ಮಹಾಶೈವಧರ್ಮಪೀಠದಲ್ಲಿ 72 ನೆಯ ‘ ಶಿವೋಪಶಮನ ಕಾರ್ಯ

ರಾಯಚೂರು (ದೇವದುರ್ಗ):ಗಬ್ಬೂರು,ಡಿಸೆಂಬರ್ 10,2023 : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಡಿಸೆಂಬರ್ 10 ರ ಆದಿತ್ಯವಾರದಂದು 72 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಬಂದಿದ್ದ ನೂರಾರು ಜನ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ಈದಿನ ಶಿವೋಪಶಮನ ಕಾರ್ಯದಲ್ಲಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಜೇಗರಕಲ್ಲಿನ ಮಲ್ಲಯ್ಯ ಪೂಜಾರಿಯವರಿಗೆ ಶ್ರೀದೇವಿ ಪುರಾಣ ಪಾರಾಯಣ ಅನುಗ್ರಹ ದೀಕ್ಷೆ ನೀಡಿದ್ದು ವಿಶೇಷವಾಗಿತ್ತು.ಮೈಲಾಪುರ ಮಲ್ಲಯ್ಯನ ಆರಾಧಕರಾಗಿರುವ ಮಲ್ಲಯ್ಯ ಪೂಜಾರಿಯವರು ಪೀಠಾಧ್ಯಕ್ಷರಲ್ಲಿ ಅತ್ಯಂತ ಭಕ್ತಿ,ಗೌರವಗಳನ್ನು ಹೊಂದಿದ್ದು ಶ್ರೀದೇವಿ ಪುರಾಣ ಪಾರಾಯಣ ಮಾಡಲು ಆಸಕ್ತರಾಗಿದ್ದರಿಂದ ಇಂದು ವಿಶ್ವೇಶ್ವರಿ ದುರ್ಗಾದೇವಿಯ ಅನುಗ್ರಹಪೂರ್ವಕವಾಗಿ ‘ ಪಾರಾಯಣ ದೀಕ್ಷೆ’ ಅನುಗ್ರಹಿಸಲಾಯಿತು.

ಶಿವೋಪಶಮನ ಕಾರ್ಯಕ್ಕೆ ಬಂದಿದ್ದ ರಾಯಚೂರಿನ ಖ್ಯಾತ ಮಕ್ಕಳ ತಜ್ಞ ಡಾಕ್ಟರ್ ನಾಗರಾಜ ಜವಳಿ,ಪ್ರತಿಭಾ ದಂಪತಿಗಳನ್ನು ಪೀಠಾಧ್ಯಕ್ಷರು ಶಿವಾನುಗ್ರಹಪೂರ್ವಕ ಸನ್ಮಾನಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮೂಲಕಾರ್ಯಕರ್ತರುಗಳಾದ ಗೋಪಾಲಮಸೀದಪುರ,ಈರಪ್ಪ ಹಿಂದುಪುರ,ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ್, ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಉಮೇಶ ಸಾಹುಕಾರ ಅರಷಣಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಸಿದ್ರಾಮಯ್ಯಸ್ವಾಮಿ ಹಳ್ಳಿ,ಮಂಜುನಾಥ ಕರಿಗಾರ,ಯಲ್ಲಪ್ಪ ಕರಿಗಾರ,ಬೆಟ್ಟಪ್ಪ ಗದಾರ,ಜಂಬಣ್ಣ ಸುಲ್ತಾನಪುರ,ಶಿವಾನಂದ ಮಸೀದಪುರ ,ಸಿದ್ದಣ್ಣ ಪೂಜಾರಿ ಚಾಗಬಾವಿ ಮತ್ತು ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು,ಭಕ್ತರುಗಳು ಉಪಸ್ಥಿತರಿದ್ದರು.

About The Author