ಕನಕದಾಸರ ಚಿಂತನೆಗಳು ಸರ್ವರಿಗೂ ಆದರ್ಶ

Yadagiri ವಡಗೇರಾ : ಕನಕದಾಸರ ಭಕ್ತಿ ಸಾರ ಚಿಂತನೆಗಳು ಸರ್ವರಿಗೂ ಆದರ್ಶಪ್ರಾಯವಾಗಿವೆ. ಅವೈಜ್ಞಾನಿಕ ಜಾತಿ ಪದ್ಧತಿ ಮೂಢನಂಬಿಕೆ ಅನಿಷ್ಠ ಪದ್ಧತಿಗಳ ನಿವಾರಣೆಗೆ ಸಾಕ್ಷಿಯಾಗಿವೆ ಎಂದು ಕಸ್ತೂರಿ ಬಾ ಬಾಲಕಿಯರ ಮುಖ್ಯ ಶಿಕ್ಷಕಿ ಎಂಕೆ ಶೃತಿ ಹೇಳಿದರು. ಪಟ್ಟಣದ ಕಸ್ತೂರಿಬಾ ಬಾಲಕಿಯರ ವಸತಿ ನಿಲಯದಲ್ಲಿ ಭಕ್ತ ಕನಕದಾಸರ 536ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 16ನೇ ಶತಮಾನದಲ್ಲಿ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ದೇಶ ಸಂಚಾರ ಮಾಡಿ ಜನರಲ್ಲಿರುವ ಜಾತ್ಯಾತೀತತೆಯನ್ನು ತೊಲಗಿಸಿ ಜಾಗೃತಿ ಮೂಡಿಸಿದ ಮಹಾನ್ ಸಂತ ಭಕ್ತ ಕನಕದಾಸರು ಎಂದು ನುಡಿದರು. ಕಸ್ತೂರಿ ಬಾ ಬಾಲಕಿಯರ ವಸತಿ ನಿಲಯ ಪಾಲಕಿ ಚಂದ್ರಕಲಾ ಗೋಗಿ ಮಾತನಾಡಿ,ಜಾತಿ ಮತಗಳನ್ನು ಮೀರಿದ ಮಾನವ ಧರ್ಮವೆ ದೊಡ್ಡದು ಎನ್ನುವುದು ಅವರ ಪ್ರತಿಪಾದವಾಗಿತ್ತು. ದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದವರು ಭಕ್ತ ಕನಕದಾಸರು. ಹಲವಾರು ಕೀರ್ತನೆಗಳನ್ನು ರಚಿಸುವ ಮೂಲಕ ವಿಶ್ವಚೇತನ ಎಂಬ ಬಿರುದನ್ನು ಪಡೆದಂತ ಮಹಾನ್ ವ್ಯಕ್ತಿ. ತಮ್ಮ ಭಕ್ತಿಯ ಮೂಲಕ ಶ್ರೀ ಕೃಷ್ಣ ಪರಮಾತ್ಮನನ್ನು ಒಲಿಸಿಕೊಂಡಂತ ದೈವ ಭಕ್ತ ಕನಕದಾಸರು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಂತ ಎನ್ಜಡಿ, ದಿಲ್ಶಾದ,ಪವಿತ್ರ,ಬಸ್ಸಮ್ಮ, ಅಂಬಿಕಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author