿನೊಳಗೆ ಮುಳುಗುವ ಸಂದರ್ಭದಲ್ಲಿ ಕೆರೆಯ ದಡದ ಮೇಲೆ ಯಾರೂ ಇರಲಿಲ್ಲ. ಎರಡು ಎಕರೆಯ ಕೆರೆಯು ಸುಮಾರು ಎರಡು ವಿದ್ಯುತ್ ಕಂಬದ ಆಳವಿದ್ದ ಕಾರಣ ಅಗ್ನಿಶಾಮಕ ದಳದವರು 24 ಗಂಟೆಗಳ ಕಾಲ ಮೃತ ದೇಹವನ್ನು ಹುಡುಕಿದರೂ ಸಿಗಲಿಲ್ಲ.ನಂತರ ದೇಹವು ನೀರಿನಿಂದ ಹೊರಬಂದಿದೆ.ಮೃತ ವ್ಯಕ್ತಿಯ ಕುಟುಂಬದವರ ಆಕ್ರಂದನ ಹೇಳತೀರದಾಗಿದೆ.