70ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಬೀಮರಡ್ಡಿ ಬೈರಡ್ಡಿ ಚಾಲನೆ

70ನೇ ಅಖಿಲಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಬೀಮರಡ್ಡಿ ಬೈರಡ್ಡಿ ಚಾಲನೆ

ಕರುನಾಡು ವಾಣಿ ಸುದ್ದಿ.

ಶಹಾಪೂರ ಸುದ್ದಿ :

ಹಾಪೂರ ಪಟ್ಟಣದ ಸರಕಾರಿ ನೌಕರರ ಭವನದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.ಬೆಂಗಳೂರು ಜಿಲ್ಲಾ ಸಹಕಾರ ಇಲಾಖೆ ಯಾದಗಿರಿ ಜಿಲ್ಲಾ ಸಹಕಾರ ಯುನಿಯನ್ ಒಕ್ಕೂಟ ಯಾದಗಿರಿ ಮತ್ತು ತಾಲ್ಲೂಕು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಶಹಾಪೂರ
ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಯಿತು.ಸಹಕಾರ ಸಪ್ತಾಹ ಆಚರಣೆಯ ಕಾರ್ಯಕ್ರಮವನ್ನು ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಬೀಮರಡ್ಡಿ ಬೈರಡ್ಡಿ ಗೋಗಿ ಜ್ಯೋತಿ ಬೆಳಗಿಸುವ ಮುಖಾಂತರ ಚಾಲನೆ ನೀಡಿದರು. ಭಾರತ ಸಹಕಾರ ಚಳುವಳಿಯ ಆರೋಗ್ಯಕರ ಬೆಳವಣಿಗೆ ಹಲವಾರು ನಾಯಕರು ಸಹಕಾರ ಗಣ್ಯರು ಶ್ರಮಿಸಿದ್ದಾರೆ. ತಮ್ಮ ತನು ಮನವನ್ನು ಸಮರ್ಪಿಸಿದ್ದಾರೆ.ಅಂತಹವರಲ್ಲಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅಗ್ರಗಣ್ಯರೆನಿಸಿಕೊಂಡಿದ್ದಾರೆ. ಸಹಕಾರ ತತ್ವ ಆಚರಣೆಯಲ್ಲಿ ನೆಹರು ಅವರಿಗೆ ಅಪಾರವಾದ ನಂಬಿಕೆ ಮತ್ತು ನಿಷ್ಠೆ ಇತ್ತು. ಭಾರತವನ್ನು ಆರ್ಥಿಕವಾಗಿ ಮುಂದುವರಿಸಲು ಸಹಕಾರ ತತ್ವದ ಮೊರೆ ಹೋದರು ಮತ್ತು ಸಹಕಾರ ಸಂಘಕ್ಕೆ ವಿಸ್ತಾರವಾದ ಬೆಳೆಯಲು ಯೋಜನೆಗಳು ಹಾಕಬೇಕು ಎಂದು ತಿಳಿಸಿದರು.

ಹೇಮರಡ್ಡಿ ಮಲ್ಲಮ್ಮ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಬಸಣ್ಣಗೌಡ ಮರಮಕಲ್ ಸಹಕಾರ ಇಲಾಖೆ ಪಿತಾಮಹ ಸಿದ್ದಣ್ಣಗೌಡವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಭಾರತ ಸಹಕಾರ ಚಳುವಳಿ ಆರಂಭವಾಗಿ 119 ವರ್ಷ ಕಳೆದಿದೆ. ಆದರೆ ಜನತೆಯ ಆರ್ಥಿಕವಾಗಿ ಸಮಾಜಿಕವಾಗಿ ಬೆಳವಣಿಗೆಯ ಚಳುವಳಿ ಶ್ರಮಿಸುತ್ತ ಬಂದಿದೆ. ಪ್ರತಿ ವರ್ಷವೂ ನವಂಬರ್ 14 ರಿಂದ 20 ರವಗೆ ಅಖಿಲ ಭಾರತ ಸಪ್ತಾಹ ಆಚರಣೆ ಮಾಡಲಾಗುತ್ತದೆ ಎಂದು ನುಡಿದರು. ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥರಡ್ಡಿ ದರ್ಶನಾಪೂರವರು ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಉಪಾಧ್ಯಕ್ಷರಾದ ಎಂ ನಾರಾಯಣ, ಕೃಷ್ಣ ಪಟ್ಟಣ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಬಸವರಾಜ ಹಿರೇಮಠ, ರೇಖು ಚವ್ಹಾಣ,ಶಾಂತಗೌಡ ಸಾದ್ಯಪೂರ, ಬಾಪುಗೌಡ, ಎಂ ಸಿ ಪಾಟೀಲ್, ನಿಂಗಣ್ಣ ಪಡಶೆಟ್ಟಿ, ಎಸ್ ಜಿ ರಾಮಚಂದ್ರ ಬಸವರಾಜ ಸಿಂಗ್ರಿ, ಸಹಕಾರ ಸಂಘಗಳು ಉಪವಿಭಾಗದ ಅಧಿಕಾರಿಯಾದ ಶೇಖಸಾಬ್ ಯಾದಗಿರಿ, ಅರುಣ ಕುಲ್ಕರ್ಣೆ ,ಡಾ ವಿಜಯಕುಮಾರ್ ಹಳಿಸಗರ, ಬಸಣ್ಣಗೌಡ ಆಲ್ದಾಳ ಶಂಕರಗೌಡ ಕರ್ಕಿಳ್ಳಿ ದೇವಿಂದ್ರಪ್ಪ ಕನ್ಯಕೊಳ್ಳೊರು ನಿಂಗಣ್ಣ ಹೈಯಾಳ ಬಿ ಮುನಿಯಪ್ಪ ಹುಂಡೆಕಲ್ ಶಿವಶರಣಪ್ಪ ಆರ ಎಸ್ ಅರಳಗುಂಡಾ ಮತ್ತು ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಖಾಸಿಭಾಯಿ ಪಾರಗೊಂಡ ಸುಜಾತ ಮಠ ಯಾದಗಿರಿ ಸರಕಾರಿ ನೌಕರರ ಗೃಹ ನಿರ್ಮಾಣದ ಮುಖ್ಯಕಾರ್ಯನಿವಾರ್ಹಕಾಧಿಕಾರ ಕಾರ್ಯಕ್ರಮದ ಆಯೋಜಕರಾದ ಶಂಕರಗೌಡ ಯಕ್ಷಂತಿ ಹಾಗೂ ಅನೇಕ ಸಹಕಾರ ಸಂಘದ ಮುಖ್ಯಸ್ಥರು ಇದ್ದರು.

About The Author