ಮೊಣಕಾಲು ಬದಲಿ ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ: 50 ರೋಗಿಗಳು ನೊಂದಣಿ, ಮೂತ್ರಪಿಂಡ ಕಲ್ಲುಗಳು, ಕ್ಯಾನ್ಸರ್ ತಪಾಸಣೆ ಶಿಬಿರ ಶೀಘ್ರದಲ್ಲಿ ಆಯೋಜನೆ : ಡಾ.ಯಲ್ಲಪ್ಪ ಹುಲ್ಕಲ್

ಶಹಪುರ : ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ತಪಾಸಣಾ ಶಿಬಿರ ಯಶಸ್ವಿಯಾಗಿ ನೆರವೇರಿತು.ಆಡಳಿತಾದಿಕಾರಿ ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್ ಮಾತನಾಡುತ್ತಾ,ದಿ.28 ರಂದು ನಾರಾಯಣ ಹೆಲ್ತ್ ಸಿಟಿ ಬೆಂಗಳೂರು ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶಹಪುರ ಇವರ ಸಹಯೋಗದೊಂದಿಗೆ ಸುವ್ಯವಸ್ಥಿತವಾಗಿ ಆಯೋಜಿಸಿರುವ ಉಚಿತ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ತಪಾಸಣಾ ಶಿಬಿರಕ್ಕೆ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಸಾರ್ವಜನಿಕರಿಂದ ಸ್ಪಂದನೆ ದೊರೆತಿದ್ದು, ಯಾದಗಿರಿ ಶಹಾಪುರ ಹಳಿಸಗರ ಸೇರಿದಂತೆ ಸುತ್ತಮುತ್ತಲಿನ ಗೋಗಿ, ಬೀಗುಡಿ, ಸಗರ ಹತ್ತಿಗೂಡೂರು, ವಿಭೂತಿಹಳ್ಳಿ, ಶಿರವಾಳ, ಸನ್ನತಿ ನಾಲವಾರ, ವಾಡಿ ಹಾಗೂ ಮುಂತಾದ ಕಡೆಗಳಿಂದ ಸಾರ್ವಜನಿಕರು ಭಾಗವಹಿಸಿದ್ದರು. ಹಲವಾರು ವರ್ಷಗಳಿಂದ ನಿರಂತರ ಸಮಸ್ಯೆಯಿಂದ ಬಳಲುತ್ತಿರುವ ವಯೋವೃದ್ಧರು, ಮಹಿಳೆಯರು ಪುರುಷರು, ಮಧ್ಯ ವಯಸ್ಕರು, ಸೇರಿದಂತೆ ನಿರಂತರ ಸಮಸ್ಯೆಯಿಂದ ಬಳಲುತ್ತಿರುವ ಮೊಣಕಾಲು ನೋವು, ಮೊಣಕಾಲಿನ ಊತ, ಬಿಗಿತ ಮತ್ತು ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಚಲನೆ, ದೀರ್ಘಕಾಲದ ಮೊಳಕಾಲಿನ ಅಸ್ಥಿರತೆ, ದೀರ್ಘಕಾಲದ ಜಂಟಿ ನೋವು ಇಂಥ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನಾರಾಯಣ ಹೆಲ್ತ್ ಸಿಟಿ ಬೆಂಗಳೂರು ರವರ ತಪಾಸಣೆ ನಡೆಸಿದರು ಎಂದು ಹೇಳಿದರು.

ನುರಿತ ವೈದ್ಯಕೀಯ ತಂಡದವರಾದ ಡಾ.ಲೋಕೇಶಗೌಡ, ಆರ್ಥೋಪೆಡಿಕ್ ಸರ್ಜನ್,ಡಾ.ವಿಜಯಶ್ರೀ CSR ಮುಖ್ಯಸ್ಥರು, ದೇವರಾಜ್ ಮುಖ್ಯಸ್ಥರು,ಹಿರಿಯರಾದ ಗೋಪಾಲ್ ಅಂಚಾಟಿ, ಶ್ರೀ ಚೇತನ್ ಹುಬ್ಬಳ್ಳಿ BMD ವಿಭಾಗ ಹಾಗೂ 8 ಜನ ವೈದ್ಯರ ತಂಡ, ರಕ್ತದೊತ್ತಡ ತಪಾಸಣೆ, ಮಧುಮೇಹ, ಯೂರಿಕ್ ಆಸಿಡ್ ಪರೀಕ್ಷೆ, ಸಿಬಿಸಿ,ಅತಿ ಅವಶ್ಯವಿರುವ 150 ರೋಗಿಗಳಿಗೆ ಎಕ್ಸರೇ ಒಳಗೊಂಡಂತೆ ಆಗಮಿಸಿದ ಎಲ್ಲರಿಗೂ BMD ಪರೀಕ್ಷೆ ಮಾಡಲಾಯಿತು. ಆಸ್ಪತ್ರೆ ವತಿಯಿಂದ ಉಚಿತ ಔಷಧಿಗಳು ನೀಡಲಾಯಿತು. ಆರ್ಥೋಪೆಡಿಕ್ ಸಮಾಲೋಚನೆ, ಒಳಗೊಂಡಂತೆ 400 ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ವಿಶೇಷವಾಗಿ ಬಹುತೇಕರು, ಮೂಳೆ ಸವೆತ, ಸಂಪೂರ್ಣವಾಗಿ ಮೂಳೆ ಸವೆತ, ಸಮಸ್ಯೆಯಿಂದ ಬಳಲುತ್ತಿರುವವರು, ತುರ್ತಾಗಿ ಮೊಣಕಾಲು ಬದಲಿ ಚಿಕಿತ್ಸೆಗೆ ಅರ್ಹ 50 ರೋಗಿಗಳು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದರು.

ಶಹಾಪೂರಿನ ಜನತೆಗೆ ಅತಿ ಅವಶ್ಯವಿರುವ ಇಂತಹ ವಿಶೇಷ ಉಚಿತ ಆರೋಗ್ಯ ಶಿಬಿರಗಳಾದ , ಮೂತ್ರಪಿಂಡದ ಹರಳು(ಕಿಡ್ನಿ ಸ್ಟೋನ್ಸ್) ಸಮಸ್ಯೆ, ಮಹಿಳೆಯರಿಗಾಗಿ ಕ್ಯಾನ್ಸರ್ ತಪಾಸಣಾ ಶಿಬಿರ, ಶೀಘ್ರದಲ್ಲಿಯೇ ಆಯೋಜಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು, ಜೊತೆಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಒಳಗಾದಲ್ಲಿ ಆಗುವ ಉಪಯೋಗಗಳು, ಮತ್ತು ಜನರಲ್ಲಿ ಇರುವ ತಪ್ಪು ಕಲ್ಪನೆಗಳ ಬಗ್ಗೆ, ನೆರೆದಿರುವ ಜನರಿಗೆ, ವಿಡಿಯೋ ಪ್ರತ್ಯಕ್ಷತೆಯ ಮೂಲಕ ಮಾಹಿತಿ ನೀಡಲಾಯಿತು ಎಂದರು.

ಈ ಸಂದರ್ಭದಲ್ಲಿ ಡಾ.ಜಗದೀಶ ಉಪ್ಪಿನ್, ಡಾ. ಗಂಗಾಧರ ಚಟ್ಟರಕಿ,ಡಾ.ವೆಂಕಟೇಶ್ ಭೈರವಡಗಿ, ಡಾ.ಮೋಹಸಿನ್, ಡಾ.ರಾಘವೇಂದ್ರ ಡಾ.ಪ್ರೇಮ್ ಕುಮಾರ್ ಹಾಗೂ ಇತರ ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆ ಎಲ್ಲಾ ವಿಭಾಗದ ಸಿಬ್ಬಂದಿಗಳ ಸಹಕಾರದಿಂದ ಹಾಗೂ ಸಾರ್ವಜನಿಕರಿಂದ ಸಂಪೂರ್ಣ ಸಹಕಾರ ನೀಡಿರುವುದರಿಂದ ಈ ಶಿಬಿರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.

About The Author