ಗೋಗಿ.ಕೆ ಗ್ರಾಮದಲ್ಲಿ ಗೌತಮ ಬುದ್ಧನ ಪ್ರತಿಮೆ ಅನಾವರಣ

ಶಹಾಪುರ: ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಮಹಾತ್ಮ ಗೌತಮ ಬುದ್ಧರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು,ದೇಶ ಸುಭಿಕ್ಷೆಯಾಗಿರಲು ಶಾಂತಿಮಾರ್ಗ ಪ್ರಸ್ತುತ ಅಗತ್ಯತೆಯಾಗಿದೆ ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.ತಾಲೂಕಿನ ಗೋಗಿ.ಕೆ ಗ್ರಾಮದಲ್ಲಿ ಮಹಾತ್ಮ ಗೌತಮ ಬುದ್ಧ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ವರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿಶಾಸಕ ಗುರು ಪಾಟೀಲ ಶಿರವಾಳ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು, ಜ್ಞಾನಪ್ರಕಾಶ ಸ್ವಾಮೀಜಿ, ಪೂಜ್ಯ ಬಂತೇಜಿ ಮತ್ತು ಪ್ರಮುಖರಾದ ಮಲ್ಲಪ್ಪ ಬೀರನೂರ ಚಂದಪ್ಪ ಸಿತ್ನಿ ಮಲ್ಲಿಕಾರ್ಜುನ ಉಳಂಡಗೇರಿ ಮಲ್ಲಿಕಾರ್ಜುನ ಪೂಜಾರಿ ನೀಲಕಂಠ ಬಡಿಗೇರ ಬಾಬುಗೌಡ ಭೂತಾಳಿ ಮಲ್ಲಣ್ಣ ಜೈಭೀಮ ದೇವಿಂದ್ರ ಹೆಗ್ಗಡೆ ಶಂಕರ ಸಿಂಘೆ ಚಂದಪ್ಪ ಗೌಡ ಚನ್ನಪ್ಪಗೌಡ ಹೋತಪೇಟೆ ಖಾಜಾಸಾಬ್ ಶ್ರೀಶೈಲ ಹೊಸಮನಿ ರವಿಕುಮಾರ್ ಮೂಲಿಮನಿ ಹಣುಮಂತ ಬೌದ್ಧ ಉಪಾಸಕರಾದ ಮಲ್ಲಪ್ಪ ಕಾಂಬ್ಳೆ ದತ್ತಪ್ಪಾ ಗೊಂಗಿನ ಇದ್ದರು.

Leave a Reply

Your email address will not be published. Required fields are marked *