ಕನಕದಾಸರು ಒಂದೇ ಜಾತಿಗೆ ಸೀಮಿತವಾಗದ ಮಹಾನ್ ಚೇತನ : ಶ್ರೀನಿವಾಸ್ ಚಾಪಲ್

ವಡಗೇರಾ : ಕನಕದಾಸರು ಒಂದು ಜಾತಿಗೆ ಸೀಮಿತವಾಗದೆ ಜನಸಾಮಾನ್ಯರ ಜೊತೆಗೆ ಬೆರೆತು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ವ್ಯಕ್ತಿ ಎಂದು ತಹಶೀಲ್ದಾರ್ ಶ್ರೀನಿವಾಸ್ ಚಾಪಲ್ ಹೇಳಿದರು. ತಾಲೂಕಿನ ಆಡಳಿತದ ವತಿಯಿಂದ ಭಕ್ತ ಕನಕದಾಸರ 536ನೇ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ದೇಶ ಸಂಚಾರ ಮಾಡಿ ಜನರಲ್ಲಿರುವ ಜಾತ್ಯಾತೀತತೆಯನ್ನು ಹೋಗಲಾಡಿಸಿದಂತಹ ಮಹಾನ್ ಶ್ರೇಷ್ಠ ಸಂತ ತಮ್ಮ ಭಕ್ತಿಯ ಮೂಲಕ ಶ್ರೀ ಕೃಷ್ಣ ಪರಮಾತ್ಮನನ್ನೇ ವಲಿಸಿಕೊಂಡಂತ ಮಹಾನ್ ದೈವಭಕ್ತ. ಅವರ ತತ್ವಾದರ್ಶಗಳು ಸರ್ವಕಾಲಿಕ ಶ್ರೇಷ್ಠ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಟ್ಟಣದ ಮಕ್ಕಳ ತಜ್ಞರಾದ ಡಾ.ಸುಭಾಷ್ ಕರಣಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕನಕದಾಸರು ಸರ್ವಜಾತಿಗಳನ್ನು ಅಪ್ಪಿಕೊಂಡು ನಾವೆಲ್ಲ ಒಂದೇ. ಕುಲ ಕುಲವೆಂದು ಹೊಡೆದಾಡದಿರಿ ಎಂದು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಉತ್ತಮ ಸಂದೇಶಗಳನ್ನು ಸಾರಿ ಸಮಾಜದಲ್ಲಿ ಬದಲಾವಣೆಯನ್ನು ತಂದಂತ ಮಹಾನ್ ವ್ಯಕ್ತಿ ಭಕ್ತ ಕನಕದಾಸರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುರುಬ ಸಂಘದ ನಿರ್ದೇಶಕರಾದ ದೇವೇಂದ್ರಪ್ಪ ಕಡೆಚೂರು ಸಿಬ್ಬಂದಿಗಳಾದ ಕಂದಾಯ ನಿರೀಕ್ಷಕರಾದ ಸಂಜಿವ ಕುಮಾರ್ ಕಾವಲಿ ಬಸವರಾಜ ಮಾದ್ವಾರ್ ಸಾಹೇಬರೆಡ್ಡಿ ನಾಗರಾಜ್ ನಹಿಮ್ ಸಾಬ್ ರವಿ ನೀಲಹಳ್ಳಿ ಚೆನ್ನಯ್ಯಸ್ವಾಮಿ ಮಲ್ಲೇಶ ನಾಟೇಕಾರ ದೇವುನಾಯಕ ಬಸವನಗರ ಸುನಿತಾ ಹೇರುಂಡಿ ಬಸವರಾಜ ಸೊನ್ನದ ನಿಂಗಣ್ಣ ಜಡಿ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ತಾಲೂಕ ಅಧ್ಯಕ್ಷ ದೇವು ಜಡಿ ಬಸಣ್ಣಗೌಡ ಜಡಿ ವಿದ್ಯಾಧರ್ ಜಾಕ ರುಕ್ಮುದ್ದೀನ್ ದೇವದುರ್ಗ ನಿಂಗಪ್ಪ ಕುರ್ಕಳಿ ಭೀಮಣ್ಣ ಬೂದಿನಾಳ ಮಲ್ಲು ಜಡಿ ಮರಿಲಿಂಗ ಗೋನಾಲ ಹಣಮಂತ ಉಪ್ಪಾರ ತಿರುಮಲ ಮುಸ್ತಾಜೀರ್ ಭೀಮಣ್ಣ ಹೂಗಾರ ವೆಂಕಟೇಶ್ ಇಟಿಗಿ ಸಾಬರೆಡ್ಡಿ ಗೊರವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

About The Author