ಶಹಪುರ : ಬಡವರಿಗೆ ಸಲ್ಲುವ ಪಡಿತರ ಅಕ್ಕಿಯನ್ನು ನಾಪತ್ತೆ ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ತಾಲೂಕಿನ ಆರಬೋಳ ಕಲ್ಯಾಣ ಮಂಟಪದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು. ಬಡವರು ಹಸುವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ನಮ್ಮ ಸರ್ಕಾರ ಬಿಪಿಎಲ್ ಕಾರ್ಡ್ ಗಾರರಿಗೆ ಅಕ್ಕಿಗಳನ್ನು ನೀಡುತ್ತಿದ್ದು, ಅದನ್ನು ಕಳವು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.ಈ ಪ್ರಕರಣವನ್ನು ಜಿಲ್ಲಾಡಳಿತವೇ ಬೇದಿಸಿದ್ದು, ಜಿಲ್ಲಾಡಳಿತದಿಂದ ಅತಿ ಶೀಘ್ರವೇ ಕ್ರಮ ಕೈಗೊಳ್ಳಲಾಗುತ್ತದೆ. ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದರು.

ಪಡಿತರ ಅಕ್ಕಿ ಕಾಣೆಯಾಗಿರುವುದನ್ನು ಜಿಲ್ಲಾಡಳಿತವೂ ಗಂಭೀರವಾಗಿ ಪರಿಗಣಿಸಿದ್ದು ಜಿಲ್ಲಾಡಳಿತ ವತಿಯಿಂದ ತನಿಖಾ ತಂಡವನ್ನು ರಚಿಸಲಾಗಿದ್ದು, ಆದಷ್ಟು ಬೇಗ ಸತ್ಯ ಹೊರಬರಲಿದೆ.ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಿದ್ದೇವೆ.
ಡಾ.ಬಿ.ಸುಶೀಲಾ
ಜಿಲ್ಲಾದಿಕಾರಿಗಳು ಯಾದಗಿರಿ.
Post Views: 130