ಭಾರತದ ಸಂವಿಧಾನ ಸರ್ವ ಜನಾಂಗದ ಅಭಿವೃದ್ಧಿ ಬಯಸುವ ಶ್ರೇಷ್ಠ ಗ್ರಂಥ : ಮಂಜುಳಾ ಅಸುಂಡಿ

ದೇವದುರ್ಗ: ಭಾರತದ ಸಂವಿಧಾನ ಸರ್ವ ಜನಾಂಗದ ಅಭಿವೃದ್ಧಿಯನ್ನು ಬಯಸುವ ಶ್ರೇಷ್ಠ ಗ್ರಂಥ. ಇಂತಹ ಮಹಾನ್ ಗ್ರಂಥವನ್ನು ನಾವೆಲ್ಲ ಅಧ್ಯಯನ ಮಾಡಿ, ಅದರ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಾಲೂಕು ಪರಿಶಿಷ್ಟ ಪಂಗಡದ ಕಲ್ಯಾಣ ಅಧಿಕಾರಿಗಳಾದ ಮಂಜುಳಾ ಅಸುಂಡಿ ಹೇಳಿದರು. ತಾಲೂಕಿನ ಮಸರಕಲ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನನ್ನಂತಹ ಸಾಮಾನ್ಯ ಮಹಿಳೆ ಅಧಿಕಾರಿಯಾಗಿದ್ದೇನೆ ಎಂದರೆ ಇದಕ್ಕೆ ಕಾರಣ ಸಂವಿಧಾನ.

ಈ ಸಂವಿಧಾನವು ಶಾಸನಗಳನ್ನು ರೂಪಿಸುವ, ಜಾರಿಗೆ ತರುವ ಕಾರ್ಯವನ್ನು ಮಾಡುತ್ತದೆ.ಹೀಗಾಗಿ ಪ್ರತಿಯೊಬ್ಬರು ಸಂವಿಧಾನದ ಕುರಿತಾಗಿ ಜಾಗೃತಿ ಹೊಂದುವುದು ತುಂಬಾ ಅಗತ್ಯವಿದೆ.ಈ ಕಾರ್ಯಕ್ಕೆ ಮುಂದಾಗಿರುವ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯನ್ನು ಅಭಿನಂದಿಸುವುದಾಗಿ ತಿಳಿಸಿದರು.
MRHS ರಾಜ್ಯಾಧ್ಯಕ್ಷರಾದ ಶಿವರಾಯ ಅಕ್ಕರಕಿ ಅವರು ಸಂವಿಧಾನದ ರಚನೆ,ಧ್ಯೇಯೋದ್ದೇಶಗಳನ್ನು ತಿಳಿಸಿದರು. ದಲಿತ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಸವರಾಜ ಮೇತ್ರಿ ಕಾರ್ಯಕ್ರಮದ ಮಾರ್ಗದರ್ಶಕ ನರಸಿಂಗರಾವ್ ಸರಕೀಲ್ ಮಾತನಾಡಿದರು.

ಕಾರ್ಯಕ್ರಮದ ಪ್ರಧಾನ ಸಂಚಾಲಕ ಬಸವರಾಜ ಬ್ಯಾಗವಾಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ವಸತಿ ಶಾಲೆಯ ಪ್ರಾಂಶುಪಾಲ ಶರಣಬಸಯ್ಯ ಹಿರೇಮಠ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಭಾರತ ಸಂವಿಧಾನ,ಮಕ್ಕಳಿಗಾಗಿ ಸಂವಿಧಾನ,ಸಂವಿಧಾನ ಓದು ಪುಸ್ತಕಗಳನ್ನು ಹಾಗೂ ಸಂವಿಧಾನ ಪೀಠಿಕೆಯನ್ನು ವಸತಿ ಶಾಲಾ ಗ್ರಂಥಾಲಯಕ್ಕೆ ಉಚಿತವಾಗಿ ವಿತರಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಮಂಡಳಿ ಸದಸ್ಯ ಅಲಿಪಾಷಾ,ರೈತ ಮುಖಂಡ ಸುನಂದಕುಮಾರ ಬಳೆ ಮತ್ತಿತರರು ಉಪಸ್ಥಿತರಿದ್ದರು.ನಾಗರಾಜ ಶಿಕ್ಷಕರು ಸ್ವಾಗತಿಸಿದರೆ,ಸಂಗೀತ ಶಿಕ್ಷಕ ನಾಗರೆಡ್ಡಿ ನಿರೂಪಿಸಿದರು. ಶಿಕ್ಷಕಿ ಜುಬೇದಾ ಬೇಗಂ ವಂದಿಸಿದರು.

About The Author