ಶಹಪುರ ಜನಸ್ಪಂದನಾ ಕಾರ್ಯಕ್ರಮ : ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಜನತಾದರ್ಶನ ಸಹಕಾರಿ : ಸಚಿವ ದರ್ಶನಾಪುರ

ಶಹಾಪುರ : ಜನರ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಇತ್ಯರ್ಥಗೊಳಿಸಲು ಜನಸ್ಪಂದನ ಕಾರ್ಯಕ್ರಮವು ಸಹಕಾರಿಯಾಗಿದ್ದು, ಇಂದು ರಾಜ್ಯಾದ್ಯಂತ ಹಲವು ಕಡೆ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ.ಜಿಲ್ಲಾ ಮತ್ತು ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಅರ್ಜಿಗಳು ಎಷ್ಟು ಕಡಿಮೆ ಬರುತ್ತವೆಯೋ ಆಗ ಸರಕಾರ ಮತ್ತು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದರ್ಥ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಿಗಳ ಸಚಿವರು ಹಾಗೂ ಯಾದಗಿರಿ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಪೂರ ಹೇಳಿದರು. ಇಂದು ನಗರದ ಆರ್ಬೋಳ ಕಲ್ಯಾಣ ಮಂಟಪದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಈ ಹಿಂದೆ ಯಾದಗಿರಿ ಮತ್ತು ಸುರುಪುರ ತಾಲೂಕುಗಳಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ 583 ಅರ್ಜಿಗಳಲ್ಲಿ ನಾಲ್ಕು 477 ಅರ್ಜಿಗಳನ್ನು ಇತ್ಯರ್ಥ ಗೊಳಿಸಲಾಗಿದೆ ಎಂದು ಹೇಳಿದರು.ಇಂದಿನ ಸರಕಾರದಲ್ಲಿರುವ ಸುಮಾರು ಐದರಿಂದ ಆರು ವರ್ಷಗಳವರೆಗೆ ಬಾಕಿ ಇರುವ ಅರ್ಜಿಗಳು ಶೀಘ್ರವೇ ಇತ್ಯರ್ಥ ಪಡಿಸಿದ್ದೇವೆ. 90 ದಿನಗಳಲ್ಲಿ ಮೊದಲನೇ ಹಂತ 60 ದಿನಗಳಲ್ಲಿ ಎರಡನೇ ಹಂತದಲ್ಲಿ ಅರ್ಜಿಗಳ ವಿಲೇವಾರಿ ಮಾಡಲಾಗುವುದು ಎಂದರು.ನಗರಸಭೆ ಮತ್ತು ತಹಸೀಲ್ ಕಚೇರಿಯಲ್ಲಿ ಇ- ಆಡಳಿತ ಜಾರಿಗೆ ತಂದಿದ್ದು, ಇದರಿಂದ ಯಾವುದೇ ಅರ್ಜಿಗಳು ಹೊರಹೋಗದಂತೆ ತಡೆಯಲಾಗಿದೆ.
ಅಗತ್ಯ ವಸ್ತುಗಳಾದ ಬೇಳೆಕಾಳು, ಎಣ್ಣೆ, ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಿಂದ ಹಾಗೂ ಹಸಿವಿನಿಂದ ಬಳಲುತ್ತಿದ್ದ ಬಡ ಜನರಿಗೆ ನೆರವಾಗಲು ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ.ಅಂಗವಿಕಲರ ಸೌಲಭ್ಯ ಗೃಹಲಕ್ಷ್ಮಿ ಯೋಜನೆ ಅಕ್ರಮ ಸಕ್ರಮ ಯೋಜನೆ ರೈತರ ಹೊಲಗಳಿಗೆ ನೀರು ವೃದ್ದರಿಗೆ ಮಾಶಾಸನ ಸೇರಿದಂತೆ ಹಲವು ಅರ್ಜಿಗಳನ್ನು ವಿಚಾರಿಸಿ ಶೀಘ್ರದಲ್ಲಿಯೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಜಿಲ್ಲಾಧಿಕಾರಿ ಸುಶೀಲಾ. ಬಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಜಿಲ್ಲಾ ಮಟ್ಟದ ಅಧಿಕಾರಿಗಳಾದ ಶರಣಪ್ಪ ಪಾಟೀಲ, ಡಾ. ರಾಜು ದೇಶಮುಖ್, ಡಿ.ಎಸ್.ಪಿ ಜಾವಿದ್ ಇನಾಮದಾರ್ ಉಪಸ್ಥಿತರಿದ್ದರು. ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್ ಅವರು ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಕಾರ್ಯಕ್ರಮ ನಡೆಸಿಕೊಟ್ಟರು. ತಹಸಿಲ್ದಾರ್ ಉಮಕಾಂತ ಹಳ್ಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರೆದಾರ್, ನಗರಸಭೆ ಪೌರಾಯುಕ್ತ ರಮೇಶ್ ಬಡಿಗೇರ್, ಪೊಲೀಸ್ ಇನ್ಸ್ಪೆಕ್ಟರ್ ಎಸ್ಎಂ ಪಾಟೀಲ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
💐💐ಮಹಾಶೈವಪೀಠದ ಪೀಠಾಧ್ಯಕ್ಷರು ಜಗನ್ಮಾತೆ ದುರ್ಗಾ ಮಾತೆಯ ಆರಾಧಕರು ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ಪೂಜ್ಯರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐
********
ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ಕಾರ್ಮಿಕ ಇಲಾಖೆ, ಭಾರತೀಯ ಸ್ಟೇಟ್ ಬ್ಯಾಂಕ್, ತೋಟಗಾರಿಕೆ ಇಲಾಖೆ,ಕೃಷಿ ಇಲಾಖೆ ಆರೋಗ್ಯ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ, ನಗರಸಭೆ ಶಹಪುರ ವತಿಯಿಂದ ಆಯೋಜಿಸಿದ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿ ವೀಕ್ಷಿಸಿದರು.

About The Author