ಸಮಾನತೆ ಎನ್ನುವುದು ಮನಸ್ಸಿನಲ್ಲಿ ಬಂದಾಗ ಸದೃಢವಾದ ಭಾರತ ನಿರ್ಮಾಣ ಮಾಡಲು ಸಾಧ್ಯ :  ಸಚಿವ ದರ್ಶನಾಪುರ

ಶಹಪುರ ; ಸಮಾನತೆ ಎನ್ನುವುದು ಮನಸ್ಸಿನಲ್ಲಿ ಬಂದಾಗ ಸದೃಢ ಭಾರತ ನಿರ್ಮಾಣ ಮಾಡಲು ಸಾಧ್ಯ. ಮಾನವ ಧರ್ಮ ಒಂದೆ ಜಾತಿಭೇದ ಮರೆತು ನಾವೆಲ್ಲರೂ ಒಂದೇ ಎನ್ನುವ ಭಾವನೆ ಮನಸ್ಸಿನಲ್ಲಿ ಮೂಡಬೇಕು. ಅಂತಹ ಭಾವನೆಯನ್ನು ಕನಕದಾಸರು ಹೊಂದಿದ್ದರು ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ಇಂದು ನಗರದ ನಗರಸಭೆ ಆಭರಣದಲ್ಲಿ ತಾಲೂಕು ಆಡಳಿತ ಮತ್ತು ನಗರಸಭೆ ಸಂಯುಕ್ತಾಶ್ರಯದಲ್ಲಿ 536ನೇ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವುದು ಮೂಲಕ ಉದ್ಘಾಟಿಸಿ ಮಾತನಾಡಿದರು.

ತನ್ನ ಭಕ್ತಿಯಿಂದ ಉಡುಪಿಯಲ್ಲಿರುವ ಶ್ರೀ ಕೃಷ್ಣನ ಮೂರ್ತಿಯಲ್ಲಿ ತನ್ನ ಕಡೆಗೆ ತಿರುಗಿಸಿಕೊಂಡು ದರ್ಶನ ಪಡೆದಂತಹ ಕನಕದಾಸರು. ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಲಿಲ್ಲ. ಭಾರತ ಹಲವು ಜಾತಿ ಧರ್ಮ ಭಾಷೆಗಳಿಂದ ಕೂಡಿದ ದೇಶ. ನಾವೆಲ್ಲರೂ ಭಾರತೀಯರು ಎನ್ನುವ ಭಾವನೆ ನಮ್ಮಲ್ಲಿ ಮೂಡಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಡಾ. ಭೀಮಣ್ಣ ಮೇಟಿ, ಮಧ್ಯ ಮತ್ತು ಆಧುನಿಕ ಭಾರತದ ಕಾಲಘಟ್ಟದಲ್ಲಿ ಹಲವಾರು ಸಂತ ಶರಣರು ಆಗಿ ಹೋದರು. ಅಂತಹ ಕಾಲದ ಕನಕದಾಸರು ಕೂಡ ಒಬ್ಬರು.16ನೇ ಶತಮಾನದಲ್ಲಿ ಮೂಢನಂಬಿಕೆ ಜಾತಿ ಕುಲವನ್ನು ಬದಿಗೊತ್ತಿ ನಾವೆಲ್ಲ ಒಂದೇ ಎನ್ನುವ ಧರ್ಮವನ್ನು ಸಾರಿದ ಸಂತರು ಕನಕದಾಸರು. ಅಂತಹವರ ಆದರ್ಶಗಳನ್ನು ಪ್ರಸ್ತುತದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದು ಸರ್ಕಾರ ಇಂತಹ ವ್ಯಕ್ತಿಗಳ ಆಚರಣೆಯನ್ನು ಆಚರಿಸುತ್ತಿದೆ ಎಂದರು.ಕಾಲೇಜು ಉಪನ್ಯಾಸಕರಾದ ಹಯಾಳಪ್ಪ ಸುರಪುರ ಕನಕದಾಸರ ಜೀವನ ಚರಿತ್ರೆಯ ಬಗ್ಗೆ ತಿಳಿಸಿಕೊಟ್ಟರು.

ಆರಂಭದಲ್ಲಿ ಚರಬಸವೇಶ್ವರ ಕಮಾನಿನಿಂದ ನಗರ ಸಭೆಯವರಿಗೆ ಕನಕದಾಸ ಮೂರ್ತಿಯನ್ನು ಸಂಭ್ರಮದಿಂದ ಮೆರವಣಿಗೆ ಮಾಡಲಾಯಿತು. ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರರಾದ ಉಮಾಕಾಂತ್ ಹಳ್ಳೆ, ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ ಬಿರೆದಾರ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ ಪೂಜಾರಿ, ಸಾಯ್ಬಣ್ಣ ಪುರ್ಲೆ, ರಾಯಪ್ಪ ಚೆಲುವಾದಿ, ನಿಂಗಣ್ಣ ನಾಯ್ಕೋಡಿ, ಸೇತುಮಾಧವ,ನಾನಾಸಾಹೇಬ್ಎಡ್ಬು, ಗೌಡಪ್ಪಗೌಡ ಆಲ್ದಾಳ, ಶಾಂತಪ್ಪ ಕಟ್ಟಿಮನಿ,ಖಾಲಿದ್, ಮಹಾದೇವಪ್ಪ ಸಾಲಿಮನಿ,ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಶರಬಣ್ಣ ರಸ್ತಪುರ, ಶ್ರೀಶೈಲ ಬಿರಾದರ, ಮರೆಪ್ಪ ಪ್ಯಾಟಿ, ಮುನಿಯಪ್ಪಗೌಡ ಸೇರಿದಂತೆ ಇತರ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author