ಆರೋಗ್ಯ ಇಲಾಖೆಯಿಂದ ನಿಯೋಜನೆಗೊಂಡ ಅಧಿಕಾರಿಗೆ ಸಿಇಓ ಆಪ್ತ ಸಹಾಯಕ ಹುದ್ದೆ ! 12 ವರ್ಷ ಕಳೆದರೂ ಮಾತೃ ಇಲಾಖೆಗೆ ಮರಳದ ಅಧಿಕಾರಿ

ಯಾದಗಿರಿ : ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆಪ್ತ ಸಹಾಯಕರಾದ ಕಿಶನ್ ರಾಥೋಡ್ ಕಳೆದ ಹನ್ನೆರಡು ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಆರೋಗ್ಯ ಇಲಾಖೆಯಿಂದ ಪಂಚಾಯತ್ ರಾಜ್ ಇಲಾಖೆಗೆ ನಿಯೋಜನೆಗೊಂಡ ಅಧಿಕಾರಿಯಾಗಿದ್ದಾರೆ. ಇದರ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನಹರಿಸಬೇಕಿದೆ. ನಿಯೋಜನೆಗೊಂಡ ಅಧಿಕಾರಿ ಸುಮಾರು 12 ವರ್ಷಗಳಿಂಲೂ ಹೆಚ್ಚು ದಿನಗಳ ಕಾಲ ಜಿಲ್ಲಾ ಪಂಚಾಯಿತಿಯ ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನ್ನ ಮಾತೃ ಇಲಾಖೆಗೆ ಇನ್ನೂ ತೆರಳದೇ ಇರುವುದು ಆಶ್ಚರ್ಯಕರ?

ರಾಜಕೀಯ ಪ್ರಭಾವ ಬಳಸಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿಶನ್ ರಾಥೋಡ್ 2010ರ ಸುಮಾರಿಗೆ ಜಿಲ್ಲಾ ಪಂಚಾಯಿತಿಗೆ ನಿಯೋಜನೆಗೊಂಡ ನಂತರ ದ್ವಿತೀಯ ದರ್ಜೆ ಸಹಾಯಕ ಹುದ್ದೆಯಿಂದ 2016ರಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಬಡ್ತಿ ಪಡೆದಿದ್ದಾರೆ ಎನ್ನಲಾಗಿದೆ.ಆದರೂ ಮಾತೃ ಇಲಾಖೆಗೆ ಹೋಗದೆ ಇರುವುದು ಆಶ್ಚರ್ಯಕರ.

ಇದರಂತೆ ಇತರ ಇಲಾಖೆ ಅಧಿಕಾರಿಗಳು ಪಂಚಾಯತ್ ರಾಜ್ ಇಲಾಖೆಗೆ ನಿಯೋಜನೆಗೊಂಡು ಬರುತ್ತಿರುವುದು ಯಾಕೆ ಎನ್ನುವ ಪ್ರಶ್ನೆ ಕಾಡುತ್ತಿದೆ.ಪಂಚಾಯತ್ ರಾಜ್ ಇಲಾಖೆಯು ಸುಮಾರು 30 ಇತರ ಇಲಾಖೆಗಳನ್ನು ಒಳಗೊಂಡಿದ್ದು ಆರ್ಥಿಕವಾಗಿ ಹೆಚ್ಚಿನ ಅನುದಾನ ಪಂಚಾಯತ್ ರಾಜ್ ಇಲಾಖೆಗೆ ಬರುತ್ತಿದೆ. ಇದನ್ನು ಮನಗಂಡ ಇತರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಪಂಚಾಯತ್ ರಾಜ್ ಇಲಾಖೆಗೆ ಬರುತ್ತಿದ್ದಾರೆ. ಮುಂದೊಂದು ದಿನ ಪಂಚಾಯತ್ ರಾಜ್ ಇಲಾಖೆಯಲ್ಲಿ ಇತರ ಇಲಾಖೆಯಿಂದ ನಿಯೋಜನೆಗೊಂಡ ಅಧಿಕಾರಿಗಳು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನಹರಿಸಬೇಕಿದೆ.ನಿಯೋಜನೆಗೊಂಡ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಲು ಕ್ರಮ ಕೈಗೊಳ್ಳುತ್ತಾರೋ ಅಥವಾ ರಾಜಕೀಯ ಒತ್ತಡದಿಂದ ಅವರನ್ನೇ ಮುಂದುವರಿಸುತ್ತಾರೋ ಕಾದು ನೋಡಬೇಕಿದೆ.

About The Author