ಶಹಾಪುರ : ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವಲ್ಲಿಸಂವಿಧಾನ ಮೇಲ್ಪಂಕ್ತಿಯಾಗಿದ್ದು, ನಮ್ಮ ದೇಶದ ಸಂವಿಧಾನ ವಿಶ್ವಮಾನ್ಯತೆ ಪಡೆದಿದೆ. ಭಾರತದ ಸಂವಿಧಾನ ಸಮಾನತೆಯನ್ನು ಸಾಕಾರಗೊಳಿಸುವುದಾಗಿದೆ. ಪ್ರತಿಯೊಬ್ಬರು ಸಂವಿಧಾನವನ್ನು ಬದುಕಿನ ಕ್ರಮವಾಗಿ ರೂಡಿಸಿಕೊಳ್ಳಬೇಕು ಎಂದು ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ಯಮಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ವೈಷ್ಣವಿ ಸಭಾಂಗಣದಲ್ಲಿ ಸಮ ಸಮಾಜ ಚಿಂತನಾ ವೇದಿಕೆಯಿಂದ ಭಾರತದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ವಿಚಾರ ಸಂಕಿರಣ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಯಕ ಜೀವಿಗಳು, ದಲಿತರು, ದಮನಿತರು, ಮಹಿಳೆಯರು ಸೇರಿದಂತೆ ಎಲ್ಲರನ್ನೊಳಗೊಂಡ ಜನಸಮುದಾಯದ ಪಾಲಿಗೆ ಸಂವಿಧಾನ ಬೆಳಕು ನೀಡಿದೆ.
ಎಲ್ಲ ಸಮಾಜದ ವರ್ಗದವರಿಗೆ ಅವರಿಗಿರುವ ಹಕ್ಕುಗಳನ್ನು ಕಲ್ಪಿಸುವ ಮೂಲಕ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಸಂವಿಧಾನ ಸಮಸಮಾಜ ನಿರ್ಮಾಣಕ್ಕೆ ಮೈಲುಗಲ್ಲಾಗಿದೆ, ಪ್ರತಿಯೊಬ್ಬರೂ ಸಂವಿಧಾನವನ್ನು ತಿಳಿದುಕೊಳ್ಳುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು ಎಂದರು.
ಉಪನ್ಯಾಸಕರಾದ ತಿಮ್ಮಯ್ಯ ಪುರ್ಲೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ‍್ಯ ದೊರಕಿ ವರ್ಷಗಳೇ ಕಳೆದಿವೆ.ಸಂವಿಧಾನ ತಿಳುವಳಿಕೆ ಪ್ರಸ್ತುತ ಅಗತ್ಯವಾಗಿದ್ದು, ಸಂವಿಧಾನವನ್ನು ರಕ್ಷಿಸಬೇಕು. ನಮ್ಮೆಲ್ಲರನ್ನು ಅದು ರಕ್ಷಿಸುತ್ತದೆ. ಈ ಗುರುತು ಹೆಚ್ಚು ಜಾಗೃತಿಯ ಕಾರ್ಯಕ್ರಮ ನಡೆಯಬೇಕು ಎಂದರು.
ಭಾರತ ಸಂವಿಧಾನದ ಆಶಯ ಮತ್ತು ಸಂವಿಧಾನ ಉಳಿಯುವುದಾಗಿ ನಮ್ಮ ಮುಂದಿನ ಸವಾಲುಗಳು ಕುರಿತು ಸಾಹಿತಿ ಡಾ.ಗಾಳೆಪ್ಪ ಪೂಜಾರಿ ಮತ್ತು ಉಪನ್ಯಾಸಕ ಭೀಮರಾಯ ಅಂಚೆಸೂಗುರ ಪ್ರಾಸ್ತಾವಿಕವಾಗಿ ವಿಷಯ ಪ್ರಸ್ತುತ ಪಡಿಸಿದರು.
ಧಮ್ಮಗಿರಿಯ ಪೂಜ್ಯ ಬಂತೇ ಮೆತ್ತಪಾಲ, ನಿವೃತ್ತ ಜಂಟಿ ಆಯುಕ್ತ ವಾಯ್.ಪಿ.ಚಿಪ್ಪಾರ, ಹನುಮೆಗೌಡ ಮರಕಲ್, ಡಾ. ಭೀಮಣ್ಣ ಮೇಟಿ, ಗಿರೆಪ್ಪ ಗೌಡ ಬಾಣಿತಿಹಾಳ, ಮಹಾದೇವಪ್ಪ ಸಾಲಿಮನಿ, ಮಲ್ಲಿಕಾರ್ಜುನ ಪೂಜಾರಿ, ಮಾನಸಿಂಗ ಚೌವ್ಹಾಣ, ಚಂದಪ್ಪ ಸೀತಿನಿ, ಹೆಚ್.ಎಂ.ದೊಡ್ಡಮನಿ, ಶಾಂತಪ್ಪ ಕಟ್ಟಿಮನಿ, ಸೈಯದ್ ಇಸಾಕ್ ಹುಸೇನ್, ಶರಣಪ್ಪ ಭೂತಾಳೆ, ಗ್ಯಾನಪ್ಪ ಅಣಬಿ, ಸಾಹಿತಿ ಸಿದ್ರಾಮ ಹೊನ್ಕಲ್, ಮರಿಯಪ್ಪ ಕನ್ಯಕೋಳೂರು, ಶರಣಪ್ಪ ಮುಂಡಾಸ, ಸುಭಾಷ ತಳವಾರ, ಹೊನ್ನಪ್ಪ ಗಂಗನಾಳ, ಚಂದ್ರಶೇಖರ ಗುತ್ತೇದಾರ, ಮರಿಲಿಂಗ ಶಿರವಾಳ, ಸಾಯಬಣ್ಣ ಪರ‍್ಲೆ, ಮರೆಪ್ಪ ಪ್ಯಾಟಿ, ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ವಿವಿಧ ಸಮಾಜಗಳ ಧುರೀಣರು, ಯುವ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು.ಶ್ರೀಶೈಲ ಹೊಸ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಭೀಮರಾಯ ತಳವಾರ ನಿರೂಪಿಸಿದರು, ಪರಶುರಾಮ ಹೊಸ್ಮನಿ ಸ್ವಾಗತಿಸಿದರು, ಸಂಗಣ್ಣ ಗೊಂದೇನೂರ್ ವಂದಿಸಿದರು.