ಶಹಾಪುರ:ತಾಲೂಕಾಡಳಿತದಿಂದ ಸರಳವಾಗಿ ಶ್ರೀ ಶಂಕರಜಯ0ತ್ಯೋತ್ಸವ ಧರ್ಮಮಾರ್ಗದಲ್ಲಿ ಮುನ್ನಡೆಯಲು ಶ್ರೀ ಶಂಕರಾಚಾರ್ಯರ ತತ್ವಗಳು ಸ್ಪೂರ್ತಿ


ಶಹಾಪುರ ತಾಲೂಕ ಆಡಳಿತ ವತಿಯಿಂದ ಶ್ರೀ ಶಂಕರಾಚಾರ್ಯ ಜಯಂತೋತ್ಸವ ನಿಮಿತ್ಯ ಗ್ರೇಡ್-೨ ತಹಸಿಲ್ದಾರ ಸೇತುಮಾಧವ ಪೂಜೆ ಸಲ್ಲಿಸಿದರು

ಶಹಾಪುರ: ಹಿಂದೂ ಸಮಾಜದ ಪುನರುತ್ಥಾನಕ್ಕಾಗಿ ಅವತಾರವೆತ್ತಿದ ಶ್ರೀಶಂಕರಾಚಾರ್ಯರು ಅದ್ವೆತ ಸಿದ್ಧಾಂತ ಪ್ರತಿಪಾದಿಸಿ, ಮನುಕುಲಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಪ್ರಮುಖರಾದ ಶ್ಯಾಮಸುಂದರಭಟ್ ಜೋಶಿ ತಿಳಿಸಿದರು.ತಾಲೂಕು ಆಡಳಿತ ವತಿಯಿಂದ ತಹಶೀಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಂಕರಾಚಾರ್ಯರ ಎಂಟನೇ ವರ್ಷದಲ್ಲಿ ಉಪನಯನ ಸಂಸ್ಕಾರದ ನಂತರ ಪ್ರಖಾಂಡ ಪಂಡಿತರಾಗಿ ಮಹಿಮಾನ್ವಿತರಾದರು, ಅವರ ತತ್ವಗಳನ್ನು ಪಾಲಿಸುವ ಮೂಲಕ ಸರ್ವರು ಸ್ಪೂರ್ತಿ ಪಡೆಯಬೇಕು ಎಂದರು.

ಇದೇ ಸಂದರ್ಭದಲ್ಲಿ ಹಿರಿಯರಾದ ಚಂದ್ರಕಾ0ತ ಭಟ್ ರಾಜಪುರೋಹಿತ್ ಅಭಿಪ್ರಾಯ ಹಂಚಿಕೊ0ಡು ಪ್ರಸ್ತುತ ಸಂದರ್ಭದಲ್ಲಿ ದೇಶದಲ್ಲಿ ಶಾಂತಿ ನೆಲೆಸಲು ಪ್ರತಿಯೊಬ್ಬರು ನ್ಯಾಯ ನೀತಿ ಧರ್ಮದ ಹಾದಿಯಲ್ಲಿ ದಾರ್ಶನಿಕರ ವಿಚಾರಗಳನ್ನು ಅನುಸರಿಸಿಕೊಂಡು ಮುನ್ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಗ್ರೇಡ್-೨ ತಹಸಿಲ್ದಾರ ಸೇತುಮಾಧವ ಅವರು ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅವರಿಗೆ ಶಂಕರ ಸೇವಾ ಸಮಿತಿ ವತಿಯಿಂದ ತಹಸೀಲ್ದಾರರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಂದ್ರಕಾ0ತ ಶಿರಸ್ತೇದಾರರು, ಶ್ರೀಕಾಂತ ಸೇರಿದಂತೆ ಹಿರಿಯರಾದ ಸೂರ್ಯಕಾಂತ ಭಟ್, ಕಿರಣ್ ಭಟ್, ಪ್ರವೀಣ ಮಠ, ದಾಮೋದರ, ಅನಂತರಾವ ಮದ್ರಿಕಿ, ಪಾಂಡುರ0ಗಾಚಾರ್ಯ, ಆನಂದ ತೀರ್ಥ, ಸುಬ್ಬಾರಾವ್, ನಾರಾಯಣಾಚಾರ್ಯ, ಕಿಟ್ಟು ದೋರನಹಳ್ಳಿ, ಕರುಣಾ ಸಾಗರ ಕೊಡಮನಹಳ್ಳಿ, ವಾದಿರಾಜ ಕುಲ್ಕರ್ಣಿ, ಸೇರಿದಂತೆ ಇತರರು ಇದ್ದರು.

 

About The Author