370 ವಿಧಿ ರದ್ದು : ಕೇಂದ್ರ ಸರ್ಕಾರದ ಕ್ರಮ ಎತ್ತಿ ಹಿಡಿದ ಸುಪ್ರಿಂ ತೀರ್ಪು ಸ್ವಾಗತಾರ್ಹ: ಕರಣ ಸುಬೇದಾರ

ಶಹಾಪೂರ : ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದಂತೆ 370ನೇ ವಿಧಿಯನ್ನು ರದ್ದು ಮಾಡಿದ ಬಿಜೆಪಿ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ ತೀರ್ಪು ಸ್ವಾಗತಾರ್ಹ ಎಂದುಬಿ ಜೆಪಿ ಯುವ ಮುಖಂಡ ಕರಣ ಸುಬೇದಾರ ಸ್ವಾಗತಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಗೃಹ ಸಚಿವರಾದ ಅಮೀತ ಷಾರವರಿಗೆ ಅಭಿನಂದನೆಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರವನ್ನು ಭಾರತದಲ್ಲಿ ಸಂಪೂರ್ಣವಾಗಿ ವಿಲೀನ ಮಾಡಿದ ಬಿಜೆಪಿ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ ಕೂಡ ಎತ್ತಿಹಿಡಿದಿರುವುದು, ನಮ್ಮ ಸರ್ಕಾರದ ನಿಲುವು ದೇಶದ ಹಿತದ ಪರವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯದ ಪುಷ್ಠಿಕರಿಸಿದೆ ಎಂದರು‌.

ಕೇಂದ್ರದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ಪಾಕಿಸ್ಥಾನದ ಮೇಲೆ ಎಲ್ಲಿಲ್ಲದ ಪ್ರೀತಿ ತೊರಿ, ಜಮ್ಮು ಕಾಶ್ಮಿರವನ್ನು ಪಾಕಿಸ್ಥಾನಕ್ಕೆ ಬಿಟ್ಟುಕೊಡುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಜವಾಹಾರಲಾಲ್ ನೆಹರು ಕಾಲದಲ್ಲಿ ತಾತ್ಕಾಲಿಕವಾಗಿ 370ನೇ ವಿಧಿ ಜಾರಿಗೆ ತರಲಾಗಿತ್ತು. ಅಧಿಕಾರದ ದುರಾಸೆ, ಒಂದು ಕೋಮಿನ ಓಲೈಕೆಗೆ ಕಾಂಗ್ರೇಸ್ ಪಕ್ಷದ ಎಲ್ಲಾ ನಾಯಕರುಗಳು ಈ ವಿಧಿಯನ್ನು ಖಾಯಂ ಮಾಡಲು ಹರಸಾಹಸ ಪಟ್ಟಿದ್ದರು. ಆದರೆ ಈ ಎಲ್ಲಾ ಗೊಂದಲಗಳಿಗೆ ಇಂದು ಸರ್ವೋಚ್ಛ ನ್ಯಾಯಾಲಯ ತೆರೆ ಎಳೆದಿದೆ. ಕೊಟ್ಯಾಂತರ ಜಮ್ಮು ಕಾಶ್ಮಿರದ ಜನತೆಯ ಅಭ್ಯುಧ್ಯಯಕ್ಕೆ ಕಾರಣವಾಗಲಿದೆ.ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ವಿಶ್ವಗುರುವಾಗಿದೆ. ದೇಶವೊಂದೆ, ಕಾನೂನು ಒಂದೆ ಎಂದು ಮತ್ತೊಮ್ಮೆ ಸಾಬಿತುಪಡಿಸಿದ್ದಾರೆ. ಜಮ್ಮು ಕಾಶ್ಮೀರ ವಿಷಯದಲ್ಲಿ ದೇಶದ ಜನತೆಗೆ ನೀಡಿರುವ ಆಶಯದಂತೆ ಕೆಲಸ ಮಾಡಿದ್ದಾರೆ ಎಂದರು.

About The Author