ಸಮಾಜದ ಸರ್ವತೋಮುಖ ಅಭಿವೃದ್ಧಿಗೊಳ್ಳಲು ಇತರ ಸಮುದಾಯಗಳ ಬೆಂಬಲ ಅಗತ್ಯ

ಶಹಾಪುರ: ಒಂದು ಸಮಾಜ ಸರ್ವತೋಮುಖ ಅಭಿವೃದ್ಧಿಗೊಳ್ಳಲು ಇತರ ಸಮಾಜಗಳ ಬೆಂಬಲ ಅಗತ್ಯ. ಮಹರ್ಷಿ ವಾಲ್ಮೀಕಿ ನಾಯಕರ ಸಮಾಜ ಇಂದು ಎಲ್ಲ ಹಂತದಲ್ಲಿಯೂ ಸಶಕ್ತ, ಪ್ರಬುದ್ಧಗೊಂಡಿದೆ. ನೂತನವಾಗಿ ಆಯ್ಕೆಯಾದ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಜಿಲ್ಲಾಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ್ ಅವರು  ಸಮಾಜದ ಸರ್ವತೋಮುಖ ಬೆಳವಣಿಗೆ ಜವಾಬ್ದಾರಿ. ಅದನ್ನು ಸರಿಯಾಗಿ ನಿಭಾಯಿಸುವ ಶಕ್ತಿ ಹೊಂದಿದ್ದಾರೆ ಎಂದು ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಶರಣು ಗದ್ದುಗೆ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ನಾಯಕರ ಸಂಘ ತಾಲೂಕ ಸಮಿತಿ ಹಾಗೂ ನಾಗರಿಕರ  ವತಿಯಿಂದ ಆಯೋಜಿಸಲಾದ ನೂತನ ಅಧ್ಯಕ್ಷರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,
ವಾಲ್ಮೀಕಿ ಸಮಾಜ ಪುರಾತನ ಕಾಲದಿಂದಲೂ ತನ್ನದೇಯಾದ ಇತಿಹಾಸ ಹೊಂದಿದೆ. ನಾಯಕ ಶ್ರೇಷ್ಠ ಶ್ರಮ ಜೀವಿಗಳು. ಇಡೀ ವಿಶ್ವಕ್ಕೆ ಶ್ರೇಷ್ಠ ಗ್ರಂಥ ನೀಡಿದ ಸಮಾಜವಾಗಿದೆ.ಸಮುದಾಯ, ಸಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಬೆಳೆಯಬೇಕಾದರೆ ಅನ್ಯ ಜಾತಿಯ ಸಹಕಾರ ಬೆಂಬಲ ಅಗತ್ಯ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ ಅವರು, ಸಮುದಾಯದ ಹಿರಿಯ ಕಿರಿಯರನ್ನು ಸಮಾನ ದೃಷ್ಟಿಕೋನದಿಂದ ನೋಡಿದಾಗ ಮತ್ತು ಪ್ರತಿಯೊಬ್ಬರ ಮನಸ್ಸು ಅರಿತಾಗ ಮಾತ್ರ ಸಮಾಜ ಬೆಳೆಯಲು ಸಾಧ್ಯ.ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವಾಗುವ ಮೂಲಕ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸೋಣ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ನೂತನ ಜಿಲ್ಲಾಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ ಅವರು, ಎಲ್ಲರೂ ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ನಾನು ಚಿರಋಣಿ. ನಮ್ಮ ಸಮಾಜ ಹಾಗೂ ಸಹೋದರ ಸಮಾಜದ ಜೊತೆ ಪರಸ್ಪರ ಸಹಕಾರ ಸ್ನೇಹ ಸಂಬಂಧದಿಂದ  ಇರುವುದರ ಜೊತೆ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಅತ್ಯಗತ್ಯ ಎಂದು ಅವರು ತಿಳಿಸಿದರು.

ತಾಲೂಕ ಕ್ರೀಡಾಂಗಣಕ್ಕೆ ಏಕಲವ್ಯನಾಮಕರಣಕ್ಕೆ ಮನವಿ.ತಾಲೂಕ ಕ್ರೀಡಾಂಗಣಕ್ಕೆ ಏಕಲವ್ಯ ಅವರ ಹೆಸರಿಡಬೇಕು ಎನ್ನುವುದು ನಮ್ಮ ಸಮಾಜ ವರ್ಷಗಳಿಂದಲೂ ಮನವಿ ಸಲ್ಲಿಸುತ್ತಾ ಬಂದಿದೆ. ಈಗ ನಮ್ಮ ಸಮಾಜದ ಎಲ್ಲಾ ಪ್ರಮುಖರು ಸೇರಿ ಸಚಿವರಿಗೆ ಮನವಿ ಮಾಡಿ ಮಾಡಿಕೊಳ್ಳೋಣ ಎಂದು ಸಮಾರಂಭದಲ್ಲಿ ಎಲ್ಲರೂ ಬಹುಮತದಿಂದ ತೀರ್ಮಾನ ಕೈಗೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಎಪಿಎಂಸಿ ನಾಮನಿರ್ದೇಶನ ಹಾಗೂ ಕೊಲಿ ಸಮಾಜದ ಜಿಲ್ಲಾ ಮುಖಂಡ ಸಣ್ಣ ನಿಂಗಪ್ಪ ನಾಯ್ಕೋಡಿ,ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಹಣಮಂತರಾಯ ದೊರೆ ದಳಪತಿ, ಹಿರಿಯ ನ್ಯಾಯವಾದಿ ಹನುಮೇಗೌಡ ಮರ್ಕಲ್ ಮಾತನಾಡಿದರು.ಸಮಾಜದ ಹಿರಿಯ ಮುಖಂಡ ರಾಮಚಂದ್ರ ಕಾಶಿರಾಜ, ರವಿ ಯಕ್ಷಿಂತಿ, ಬಸವರಾಜ ಬಾಚುವಾರ, ಭೀಮಶಂಕರ್ ಇಬ್ರಾಹಿಂಪುರ್, ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ತಾಲೂಕ ಕಾರ್ಯದರ್ಶಿ, ಹಣಮಂತರಾಯ ದೊರೆ ಟೋಕಾಪುರ್, ಬಸಣ್ಣ ಬಂಗಿ, ಶೇಖರ್ ದೊರೆ, ಎಸ್ ಟಿ ನೌಕರರ ಸಂಘದ ಅಧ್ಯಕ್ಷ ಮಹಾಂತೇಶ್ ದೊರೆ, ಉಪತಹಸಿಲ್ದಾರ್ ಸಂಗಮೇಶ್, ಅರಣ್ಯ ಇಲಾಖೆಯ ಶ್ರೀಧರ್ ಯಕ್ಷಿಂತೀ, ಶ್ರೀನಿವಾಸ್ ನಾಯಕ್, ದೇವು ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.

About The Author