ಪಡಿತರ ಅಕ್ಕಿ ನಾಪತ್ತೆ ಪ್ರಕರಣ : ಜಿಲ್ಲಾ ಆಡಳಿತದಿಂದ ಟಿಎಪಿಸಿಎಮ್ಎಸ್ ಗೆ ಬರಬೇಕಾಗಿದ್ದ 1.57 ಕೋಟಿ ಮುಟ್ಟುಗೋಲು

ಶಹಾಪುರ : ಪಡಿತರ ಅಕ್ಕಿ ನಾಪತ್ತೆ ಪ್ರಕರಣ ಜಿಲ್ಲಾಡಳಿತ ಈ ಕ್ರಮವನ್ನು ಗಂಭೀರವಾಗಿ ತೆಗೆದುಕೊಂಡು ತಾಲೂಕ ಒಕ್ಕಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿ ಎ ಪಿ ಸಿ ಎಮ್ ಎಸ್ ) ಕ್ಕೆ ಸರ್ಕಾರದಿಂದ ಬರಬೇಕಾಗಿದ್ದ ಲಾಭಾಂಶ ಮತ್ತು ಸಹಾಯಧನ ಮೊತ್ತ 1.57 ಕೋಟಿ ರೂ ತಡೆ ಹಿಡಿದು ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಆದೇಶಿಸಿದ್ದಾರೆ.
*****
ರಾಜ್ಯದಲ್ಲಿ ಸಂಚಲನೆ ಮೂಡಿಸಿದ ಪಡಿತರ ಅಕ್ಕಿ ನಾಪತ್ತೆ ಪ್ರಕರಣದ ಕುರಿತು ಜಿಲ್ಲಾಡಳಿತ ತೆಗೆದುಕೊಳ್ಳುವತ್ತ ಎಲ್ಲರ ಚಿತ್ತ ನೆಟ್ಟಿದೆ. ಜಿಲ್ಲಾಡಳಿತ ಈ ಕ್ರಮವನ್ನು ಗಂಭೀರವಾಗಿ ತೆಗೆದುಕೊಂಡು ತಾಲೂಕ ಒಕ್ಕಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿ ಎ ಪಿ ಸಿ ಎಮ್ ಎಸ್ ) ಕ್ಕೆ ಸರ್ಕಾರದಿಂದ ಬರಬೇಕಾಗಿದ್ದ ಲಾಭಾಂಶ ಮತ್ತು ಸಹಾಯಧನ ಮೊತ್ತ 1.57 ಕೋಟಿ ರೂ ತಡೆ ಹಿಡಿದು ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಆದೇಶಿಸಿದ್ದಾರೆ.
*****
ಟಿ ಎ ಪಿ ಸಿ ಎಮ್ ಎಸ್  ಸಂಘವು ಪಡಿತರ ಕಾರ್ಡದಾರರಿಗೆ ವಿತರಿಸಬೇಕಾಗಿದ್ದ ಪಡಿತರ ಅಕ್ಕಿ( 6077 ಕ್ವಿಂಟಲ್) ಯನ್ನು ದುರುಪಯೋಗಪಡಿಸಿಕೊಂಡಿದ್ದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಆಹಾರ ಭದ್ರತೆ ಕಾಯ್ದೆ 2013 ಅಂತ್ಯೋದಯ ಅನ್ನ ಭಾಗ್ಯ ಉಲ್ಲಂಘನೆ, ಅಗತ್ಯ ವಸ್ತುಗಳ ಕಾಯ್ದೆ ಉಲ್ಲಂಘನೆ 1955ರ ಕಲಂ 3 ಮತ್ತು7ರ  ಕಾಯ್ದೆ ಉಲ್ಲಂಘನೆ, ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣ ಕಾಯ್ದೆ ಪದ್ಧತಿ ವಿಶೇಷ ಷರತ್ತು 14 ರಿಂದ 21ಬದ್ಧರಾಗಿರದೆ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸರಕಾರಕ್ಕೆ ಆಗುವ ನಷ್ಟವನ್ನು ಸರಿದೂಗಿಸಲು  ಟಿ ಎ ಪಿ ಸಿ ಎಮ್ ಎಸ್ ಗೆ ಕೊಡಬೇಕಾಗಿದ್ದ ಲಾಭಂಶ ಮತ್ತು ಸಹಾಯಧನದ ಮೊತ್ತ 1,57,52,266 ಕೋಟಿ ರೂ ಮುಟ್ಟುಗೊಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

About The Author