ಕೆಸರು ಗದ್ದೆಯಂತಾದ ತಿಪ್ಪನಹಳ್ಳಿ ಗ್ರಾಮದ ರಸ್ತೆಗಳು : ಎಚ್ಚೆತ್ತುಕೊಳ್ಳದ ಗ್ರಾಮ ಪಂಚಾಯಿತಿ :  ಸಾಂಕ್ರಾಮಿಕ ರೋಗದ ಭೀತಿ

ಶಹಾಪುರ : ತಾಲೂಕಿನ ಕನ್ಯಾಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಿಪ್ಪನಹಳ್ಳಿ ಗ್ರಾಮದಲ್ಲಿನ ರಸ್ತೆಗಳು ಕೆಸರು ಗದ್ದೆಯಂತಾಗಿ ಮಾರ್ಪಟ್ಟಿವೆ. ಸಾರ್ವಜನಿಕರು ಓಡಾಡಲು ಆಗದೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ಇಡಿ ಶಾಪ ಹಾಕುತ್ತಿದ್ದಾರೆ. ಸಿಸಿ ರಸ್ತೆ ನಿರ್ಮಾಣ ಮಾಡಿದರೂ ಚರಂಡಿಗಳಿಲ್ಲದೆ ಸಾರ್ವಜನಿಕರು ಬಳಕೆ ಮಾಡುವ ನೀರು ರಸ್ತೆಯ ಮೇಲೆ ಹರಿದಾಡುವುದರಿಂದ ಕೆಲವು ಸ್ಥಳಗಳಲ್ಲಿ ನಿಂತು ಚರಂಡಿಗಳಾಗಿ ಮಾರ್ಪಟ್ಟಿವೆ. ಇದರಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಇದೆಲ್ಲವನ್ನು ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರು ಅಧಿಕಾರಿಗಳು ಕ್ಯಾರಿ ಎನ್ನುತ್ತಿಲ್ಲ ಎನ್ನುವುದು ಸಾರ್ವಜನಿಕರ ಅಳಲಾಗಿದೆ.

ತಿಪ್ಪನಹಳ್ಳಿ : ಕೆಸರು ಗದ್ದೆಯಂತಾದ ಸಿಸಿ ರಸ್ತೆಗಳು 
*****
ತಿಪ್ಪನಹಳ್ಳಿ ಗ್ರಾಮದಲ್ಲಿ ಮೂರು ಜನ ಸದಸ್ಯರಿದ್ದು, ಅಭಿವೃದ್ಧಿ ಮಾತ್ರ ಶೂನ್ಯ. ಮೂರು ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿಯ ಪಿಡಿಓ ಬದಲಾವಣೆ ಯಾಗುತ್ತಿದ್ದು, ಇದರಿಂದ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ತಿಪ್ಪನಹಳ್ಳಿ ಗ್ರಾಮ : ಗ್ರಾಮದ ರಸ್ತೆಗಳ ಮೇಲೆ ಹರಿಯುತ್ತಿರುವ ನೀರಲ್ಲಿ ಶಾಲೆಗೆ ಹೋಗುತ್ತಿರುವ ವಿಧ್ಯಾರ್ಥಿಗಳು 
*****
ಜಾಲಿ ಕಂಠಿ ಗಿಡಗಳ ಕಾಟ : ತಿಪ್ಪನಹಳ್ಳಿ ಗ್ರಾಮದಿಂದ ಅನ್ವರ ರಸ್ತೆಯ ಮೇಲೆ ತಗ್ಗು ಗುಂಡಿ ಬಿದ್ದಿವೆ. ತಿಪ್ಪನಹಳ್ಳಿಯಿಂದ ವಿಭೂತಿಹಳ್ಳಿಯವರಿಗೆ ಹೋಗುವ ರಸ್ತೆಗಳ ಇಕ್ಕೆಲಗಳಲ್ಲಿ ಜಾಲಿ ಕಂಠಿ ಗಿಡಗಳು ಬೆಳೆದಿರುವುದರಿಂದ ಸಾರ್ವಜನಿಕರು, ಶಾಲಾ ಮಕ್ಕಳು, ವಾಹನಗಳು ಓಡಾಡುವುದಕ್ಕೆ ಭಾರಿ ಅಡಚಣೆಯಾಗಿದೆ. ಗ್ರಾಮದ ಅಂಬೇಡ್ಕರ್ ವೃತ್ತದಿಂದ ದ್ಯಾವಮ್ಮನ ಗುಡಿಯವರೆಗೆ ಬಚ್ಚಲು ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರು ಓಡಾಡಲು ಪರದಾಡುವಂತಾಗಿದೆ.
ತಿಪ್ಪನಹಳ್ಳಿಯಿಂದ ಅನ್ವರ್ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ತಗ್ಗು ಗುಂಡಿಗಳು
*****
ಗ್ರಾಮದ ಅಭಿವೃದ್ಧಿ ಶೂನ್ಯ.ರಸ್ತೆಯ ಮೇಲೆ ಚರಂಡಿ ನೀರು ಹರಿಯುವುದರಿಂದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಶಾಲಾ ಮಕ್ಕಳು ಕೂಡ ಶಾಲೆಗೆ ಹೋಗಬೇಕಾದರೆ ಇದೆ ಸಿಸಿ ರಸ್ತೆಯ ಮೇಲೆ ಹೋಗಬೇಕು. ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ. ರಸ್ತೆಗಳನ್ನು ತಿಪ್ಪೆ ಗುಂಡುಗಳಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಸಾರ್ವಜನಿಕರು. ಇದರ ಬಗ್ಗೆ ಗ್ರಾಮ ಪಂಚಾಯಿತಿ ಗಮನ ಹರಿಸುತ್ತಿಲ್ಲ.
ಭೀಮರಾಯ ಪೂಜಾರಿ
ತಾಲೂಕ ಕಾರ್ಯದರ್ಶಿಗಳು
ಕರ್ನಾಟಕ ಪ್ರಾಂತ ರೈತ ಸಂಘ ಶಹಾಪೂರು

About The Author