ಸಹೃದಯಿ ವಿನೋದ್ ಪಾಟೀಲರದು ಕಾಳಜಿದಾಯಕ ಮನಸ್ಸು, ಜನ ಪ್ರತಿನಿಧಿಯಾಗಲು ಸಿದ್ಧವಾಗಬೇಕಿದೆ !

ಶಹಪುರ : ಮಾನವೀಯ ಹೃದಯದ ಶ್ರೀಮಂತ, ಸದಾ ಜನರ ಮಧ್ಯೆ ಬೆರೆತು ಬಡವರ ಬಳಿ ನೆಲೆಸಿ ಸಮಸ್ಯೆಗಳನ್ನು ಆಲಿಸುತ್ತಿರುವ ವ್ಯಕ್ತಿ ವಿನೋದ್ ಪಾಟೀಲ್ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನದೋರನಹಳ್ಳಿಯವರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿನೋದ್ ಪಾಟೀಲರು ನೆನಪಾಗುವುದು ಕಷ್ಟಕಾಲದಲ್ಲಿ. ನಮಗೆ ಸರ್ವ ಸಮಸ್ಯೆಗಳು ಎದುರಾದಾಗ ಮಾಲಿಪಾಟೀಲ್ ಕುಟುಂಬದ ಕುಡಿ ನೂರಾರು ಎಕರೆ ಆಸ್ತಿಯನ್ನು ಬಡವರಿಗೆ ಧಾನ ಮಾಡಿದ ಕುಟುಂಬ. ಕುಲಕಸುಬು ಹೊಂದಿರುವವರೆಗೂ ಭೂಮಿ ಧಾನ ಮಾಡಿದ ರೂಪದಲ್ಲಿ ಕೊಟ್ಟಿದ್ದಾರೆ. ಸುಮಾರು ನಾಲ್ಕು ಎಕರೆ ಹೊಲದಲ್ಲಿ ಅವರ ದೊಡ್ಡ ಅರಮನೆ ಇದೆ. ಆ ಸಮಯದಲ್ಲಿ ಧಾನದಲ್ಲಿ ಅತಿ ಎತ್ತರದ ಕೈ ಆ ಕುಟುಂಬದ್ದು.ಅವರ ಕುಡಿಯೇ ವಿನೋದ್ ಪಾಟೀಲ್.

ವೈದ್ಯಲೋಕದಲ್ಲಿ ಮೊದಲು ನೆನಪಾಗುವುದು ವಿನೋದ್ ಪಾಟೀಲರೇ. ಯಾದಗಿರಿ ಜಿಲ್ಲೆಯ ಯಾವುದೇ ಹಳ್ಳಿಗಳಿಂದಲೂ ಭಯಂಕರ ಕಾಯಿಲೆ,ವಾಹನಗಳ ಅಪಘಾತವಾದಾಗ, ಗಂಭೀರ ಪರಿಸ್ಥಿತಿ ರೋಗಿಯು ತಲುಪಿದಾಗ ಕಲ್ಬುರ್ಗಿ ನಗರಕ್ಕೆ ಬಂದರೆ ನಮಗೆ ನೆನಪಾಗುವುದು ವಿನೋದ್ ಪಾಟೀಲ್. ಕಲಬುರ್ಗಿ ನಗರದಲ್ಲಿ ಹೆಸರುವಾಸಿಯಾದ ಯಾವುದೆ ಆಸ್ಪತ್ರೆಗಳಲ್ಲಿ ವಿನೋದ್ ಪಾಟೀಲರ ಹೆಸರಿದೆ. ಯಾದಗಿರಿಯಿಂದ ಯಾರೇ ಕಲಬುರ್ಗಿಗೆ ದಾಖಲಾದರು ರೋಗಿಗಳ ಸಮಸ್ಯೆಗಳ ರಕ್ಷಣೆ ವಿನೋದ್ ಪಾಟೀಲರದಾಗಿರುತ್ತದೆ. ಕಲಬುರ್ಗಿಗೆ ಬಂದ ನಂತರದ ಮೊದಲ ಫೋನ್ ಕಾಲ್ ಹೋಗುವುದು ವಿನೋದ್ ಪಾಟೀಲರಿಗೆ. ಸ್ವತಹ ಅವರೇ ಬಂದು ವೈದ್ಯರ ಜೊತೆ ಮಾತನಾಡಿ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಸಂಪೂರ್ಣ ಗುಣಪಡಿಸುವವರಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ ಮನೆಗೆ ಕಳಿಸುವ ತನಕ ಸಂಪೂರ್ಣ ಕಾಳಜಿವಹಿಸುತ್ತಾರೆ. ಈ ವ್ಯಕ್ತಿಯ ಮನೋಭಾವನೆ ಎಂತಹದು ಎನ್ನುವುದು ನಾವು ಅರಿತುಕೊಳ್ಳಬೇಕಿದೆ. ಇದು ಒಬ್ಬ ಜನಪ್ರತಿನಿಧಿ ಮಾಡುವ ಕೆಲಸ. ಒಬ್ಬ ಸಾಮಾನ್ಯ ಮನುಷ್ಯ ಮಾಡುತ್ತಿದ್ದಾನೆ. ಇಂತಹ ವ್ಯಕ್ತಿಯ ಕಾಳಿಜಿದಾಯಕ ವ್ಯಕ್ತಿ ಕಲ್ಬುರ್ಗಿಯಲ್ಲಿಯೇ ವಾಸವಿದ್ದು, ಯಾದಗಿರಿ ಜಿಲ್ಲೆಯ ದೋರನಹಳ್ಳಿ ಗ್ರಾಮದವರಾಗಿದ್ದು, ಬಡವರ ಕಾಳಜಿದಾಯಕ ಮನೋ ಹೃದಯದ ಶ್ರೀಮಂತ ವಿನೋದ್ ಪಾಟೀಲರದು. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಯಾಗಿ ಬೆಳೆಯಲಿ ಎಂದು ಆಶಿಸೋಣ.

About The Author