ಅನ್ನ ಭಾಗ್ಯದ ಅಕ್ಕಿಗೆ ಕನ್ನ! ಸರ್ಕಾರಿ ಗೋದಾಮಿನಲ್ಲಿನ 6077 ಕ್ವಿಂಟಲ್ ಪಡಿತರ ಅಕ್ಕಿ ಮಾಯ! ಪ್ರಕರಣ ದಾಖಲು

ಆಹಾರ ಇಲಾಖೆಯ ನಿರ್ದೇಶಕರಾದ ಭೀಮರಾಯ ನೇತೃತ್ವದ ತಂಡ ಗೋದಾಮಿನ ಪಡಿತರ ಅಕ್ಕಿಯನ್ನು ಪರಿಶೀಲಿಸುತ್ತಿರುವುದು
ಶಹಪುರ : ತಾಲೂಕಿನ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನಿ. ಸರಕಾರಿ ಉಗ್ರಾಣದಲ್ಲಿರುವ ಬಡವರ ಪಾಲಿನ ಭಾಗ್ಯದ 6077 ಕ್ವಿಂಟಲ್ ನಷ್ಟು ಪಡಿತರ ಅಕ್ಕಿ ಮಾಯವಾಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಅನ್ನಭಾಗ್ಯದ ಪಡಿತರ ಅಕ್ಕಿ ಕಳುವಾಗಿರುವುದರಿಂದ ಸಚಿವರಿಗೆ ಮುಜುಗರ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸರಕಾರ ಬಡವರಿಗೆ ಸಹಕಾರಿಯಾಗಲೆಂದು ಪ್ರತಿ ತಿಂಗಳು ಪಡಿತರ ಬಿಪಿಎಲ್ ಕಾರ್ಡ್ಗಾರರಿಗೆ ವಿತರಿಸುತ್ತಿದ್ದಾರೆ.ಬಡವರ ಅಕ್ಕಿಯನ್ನು ಮಾಯ ಮಾಡಿರುವುದು ಕುತೂಹಲಕಾರಿ ಅಂಶವಾಗಿದೆ.ನವೆಂಬರ್ 23ರಂದು ಆಹಾರ ಇಲಾಖೆಯ ಉಪನಿರ್ದೇಶಕರಾದ ಭೀಮರಾಯ ನೇತೃತ್ವದ ತಂಡವು ತಾಲೂಕಿನ ಗೋದಾಮಿಗೆ ಭೇಟಿ ನೀಡಿದಾಗ ಈ ಅಂಶ ಬೆಳಕಿಗೆ ಬಂದಿದೆ.
💐💐ಮಹಾಶೈವಪೀಠದ ಪೀಠಾಧ್ಯಕ್ಷರು ಜಗನ್ಮಾತೆ ದುರ್ಗಾ ಮಾತೆಯ ಆರಾಧಕರು ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ಪೂಜ್ಯರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐
18950 ಕ್ವಿಂಟಲ್ ಇರಬೇಕಾದ ಪಡಿತರ ಅಕ್ಕಿ, 12873 ಕ್ವಿಂಟಲ್ ಮಾತ್ರ ಲಭ್ಯವಿತ್ತು. ಇನ್ನುಳಿದ 6077 ಕ್ವಿಂಟಲ್ ಅಕ್ಕಿ ಕಾಣದೆ ಅಧಿಕಾರಿಗಳೇ ದಂಗಾಗಿದ್ದಾರೆ.2.06 ಕೋಟಿ ಮೌಲ್ಯದ ಅಕ್ಕಿ ಕಾಣೆಯಾಗಿದೆ. ತಂತ್ರಾಂಶದಲ್ಲಿ ಪರಿಶೀಲಿಸಿದಾಗ ಹೊಂದಾಣಿಕೆ ಆಗದೆ ಇರುವುದು ಕಂಡು ಬಂದಿದೆ.
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿವಪ್ಪ ಮತ್ತು ಶಿವರಾಜ ಹಾಲಗೇರಾ ಹಾಗೂ ಆಡಳಿತ ಮಂಡಳಿಯ ಸದಸ್ಯರ ಮೇಲೆ ನವೆಂಬರ್ 28ರಂದು ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

ಅನ್ನಭಾಗ್ಯದ ಅಕ್ಕಿಗೆ ಕನ್ನ ಹಾಕಿದ್ದು ಯಾರು? : ಸರಕಾರಿ ಗೋಧಾಮಿನ ಸಂಗ್ರಹಣದಲ್ಲಿದ್ದ ಅನ್ನಭಾಗ್ಯಕ್ಕೆ ಕನ್ನ ಹಾಕಿದ್ದು ಯಾರು.ತಂತ್ರಾಂಶದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹಿಂದೆಯೂ ಕೂಡ ಇದೇ ರೀತಿ ಪಡಿತರ ಅಕ್ಕಿ ಕಳವಾಗಿತ್ತು. ಇದರಿಂದ ಎಚ್ಚೆತ್ತುಕೊಳ್ಳದ ತಾಲೂಕು ಹುಟ್ಟುವಳಿ ಹೋರಾಟ ಆಡಳಿತ ಮಂಡಳಿಯವರ ನಿರ್ಲಕ್ಷವೇ ಕಾರಣವೇ?, ಪ್ರಭಾವಿಗಳು ಅಧಿಕಾರಿಗಳ ಕೈವಾಡವಿದೆಯೇ?, ಗೋದಮಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸದೆ ಇರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಇವೆಲ್ಲವೂ ಸೂಕ್ತ ತನಿಕೆಯಿಂದ ಸತ್ಯ ಹೊರಬರಬೇಕಿದೆ.

About The Author