ಮಹಾಶೈವ ಧರ್ಮಪೀಠದಲ್ಲಿ 70ನೆಯ ಶಿವೋಪಶಮನ ಕಾರ್ಯ : ಚಿತ್ರರಂಗದಲ್ಲಿ ಯಶಸ್ಸು ಕರುಣಿಸುವಂತೆ ವಿಶ್ವೇಶ್ವರ ಶಿವನ ಸನ್ನಿಧಿಗೆ ಚಿತ್ರನಟ ಅಖಿಲೇಶ

Raichur ದೇವದುರ್ಗ (ಗಬ್ಬೂರು,   26 ನವೆಂಬರ್ 2023) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ನವೆಂಬರ್ 26 ರ ರವಿವಾರದಂದು 70 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ‌ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

‌‌‌‌‌‌‌‌ ಸಿನೆಮಾ ನಟ ಚನ್ನಗಿರಿಯ ಅಖಿಲೇಶ ಅವರು ವಿಶ್ವೇಶ್ವರ ಶಿವನ‌ ಸನ್ನಿಧಿಯನ್ನರಸಿ ಬಂದಿದ್ದು ಇಂದಿನ‌ ವಿಶೇಷವಾಗಿತ್ತು.ಈಗಾಗಲೇ ಮೂರ್ನಾಲ್ಕು ಸಿನೆಮಾಗಳಲ್ಲಿ ನಟಿಸಿದ್ದಲ್ಲದೆ ಬಂಜಾರಾ ಭಾಷೆಯಲ್ಲಿಯೂ ಕೂಡ ಒಂದು ಸಿನೆಮಾದಲ್ಲಿ ನಟಿಸಿರುವ ಅಖಲೇಶ ಅವರು ಸದ್ಯ ‘ ಜನ್ಮಾಷ್ಟಮಿ’ ಸೇರಿದಂತೆ ಎರಡು ಮೂರು ಸಿನೆಮಾಗಳಲ್ಲಿ ನಟಿಸುತ್ತಿದ್ದು ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲವೆಂದು ಮಹಾಶೈವ ಧರ್ಮಪೀಠದ ‘ ಮಾತನಾಡುವ ಮಹಾದೇವ’ ನೆಂದೇ ಪ್ರಸಿದ್ಧಿ ಪಡೆದಿರುವ ವಿಶ್ವೇಶ್ವರ ಶಿವನ ಅಭಯಪಡೆಯಲು ಬಂದಿದ್ದರು.

ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ನಟ ಅಖಿಲೇಶ ಅವರಿಗೆ ಶಿವಾಭಯ ಕರುಣಿಸಿ,ವಿಶ್ವೇಶ್ವರನ ಸನ್ನಿಧಿಯಲ್ಲಿ ಶಾಲುಹೊದಿಸಿ ಸನ್ಮಾನಿಸಿ,ಆಶೀರ್ವದಿಸಿ ‘ ವಿಶ್ವೇಶ್ವರನ ಅನುಗ್ರಹದಿಂದ ಯಶಸ್ವಿಯಾಗಿ’ ಎಂದು ಆಶೀರ್ವದಿಸಿದರು.ಸದ್ಯ ನೈಜಘಟನೆಯನ್ನಾಧರಿಸಿದ ಪ್ರೇಮಕಥೆಯ ಒಂದು ಫಿಲ್ಮ್ ಮಾಡುತ್ತಿದ್ದು ಸಿನೆಮಾ ತಂಡದ ಎಲ್ಲರೊಂದಿಗೆ ವಿಶ್ವೇಶ್ವರ ಶಿವನ ದರ್ಶನಾಶೀರ್ವಾದ ಪಡೆಯುವುದಾಗಿ ಅಖಿಲೇಶ ತಿಳಿಸಿದರು.

ಮಹಾರಾಷ್ಟ್ರದ ಠಾಣಾದಿಂದಲೂ ಭಕ್ತರು ಈದಿನ ವಿಶ್ವೇಶ್ವರ ಸನ್ನಿಧಿಯನ್ನರಸಿ ಬಂದಿದ್ದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ಮೂಲಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ, ಉಮೇಶ ಸಾಹುಕಾರ ಅರಷಣಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ ,ಪತ್ರಕರ್ತರುಗಳಾದ ಏಳುಬಾವೆಪ್ಪ ಗೌಡ,ರಮೇಶ ಖಾನಾಪುರ,ರಂಗನಾಥ ಮಸೀದಪುರ,ಸಿದ್ರಾಮಯ್ಯಸ್ವಾಮಿ ಹಳ್ಳಿ, ಶಿವಕುಮಾರ ಚಿಕ್ಕಮಠ,ಯಲ್ಲಪ್ಪ ಕರಿಗಾರ,ಬೂದಿಬಸವ ಕರಿಗಾರ,ರಾಚಪ್ಪ ಹದ್ದಿನಾಳ, ಆನಂದ ಬಾಡದ,ವೆಂಕಟೇಶ ಮಸೀದಪುರ, ಶಿವಕುಮಾರ ವಸ್ತಾರ,ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು,ಭಕ್ತರುಗಳು ಉಪಸ್ಥಿತರಿದ್ದರು.

About The Author