ಪುತ್ರ ವ್ಯಾಮೋಹದಿಂದಾಗಿ ಸಾಮಾಜಿಕ ನ್ಯಾಯದಿಂದ ದೂರವಾಗುತ್ತಿದ್ದಾರಾ ಸಿದ್ದರಾಮಯ್ಯ !

ಪುತ್ರ ವ್ಯಾಮೋಹದಿಂದಾಗಿ ಸಾಮಾಜಿಕ ನ್ಯಾಯದಿಂದ ದೂರವಾಗುತ್ತಿದ್ದಾರಾ ಸಿದ್ದರಾಮಯ್ಯ !

ಬಸವರಾಜ ಕರೆಗಾರ
ಸಮಾಜಿಕ ನ್ಯಾಯದಿಂದ ದೂರವಾಗುತ್ತಿದ್ದಾರಾ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯ ಎಂದರೆ ಸಾಮಾಜಿಕ ನ್ಯಾಯ ಎನ್ನುತ್ತಿದ್ದರು.ಬಡವರ ಶೋಷಿತರ ಪರ ಸಿದ್ದರಾಮಯ್ಯ ಎನ್ನುತ್ತಿದ್ದರು. ಆದರೆ ಇಂದು ಅವರ ಮಗನ ವಿಡಿಯೋದಲ್ಲಿ ಮಾತನಾಡಿದ್ದನ್ನು ನೋಡಿದರೆ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದಿಂದ ದೂರವಾಗುತ್ತಿದ್ದಾರೆ ಎನ್ನುಸುತ್ತಿರುವುದು ನಾನು ಕಂಡಂತೆ ಸಿದ್ದರಾಮಯ್ಯನವರಲ್ಲ. ಐದು ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯನವರು ಬಡವರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಅನ್ನದಾತ, ಆಶ್ರಯದಾತ ಹೀಗೆ ಹಲವು ಹೆಸರಿನಿಂದ ಸಿದ್ದರಾಮಯ್ಯನವರನ್ನು ಹೊಗಳುತ್ತಿದ್ದರು. ಆದರೆ ಇಂದು ಏನಾಗುತ್ತಿದೆ.ಆಗಿನ ಸಿದ್ದರಾಮಯ್ಯನವರು ಇವರಲ್ಲವೇ!, ಅಧಿಕಾರದ ದುರಾಸೆಯಿಂದ ಆಡಳಿತದಲ್ಲಿ ಸಂಬಂಧಿಗಳನ್ನು ಸೇರಿಸಿಕೊಳ್ಳಬಾರದು ಎಂದು ಹೇಳುತ್ತಿದ್ದ ಸಿದ್ದರಾಮಯ್ಯನವರು, ಇಂದು ಶಾಸಕರು,ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಆಡಳಿತದ ಅಧಿಕಾರಿಗಳು, ಇಂದಿನ ವರ್ಗಾವಣೆ ಸೇರಿದಂತೆ ಇಂದು ಹಲವು ವಿಷಯಗಳು ಅವರ ಮಗನ  ಕೈಯಲ್ಲಿವೆ ಎಂದು ರಾಜಕೀಯ ಮುಖಂಡರು ಸೇರಿದಂತೆ ಇತರರು ಅಂದುಕೊಳ್ಳುತ್ತಿದ್ದಾರೆ. ಇದು ನಿಜವಾ! ಎಂದೆನಿಸುತ್ತಿದೆ!. ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಸಿದ್ದರಾಮಯ್ಯನವರು ಸಾಮಾಜಿಕ ಹರಿಕಾರರು ಎಡವಿದರ ಎಂದೆನಿಸುತ್ತಿದೆ.
ನಾ ಕಂಡ ಸಿದ್ದರಾಮಯ್ಯ : ಕುರುಬ ಸಮಾಜದವರಿಗೆ ಪರಿಶಿಷ್ಟ ಪಂಗಡ ಸಿಗಲೆಂದು 2015ರಲ್ಲಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಲು ನಾವು ಹೋದಾಗ ಅವರು ಕಂಡ ಕನಸು ಅತಿದೊಡ್ಡದಾಗಿತ್ತು.ನಮ್ಮ ಸಮಾಜವನ್ನು ಬಿಡಿ ರಾಜ್ಯದಲ್ಲಿ ಹಲವು ಸಣ್ಣಪುಟ್ಟ ಸಮಾಜಗಳ ಬಗ್ಗೆ ಯೋಚಿಸಿ, ಅವರಿಗೆ ಇನ್ನೂ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಂತವರನ್ನು ನಾವು ಮೇಲಕ್ಕೆ ತರಬೇಕಿದೆ. ಅಂತವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಹೇಳಿದ್ದರು. ಅಂತಹ ಸಿದ್ದರಾಮಯ್ಯನವರು ಇಂದು ಕಿರಿಯ ಮಗ ಯತಿಂದ್ರರವರಿಗೆ ಆಡಳಿತದ ಕೊಂಡಿ ಇದೆ ಎಂದರೆ ಇತರರಿಗೆ ನೀವು ಮಾದರಿಯಾಗಲು ಸಾಧ್ಯವೇ! ಹಿರಿಯ ಮಗ ರಾಕೇಶ್ ಅಂಥವರು ನಿಮ್ಮ ಪುತ್ರರು ಇರಬೇಕಿತ್ತು.ಐದು ವರ್ಷದಲ್ಲಿ ಆಡಳಿತ ನಡೆಸಿದ ಅವರು ಒಂದು ಸಾರಿಯಾದರೂ ವಿಧಾನಸೌಧದ ಕೊಠಡಿ ಮೆಟ್ಟಿಲು ಹತ್ತಿರಲಿಲ್ಲ. ಉಪಮುಖ್ಯಮಂತ್ರಿಯಾದರೂ ಕೂಡ ಅವರು ಕುಟುಂಬದವರನ್ನು ಸನಿಹಕ್ಕೂ ಕೂಡ ಬರಲಿಲ್ಲ. ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕರಿಸಿದಾಗಲು ನಿಮ್ಮ ಕುಟುಂಬದವರನ್ನು ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಕರೆಯಲಲಿಲ್ಲ. ಸಮಾನತೆಯ ಹರಿಕಾರರೆ ಇಂದಿನ ಸಿದ್ದರಾಮಯ್ಯನವರಾ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ರಾಜ್ಯದ ಜನತೆ! 12ಕ್ಕೂ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ನೀವು.ಸಮಾನತೆ, ಶೋಷಿತರ ನಾಡಿ ಮಿಡಿತ ಅರಿತ ಸಿದ್ದರಾಮಯ್ಯನವರು. ಆ ಹೆಸರು ಕಳಚಿ ಬಿತ್ತಾ ಎಂದು ಅನ್ನಿಸುತ್ತಿದೆ!, ಮೂಡನಂಬಿಕೆಗಳನ್ನು ಬದಿಗೊತ್ತಿ ಅಧಿಕಾರದ ಹಿಂದೆ ಬೀಳದೆ ಅಧಿಕಾರ ಬರುವಂತೆ ಮಾಡಿದ ಸಿದ್ದರಾಮಯ್ಯನವರಾ!.ಆದರೆ ಇಂದು ಆಡಳಿತದಲ್ಲಿ ಪುತ್ರ ವ್ಯಾಮೋಹದಿಂದ
 ಮಗನನ್ನು ಕರೆಸಿಕೊಂಡಿರಿ. ತಪ್ಪು ಮಾಡಿದ್ದಿರಿ ಅನಿಸುತ್ತಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಸಿದ್ದರಾಮಯ್ಯನವರ ಸ್ಥಾನವನ್ನು ತುಂಬ ಬಲ್ಲರೇ ಪ್ರಿಯಾಂಕ ಖರ್ಗೆ! : ಇಂದು ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹೆಮ್ಮರವಾಗಿ ಬೆಳೆದಿದೆಯೆಂದರೆ ಎಐಸಿಸಿ ಅಧಾಯಕ್ಷರಾದ  ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಅತಿ ಹೆಚ್ಚಿನದು. ಗುರುಮಿಟ್ಕಲ್ ಕ್ಷೇತ್ರದಲ್ಲಿ ಒಂಭತ್ತು ಬಾರಿ ಶಾಸಕರಾದರು ಎಂದು ಕೂಡ ಜಾತೀಯತೆಯನ್ನು ಎತ್ತಲಿಲ್ಲ.ಇಂದು ಸಮಾನತೆಯ ಅಧಿಕಾರರಂತೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸ್ತುತ ಆರ್ ಡಿ ಪಿ ಆರ್ ಸಚಿವರಾದ ಪ್ರಿಯಾಂಕ ಖರ್ಗೆ ಕೂಡ ಸಮರ್ಥ ನಾಯಕರಾಗಿ ಬೆಳೆಯುತ್ತಿದ್ದಾರೆ. ಆಡಳಿತದಲ್ಲಿ ವರ್ಗಾವಣೆ ಸೇರಿದಂತೆ ಇತರ ವಿಷಯಗಳಲ್ಲಿಯೂ ಕೂಡ ಒಂದೇ ಒಂದು ಭ್ರಷ್ಟಾಚಾರವನ್ನು ಸಹಿಸದ ಆಡಳಿತವನ್ನು ಇಂದು ರಾಜ್ಯದ ಜನತೆಗೆ ನೀಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಕಡತಗಳ ಪರಿಶೀಲನೆ ನಡೆಸಿದ್ದಾರೆ.ಪಿ ಎಸ್ ಐ ಹಗರಣವನ್ನು ಬಯಲಿಗೆಳೆದು ಎಲ್ಲ ವರ್ಗದ ಜನರಿಗೆ ಮರು ಪರೀಕ್ಷೆ ನಡೆಯುವಂತೆ ಹೋರಾಟ ಮಾಡಿ ನ್ಯಾಯ ಒದಗಿಸಿಕೊಟ್ಟಿದ್ದಾರೆ.ಅವರ ಆಡಳಿತದಲ್ಲಿ ಪ್ರತಿ ತಿಂಗಳು ಕೂಡ ರಿಪೋರ್ಟ್ ಕಾರ್ಡನ್ನು ಸಾರ್ವಜನಿಕರಿಗೆ ನೀಡುತ್ತಿದ್ದಾರೆ. ನನ್ನ ತಪ್ಪುಗಳಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ಸರಿಪಡಿಸಲು ಮತದಾರರಿಗೆ ಕೇಳುತ್ತಿದ್ದಾರೆ. ಇದು ಆಡಳಿತದ ವೈಕರಿ. ಬರೀ ಮಾತುಗಳಲ್ಲಿ ಆಡಳಿತ ನಡೆಸುತ್ತೇನೆ ಎನ್ನುವುದಲ್ಲ. ಅದು ವಿಷಯದಲ್ಲಿಯೂ ಕೂಡ ಚಾಲ್ತಿಯಲ್ಲಿರಬೇಕು. ಅಂತಹ ವ್ಯಕ್ತಿಯು ಸಮರ್ಥ ನಾಯಕನಾಗಲು ಸಾಧ್ಯ.ಯಾವತ್ತು ಜಾತಿಯತೆಯನ್ನು ಎತ್ತಲಿಲ್ಲ.ಸಮಸ್ಯೆ ಕೇಳಿ ಬಂದವರಿಗೆ ಬೇಕಾದ ಎಲ್ಲಾ ವಿಷಯಗಳನ್ನು ಸೌಕರ್ಯಗಳನ್ನು ಒದಗಿಸಿಕೊಡುತ್ತಿದ್ದಾರೆ.ಅಧಿಕಾರಿಗಳಿಗೆ ಚಾಟಿ ಬಿಸಿ ಕೆಲಸವನ್ನು ಮಾಡಿಕೊಡುತ್ತಿದ್ದಾರೆ.ನಾವೆಲ್ಲರೂ  ಒಟ್ಟುಗೂಡಿ ಸಮ ಸಮಾಜವನ್ನು ನಿರ್ಮಾಣ ಮಾಡಲು ಪಕ್ಷದ ಕಾರ್ಯಕರ್ತರ ಜೊತೆಗೆ ಸಾರ್ವಜನಿಕರಿಗು ಹೇಳುತ್ತಾರೆ. ಮುಂದೊಂದು ದಿನ ಸಮಾನತೆಯ ಹರಿಕಾರರು ನೀವೇ ಏಕಾಗಬಾರದೆಂದು ಸಾರ್ವಜನಿಕರು ಅಂದುಕೊಳ್ಳುತ್ತಿದ್ದಾರೆ. ಪ್ರಿಯಾಂಕ ಖರ್ಗೆಯವರು ಕೂಡ ಸಿದ್ದರಾಮಯ್ಯನವರಂತೆ ನೇರ ನುಡಿಗಳಿಂದ ಹೆಸರುವಾಸಿಯಾಗಿದ್ದರು. ಯಾವುದೇ ಕಲ್ಮಶವಿಲ್ಲದೆ ವಿಷಾಲ ಹೃದಯದ ವ್ಯಕ್ತಿ ಪ್ರಿಯಾಂಕ ಖರ್ಗೆ. ಕಾಂಗ್ರೆಸ್ ಪಕ್ಷದಲ್ಲಿ ಯುವಕರಿಗೆ ಯಾಕೆ ಅಧಿಕಾರ ಕೊಡಬಾರದು ಎನ್ನುವುದು ಇಂದಿನ ಜನಾಂಗದ ಪ್ರಶ್ನೆ, ಸಾಮಾಜಿಕ ಜಾಲತಾಣದಲ್ಲಿಯೂ ಪ್ರತಿಯೊಂದು ಸರ್ಕಾರದ ವರದಿಗಳನ್ನು ಮತದಾರರು ಮತ್ತು ಸಾರ್ವಜನಿಕರ ಮುಂದೆ ಬಿತ್ತರಿಸುತ್ತಿದ್ದಾರೆ. ಎರಡನೇ ಸಾಲಿನ ನಾಯಕರು ಎಂದು ತಿಳಿದುಕೊಳ್ಳದೆ ಇಂಥ ವ್ಯಕ್ತಿಗಳು ಸಮಾಜದ ಹರಿಕಾರರ ಜೊತೆ ರಾಜ್ಯದ ಉನ್ನತ ಸ್ಥಾನವನ್ನು ಯಾಕೆ ಅಲಂಕರಿಸಬಾರದು ಎನ್ನುವುದೇ ರಾಜ್ಯದ ಜನರ ಪ್ರಶ್ನೆಯಾಗಿದೆ. ಅದು ಆದಷ್ಟು ಬೇಗ ಈಡೇರಲಿ ಎನ್ನುವುದು ರಾಜ್ಯದ ಆರು ಕೋಟಿ ಜನರ ಅಭಿಪ್ರಾಯವೆಂದು ಎನಿಸುತ್ತದೆ!

About The Author