ಸ್ವಚ್ಚತೆಗೆ ಆಧ್ಯತೆ ನೀಡಿ, ಗ್ರಾಮೀಣ ಪ್ರದೇಶದ ನರೇಗಾ ಕಾರ್ಮಿಕರಿಗೆ ಕೆಲಸ ನೀಡಲು ಕ್ರಮವಹಿಸಿ : ಬಿ ಎಸ್ ರಾಥೋಡ್

ಶಹಾಪುರ : ತಾಲೂಕು ಬರಗಾಲ  ಘೋಷಣೆಯಾಗಿರುವುದರಿಂದ ಗ್ರಾಮೀಣ ಪ್ರದೇಶದ ನರೇಗಾ ಕಾರ್ಮಿಕರಿಗೆ ಕೆಲಸ ನೀಡಲು ತಾಲೂಕು ಮತ್ತು  ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳಿಗೆ ಕ್ರಮವಹಿಸಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಶೌಚಾಲಯ ರಹಿತ ಕುಟುಂಬಗಳನ್ನು ಗುರುತಿಸಿ, ಅವರಿಗೆ ಶೌಚಾಲಯ ಕಲ್ಪಿಸಲು ಮನೆ- ಮನೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಿ.ಪ್ರತಿ ದಿನ ಎಲ್ಲಾ ಗ್ರಾಮ ಪಂಚಾಯತಿಯಿಂದ ಸ್ವಚ್ಛ ವಾಹಿನಿಯ ಮೂಲಕ ತ್ಯಾಜ್ಯ ಸಂಗ್ರಹಣೆ ಮಾಡಿರಿ. ಪ್ರತಿ ದಿನ, ಪ್ರತಿ ಕುಟುಂಬ, ಅಂಗಡಿ, ಹೋಟಲ್ ಗಳಿಂದ ಒಣ ಕಸ ನೀಡುವಂತೆ  ವ್ಯಾಪಕ ಪ್ರಚಾರ ಮಾಡಲು ಕ್ರಮವಹಿಸಿರಿ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ ಬಿರೆದಾರ, ಸಹಾಯಕ ನಿರ್ದೇಶಕರಾದ ಭಿಮಣ್ಣಗೌಡ ಬಿರೆದಾರ ರವರು ಉಪಸ್ಥಿತರಿದ್ದರು.
ಸ್ವ.ಭಾ.ಮಿ ಸಮಾಲೋಚಕರಾದ ವೆಂಕಟೆಶ, ಶಿವಕುಮಾರ ಹಾಗೂ ಆಯ್ದ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳು, ಟಿಎಇ,ಡಿಇಒ ಇತರೆ ತಾಂತ್ರಿಕ ಸಿಬ್ಬಂದಿಯವರು ಸಭೆಯಲ್ಲಿ ಉಪಸ್ಥಿತರಿದ್ದರು.