ಶಾಸಕರು ಎಐಸಿಸಿ ಕಾರ್ಯದರ್ಶಿ ಶ್ರೀಧರ್ ಬಾಬು ರವರಿಗೆ ಬಿಎಮ್ ಪಾಟೀಲರಿಂದ ಸನ್ಮಾನ

VADAGERA : ಇಂದು ಹೈದರಾಬಾದ ನಗರದ ಹೆಲ್ಲಾ ಹೋಟೆಲಿನಲ್ಲಿ ತೆಲಂಗಾಣ ಕಾಂಗ್ರೆಸ್ ಪಕ್ಷದ ಶಾಸಕರ ಶಾಸಕಾಂಗ ಸಭೆ ನಡೆಯಿತು.ಈ ಸಭೆಯಲ್ಲಿ ತೆಲಂಗಾಣ ರಾಜ್ಯದ ಮಂಥನಿ ವಿಧಾನಸಭಾ ಕ್ಷೇತ್ರದಿಂದ ಎಐಸಿಸಿ ಕಾರ್ಯದರ್ಶಿ ಶ್ರೀಧರ್ ಬಾಬುರವರು ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದಿಂದ 30,405 ಮತಗಳ ಅಂತರದಿಂದ ಜಯಗಳಿಸಿದ ಶ್ರೀಧರ್ ಬಾಬುರವರು ಕಳೆದ ಎರಡು ವರ್ಷಗಳಿಂದೆ ರಾಜ್ಯದ ಕಲ್ಬುರ್ಗಿ ವಿಭಾಗದ ಉಸ್ತುವಾರಿಗಳಾಗಿದ್ದರು.ಶ್ರೀಧರ ಬಾಬು ರವರನ್ನು ರಾಜ್ಯದ ಕೆಪಿಸಿಸಿ ವಕ್ತಾರರು ಹಾಗು ಮಂಥನಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಬಿ ಎಂ ಪಾಟೀಲರು ಹೈದರಾಬಾದಿನ ಹೆಲ್ಲಾ ಹೋಟೆಲಿನಲ್ಲಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದು ಅವರನ್ನು ಸತ್ಕರಿಸಲಾಯಿತು ಎಂದು ಬಿಎಂ ಪಾಟೀಲರು ತಿಳಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಅಖಿಲ್ ಅಹ್ಮದ್ ಇದ್ದರು.

Leave a Reply

Your email address will not be published. Required fields are marked *