ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ದಲಿತಪರ ಸಂಘಟನೆಗಳಿಂದ ದಿಡೀರ್ ಪ್ರತಿಭಟನೆ

Yadagiri ಶಹಾಪುರ : ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ಆವರಣದಲ್ಲಿ ರವಿವಾರದಂದು ದಲಿತಪರ ಸಂಘಟನೆಗಳ ಮುಖಂಡರು ಸಂವಿಧಾನ ಶಿಲ್ಪಿ ಡಾ : ಬಾಬಾಸಾಹೇಬ ಅಂಬೇಡ್ಕರವರ ನಾಮಫಲಕ ಹಾಕುವುದರ ಮುಖಾಂತರ  ಮಹಾಪರಿನಿರ್ವಾಣ ದಿನಾಚರಣೆಗೆ ಸಜ್ಜುಗೊಳಿಸಿದ್ದಾರೆ. ಬಸ್ ಡಿಪೋ ವ್ಯವಸ್ಥಾಪಕರು ನಾಮಫಲಕ ತೆರವುಗೊಳಿಸುವಂತೆ ಸ್ಳಳೀಯ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
****
 ನಾಮಫಲಕ ಕುರಿತು ಚರ್ಚಿಸಲು ತಹಶೀಲ್ ಕಛೇರಿಯಲ್ಲಿ  ತಹಶಿಲ್ದಾರರು ಉಮಾಕಾಂತ ಹಳ್ಳೆ  ದಲಿತಪರ ಮುಖಂಡರ ಸಭೆ ನಡೆಸಿದರು. ಸಭೆಯಲ್ಲಿ ನಾಮಫಲಕ ತೆರವು ಗೊಳಿಸಬೇಕು ಎಂದು ಅಧಿಕಾರಿಗಳು ಮನವರಿಕೆ ಮಾಡಿದರು‌.   ನಾಮಫಲಕದ ಸ್ಥಳದಲ್ಲೆ ದಲಿತಪರ ಮುಖಂಡರು ಯಾವುದೆ ಕಾರಣಕ್ಕೂ ನಾಮಫಲಕ ತೆರವುಗೊಳಿಸಲು ಬಿಡೆವು ಎಂದು ಪಟ್ಟು ಹಿಡಿದು  ದಿಡೀರನೆ ಪ್ರತಿಭಟನೆಗಿಳಿದಿದ್ದಾರೆ.ಈ ಹಿಂದೆ ಜಿಲ್ಲಾಧಿಕಾರಿಗಳು ಖಾಸಗಿ ಮೈದಾನ ತೊರಿಸಿ ದಲಿತಪರ ಸಂಘಟನೆಗಳನ್ನು ತಪ್ಪುದಾರಿಗೆಳಿದಿದ್ದು,ಪ್ರತಿಮೆ ನಿರ್ಮಾಣಕ್ಕೆ ಸೂಕ್ತ ಸ್ಥಳ ನೀಡುವುದಾಗಿ ಅಧಿಕಾರಿಗಳು ಸುಳ್ಳು ಭರವಸೆಗಳನ್ನು ನೀಡಿ ಇಂದಿನವರೆಗೂ ಬಾಬಾ ಸಾಹೇಬರ ಪ್ರತಿಮೆ ಸ್ಥಾಪನೆಗೆ ಸ್ಥಳಾವಕಾಶ ನೀಡಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡರು ಬಸ್ ನಿಲ್ದಾಣದ ಆವರಣದಲ್ಲೆ ಪ್ರತಿಮೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರೂ ಸ್ಪಂಧನೆ ಮಾಡುತ್ತಿಲ್ಲ. ಬಾಬಾಸಾಹೇಬರ ಮಹಾಪರಿನಿರ್ವಾಹಣಾ ದಿನವನ್ನು ಬಸ್ ನಿಲ್ದಾಣದ ಆವರಣದ ನಾಮಫಲಕದ ಸ್ಥಳದಲ್ಲೆ ಮಾಡುವುದಾಗಿ ಮುಖಂಡರು ವಾಗ್ದಾನ ಮಾಡಿದರು. ನಾಮಫಲಕ ತೆರವುಗೊಳಿಸುವುದಕ್ಕೆ ಆಡಳಿತ ವರ್ಗ ಮುಂದಾದಲ್ಲಿ ಉಗ್ರ ಹೋರಾಟಕ್ಕಿಳಿಯ ಬೇಕಾಗುತ್ತದೆ ಎಂದು ಎಚ್ಚರಿಸಿದರು.
*****
ನಾಮಪಲಕ ಸ್ಥಳದಲ್ಲಿ ಮಹಾ ಪರಿನಿರ್ವಾಣ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದ್ದು,ಪೋಲೀಸ್ ರಕ್ಷಣೆ ನೀಡಬೇಕೆಂದು ಪೋಲಿಸ್ ಠಾಣೆಗೆ ಮನವಿ ಪತ್ರ ಸಲ್ಲಿಸಿದ್ದಾರೆ.
*****
ಈ ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ  ಮಲ್ಲಿಕಾಜುನ ಪೂಜಾರಿ ಶ್ರೀಶೈಲ್ ಹೊಸಮನಿ ನಾಗಣ್ಣ ಬಡಿಗೇರ ಭೀಮರಾಯ ಹೊಸಮನಿ ಶುಭಾಶ ತಳವಾರ ಶಿವಪುತ್ರ ಜವಳಿ ಶಿವುಕುಮಾರ ತಳವಾರ ಶರಣರಡ್ಡಿ ಹತ್ತಿಗೂಡೂರ ಹೊನ್ನಪ್ಪ ಗಂಗನಾಳ ಮರೆಪ್ಪ ಕನ್ಯಾಕೊಳೂರ ಬಸವರಾಜ ಗುಡಿಮನಿ ಮರೆಪ್ಪ ಕ್ರಾಂತಿ ಜಯರಡ್ಡಿ ಹೊಸಮನಿ ಮಹಾದೇವ ದಿಗ್ಗಿ ಮಲ್ಲಿನಾಥ ಬಡಿಗೇರ ಮಲ್ಲಿಕಾರ್ಜುನ ಹುರಸಗುಂಡಗಿ ಮರೆಪ್ಪ ಜಾಲಿಮೆಂಚಿ ಶರಣಪ್ಪ ಅನವಾರ ಬಲಭೀಮ ಬೇವಿನಳ್ಳಿ ಸಿದ್ದು ಮುಂಡಾಸ್ ಚಂದ್ರು ಬೇವಿನಳ್ಳಿ ರಾಚಪ್ಪ ಬಾರಿಗಿಡ ಸುಭಾಷ ಹುರಸಗುಂಡಗಿ ಸಂತೋಷ ಗುಂಡಳ್ಳಿ ಲಕ್ಷ್ಮಣ ಹಳಿಸಗರ ಮಹಾದೇವಪ್ಪ ಮಂಡಗಳ್ಳಿ ಸೇರಿದಂತೆ ಅನೇಕ ದಲಿತಪರ ಸಂಘಟನೆಗಳ ಮುಖಂಡರು ಅಭಿಮಾನಿಗಳು ಕಾರ್ಯಕರ್ತರು ಭಾಗವಹಿಸಿದ್ದರು.
*****
ಬಿಜೆಪಿ ಸರ್ಕಾರ ಅವಧಿಯಲ್ಲಿ ದಿನ.19-06-2022ರಂದು ಅಂದಿನ ಸಾರಿಗೆ ಸಚಿವರಿಗೆ ಮತ್ತು ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಬಾಬಾ ಸಾಹೇಬರ ನಾಮಫಲಕ ಹಾಕುವಂತೆ ಮನವಿ ಪತ್ರ ಸಲ್ಲಿಸಲಾಗಿತ್ತು.ಅವಕಾಶ ನೀಡಲಿಲ್ಲ.ಪ್ರಸ್ತುತ ಗ್ರಾಮೀಣ ಬಸ್ ನಿಲ್ದಾಣದಲ್ಲಿ ಹಾಕಿದ ಬಾಬಾ ಸಾಹೇಬರ ನಾಮಫಲಕವನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ದಲಿತ ಪರ ಸಂಘಟನೆಗಳು ಎಚ್ಚರಿಸಿದ್ದಾರೆ.
*****
ತಾಲೂಕು ಸಾರಿಗೆ ಇಲಾಖೆಯು ಡಿ.4 ರಂದು ಶಹಾಪುರ ಗ್ರಾಮಾಂತರ ಬಸ್ ನಿಲ್ದಾಣದ ಆವರಣದಲ್ಲಿ ಅನಧಿಕೃತವಾಗಿ ಮಧ್ಯರಾತ್ರಿಯಲ್ಲಿ ಬಾಬಾಸಾಹೇಬರ ನಾಮಫಲಕ ಅಳವಡಿಸಿರುವುದನ್ನು ತೆರವುಗೊಳಿಸಲು ಸ್ಥಳಿಯ ಪೋಲಿಸ್ ಠಾಣೆಗೆ ಸಾರಿಗೆ ತಾಲೂಕು ವ್ಯವಸ್ಥಾಪಕರು ದೂರು ನೀಡಿರುತ್ತಾರೆ ಎನ್ನಲಾಗುತ್ತಿದೆ.ನಗರ ಪೋಲೀಸ್ ಠಾಣಾ ಪಿಐ  ದಿ,೪-೧೨-೨೦೨೩ರಂದು ಹಿಂಬರಹ ನೀಡಿ ತೆರವುಗೊಳಿಸಲು ಮುಂದಾದಲ್ಲಿ ಸೂಕ್ತ ರಕ್ಷಣೆ ನೀಡುತ್ತೇವೆ ಎಂದು ಪ್ರತಿಕ್ರಿಯೆ ಪತ್ರ ನೀಡಿದ್ದಾರೆ ಎಂದು ತಿಳಿದುಬಂದಿದೆ.

About The Author