ಪಡಿತರ ಅಕ್ಕಿ ನಾಪತ್ತೆ ಪ್ರಕರಣ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲು ಬಿಜೆಪಿ ಆಗ್ರಹ

ಶಹಾಪುರ : ಶಹಪುರದಲ್ಲಿ ಅಕ್ಕಿ ನಾಪತ್ತೆ ಪ್ರಕರಣ ಈಗ ಬೆಳಗಾವಿಯ ಅಧಿವೇಶನಕ್ಕೂ ಮುಟ್ಟಿದೆ. ಯಾದಗಿರಿ ಜಿಲ್ಲಾ ಮತ್ತು ತಾಲೂಕು ಬಿಜೆಪಿ ಘಟಕದ ಮುಖಂಡರು ಶಹಪುರದಲ್ಲಿ ಅಕ್ಕಿ ಕಳ್ಳತನವಾಗಿರುವ ವಿಷಯವನ್ನು ಅಧಿವೇಶನದಲ್ಲಿ ಚರ್ಚಿಸಬೇಕೆಂದು ವಿರೋಧಪಕ್ಷದ ನಾಯಕರಾದ ಆರ್. ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಶಹಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೂಡ ಪೊಲೀಸ್ ಮತ್ತು ಇತರ ಅಧಿಕಾರಿಗಳು ಮಂದಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಉಸ್ತುವಾರಿ ಸಚಿವರ ಬೆಂಬಲಿಗರ ಕೈವಾಡವಿದೆ ಎಂದು ಆರೋಪಿಸಿದರು. ಕೂಡಲೇ ಸಿಐಡಿ ತನಿಖೆಗೆ ನೀಡಬೇಕೆಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಅಮೀನ್ ರೆಡ್ಡಿ ಅವರು ಪತ್ರಿಕಾ ಹೇಳಿಕೆ ನೀಡಿ ಅಕ್ಕಿ ನಾಪತ್ತೆ ಪ್ರಕರಣ ಗಂಭೀರವಾದ ಪ್ರಕರಣವಾಗಿದ್ದು, ನಗರದಲ್ಲಿ ಪದೇ ಪದೇ ಈ ಪ್ರಕರಣ ನಡೆಯುತ್ತಿವೆ.ಜಿಲ್ಲೆಯಲ್ಲಿ ಅಕ್ಕಿ ಪ್ರಕರಣ ತಾಲೂಕಿನಲ್ಲಿ ಪದೇ ಪದೇ ಕಳ್ಳತನವಾಗುತ್ತಿದ್ದು,ಸಚಿವರ ಹಿಂಬಾಲಕರ ಪ್ರಬಲ ಕೈವಾಡವಿದೆ. ನಿಷ್ಪಕ್ಷಪಾತವಾದ ತನಿಖೆಯಾಗಬೇಕಿದೆ.ಆದ್ದರಿಂದ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಮತ್ತು ರಾಜ್ಯಾಧ್ಯಕ್ಷರಾದ ವಿಜಯೇಂದ್ರರವರು ಅಕ್ಕಿ ನಾಪತ್ತೆ ಪ್ರಕರಣದ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷರು ಮನವಿಪತ್ರ ಸಲ್ಲಿಸಿ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ರಾಜೀನಾಮೆಗೆ ಒತ್ತಾಯಿಸಿದರು. ಅಕ್ಕಿ ಕಳ್ಳತನ ಪ್ರಕರಣವನ್ನು ಜಿಲ್ಲಾಧಿಕಾರಿಗಳು ತನಿಖೆ ಮಾಡುತ್ತೇನೆ ಎಂದು ಹೇಳಿದ್ದಾರೆ.ನಿಸ್ಪಕ್ಷಪಾತವಾದ ತನಿಖೆಯಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಅಧಿವೇಶನದಲ್ಲಿ ಚರ್ಚಿಸಿ ಕೂಡಲೇ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ನಗರ ಮಂಡಲ ಅಧ್ಯಕ್ಷರಾದ ದೇವೇಂದ್ರ ಕೊನೇರ, ತಾಲೂಕು ಮಂಡಲ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ, ಹಿರಿಯ ಬಿಜೆಪಿ ಮುಖಂಡರಾದ ಚಂದ್ರಶೇಖರ ಸುಬೇದಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಕಾಮ,ಡಾ.ಶಿವರಾಜ ದೇಶಮುಖ್,ಬಸವರಾಜ ವಿಭೂತಿಹಳ್ಳಿ, ರಾಜಶೇಖರ ಗೂಗಲ್, ಬಸವರಾಜ ಅರುಣಿ ಸೇರಿದಂತೆ ಬಿಜೆಪಿಯ ಮುಖಂಡರು ಕಾರ್ಯಕರ್ತರು ಇದ್ದರು.

About The Author