ಭಾರತದ ಅತ್ಯುನ್ನತ ಧರ್ಮಚಿಂತಕ ಶ್ರೀಶಂಕರಾಚಾರ್ಯರು:ಪೂಜ್ಯ ಗಜಾನನ ಮಹಾರಾಜರು

 ಶಹಾಪುರ ನಗರದ ಹಳಪೇಟೆಯಲ್ಲಿ ಶಂಕರ ಸೇವಾ ಸಮಿತಿ ವತಿಯಿಂದ ಶ್ರೀ ಶಂಕರಜಯ0ತ್ಯೋತ್ಸವ ಕಾರ್ಯಕ್ರಮದಲ್ಲಿ ಕೂಡಲಿಗಿ ಪೂಜ್ಯರಾದ ಗಜಾನನ ಮಹಾರಾಜರು ಪೂಜೆ ನೆರವೇರಿಸಿ, ಆಶೀರ್ವಚನ ನೀಡಿದರು

ಶಹಾಪುರ : ಶ್ರೀಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೆತ ಸಿದ್ಧಾಂತ ಮಾನವ ಜ್ಞಾನನಿಧಿಗೆ ಸಿಕ್ಕ ಅಮೂಲ್ಯ ಕೊಡುಗೆ ಎಂದು ಕೂಡಲಗಿ ಪೂಜ್ಯರಾದ ಗಜಾನನ ಮಹಾರಾಜರರು ತಿಳಿಸಿದರು.ನಗರದ ಹಳೆಪೇಟೆಯ ಶ್ರೀರಾಘವೇಂದ್ರ ಮಠದ ಪರಿಮಳ ಪ್ರಸಾದ ಕಲ್ಯಾಣ ಮಂಟಪದಲ್ಲಿ ಶಂಕರ ಸೇವಾ ಸಮಿತಿಯಿಂದ ಶ್ರೀ ಶಂಕರಚಾರ್ಯಜಯ0ತ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ ಸಂದರ್ಭದಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಪೂಜೆ ನೆರವೇರಿಸಿ, ನಂತರ ಆಶೀರ್ವಚನ ನೀಡಿದ ಪೂಜ್ಯರು ಹಿಂದೂ ಸಮಾಜಕ್ಕೆ ಸಂಕಷ್ಟಗಳು ಬಂದ ಕಾಲಘಟ್ಟದಲ್ಲಿ ಶ್ರೀ ಶಂಕರರ ಅವತಾರ ಅತ್ಯಂತ ಪ್ರಾಮುಖ್ಯತೆ ಪಡೆದಿದೆ, ವೈದಿಕ ಪರಂಪರೆಯ ಧರ್ಮಕಾರ್ಯಗಳು ಇಂದು ಅವಿಚ್ಛಿನ್ನವಾಗಿ ನಡೆದಿದ್ದು ಅದಕ್ಕೆ ಶ್ರೀಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ, ಅದ್ವೈತ ಸಿದ್ಧಾಂತ ಪ್ರತಿಪಾದನೆ ಮೂಲಕ ಭಾರತದ ಅತ್ಯುನ್ನತ ಧರ್ಮ ಚಿಂತಕರೆನಿಸಿದರು ಅಂತಹ ಗುರುವಿನ ಸ್ಮರಣೆ, ಅವರ ಸ್ತೋತ್ರಗಳು ನಿತ್ಯನೂತನವಾಗಿವೆ, ಪ್ರತಿಯೊಬ್ಬರು ಯಾವುದೇ ಫಲಾಪೇಕ್ಷೆಯಿಲ್ಲದೆ ಧರ್ಮ ಸೇವಾಕಾರ್ಯದಲ್ಲಿ ಮುಂದುವರೆಯಬೇಕು ಎಂದರು.

ಈ ಸಂದರ್ಭದಲ್ಲಿ ಚಂದ್ರಕಾ0ತ ಭಟ್, ಅಪ್ಪರಾವ್ ಕುಲಕರ್ಣಿ, ರಾಮಚಂದ್ರ ಗಂವ್ಹಾರ, ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷ ರಾಘವೇಂದ್ರ ಸರ್ನಾಡ, ಕಿರಣ ಭಟ್ ಜೋಷಿ, ಶ್ರೀಪಾದರಾವ್ ಕುಲ್ಕರ್ಣಿ, ಪ್ರಭಾಕರ ಗೌಡೂರ,ವಾಸುದೇವ ಸಗರ್, ನರಸಿಂಹಾಚಾರ್ಯ ರೊಟ್ಟಿ, ಕಿಟ್ಟು ದೋರನಹಳ್ಳಿ, ಲಕ್ಷ್ಮಣರಾವ್ ಕನ್ಯಾಕೋಳೂರು, ಸುಧೀಂದ್ರ ಯಾಟಗಲ್, ಶ್ರೀವಲ್ಲಭ, ಪ್ರಮೋದ ಕುಲಕರ್ಣಿ, ಶಾಮಸುಂದರ ಜೋಶಿ, ರಾಮರಾವ ಸಗರ್, ವಾದಿರಾಜ ಕುಲ್ಕರ್ಣಿ, ಪ್ರದೀಪ,ಪವನ, ಧೀರೇಂದ್ರ, ಸತ್ಯನಾರಾಯಣ ದೇಸಾಯಿ, ಕೋನೇರಾಚಾರ್ಯ, ರಾಮಕೃಷ್ಣ ಕುಲ್ಕರ್ಣಿ, ಸೇರಿದಂತೆ ಇತರರು ಇದ್ದರು.

About The Author