ಸರಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಿ ಶಾಸಕ ಚನ್ನಾರೆಡ್ಡಿ ಪಾಟೀಲ

ವಡಗೇರಾ : ಸರ್ಕಾರ ಹಿಂದುಳಿದವರ, ದಿನದಲಿತರ ಏಳಿಗೆಗೆ ಬದ್ಧವಾಗಿದೆ ಎಂದು ಶಾಸಕರಾದ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.ತಾಲ್ಲೂಕಿನ ಬಸವಂತಪೂರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ 2021-22ನೇ ಸಾಲಿನ ಪಾದರಕ್ಷ ತರಬೇತಿಯ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಸರಕಾರದ ಯೋಜನೆಗಳನ್ನು ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗುವಂತೆ ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಮರಿಸ್ವಾಮಿ ಪೂಜಾರಿ ಗೋನಾಲ ವಹಿಸಿದ್ದರು. ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷರಾದ ಲಿಂಗರಾಜ ತಾರಪೈಲ್ ಕಲಬುರಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದರ ಜೊತೆಗೆ ಆರ್ಥಿಕವಾಗಿ ಮುಂದೆ ಬರಬೇಕು ಸಮಾಜದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವ ಮೂಲಕ ಸರಕಾರದಿಂದ ಬರುವ ಎಲ್ಲಾ ರೀತಿಯ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಕೊಡಿಸುವ ಭರವಸೆ ನೀಡಿದರು.

ವೇದಿಕೆ ಮೇಲಿನ ಎಲ್ಲಾ ಮಹಾತ್ಮರ ಭಾವಚಿತ್ರಗಳಿಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿದ್ದಲಿಂಗರೆಡ್ಡಿ ಸಾಹು ಮಾಲಾರ್ಪಣೆ ಮಾಡಿದರು. ಸಲಕರಣೆಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾರ, ಕಾಂಗ್ರೆಸ್ ಮುಖಂಡರಾದ
ಶರಣಪ್ಪ ಕ್ಯಾತನಾಳ,ಮಾಳಿಂಗರಾಯ ಕಂದಹಳ್ಳಿ ಹಾಗೂ ಯಾದಗಿರಿ ಲೀಡ್ಕರ್ ಸಂಯೋಜಕರಾದ ಅರ್ಜುನ್,ಶಾಸಕರ ಆಪ್ತ ಸಹಾಯಕರಾದ ರೇವಣಸಿದ್ದಯ್ಯ ಹೊರಪೇಟ ಮಠ,ಎನ್ ಎಸ್ ಯು ಐ ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ ತೆಳಿಗೇರಿ, ಜಗ್ಗು ಅನ್ವಾರ, ಸಾಬಣ್ಣ ಕುರಿಹಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

About The Author