ದಿ.ಬಾಪುಗೌಡರ 35ನೇ ಪುಣ್ಯಸ್ಮರಣೆ | ದೀನ ದುರ್ಬಲರ, ಹಿಂದುಳಿದವರ ಬಗ್ಗೆ ಕಾಳಜಿ ಹೊಂದಿದ ನಾಯಕರಾಗಿದ್ದರು ದಿ.ಬಾಪುಗೌಡರು

ಶಹಾಪುರ : ದೀನ ದುರ್ಬಲರ, ಹಿಂದುಳಿದವರ ಬಗ್ಗೆ ಕಾಳಜಿ ಹೊಂದಿದ ನಾಯಕರಾಗಿದ್ದರು ದಿ.ಬಾಪುಗೌಡ ದರ್ಶನಾಪುರ.ದೂರದೃಷ್ಠಿ, ಮತ್ತು ಜನಪರ ಕಾಳಜಿಯಿಂದ ಎಲ್ಲ ವರ್ಗದವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಜನಸೇವೆ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದಡಿ ಇಡೀ ಕಲ್ಯಾಣ ಕರ್ನಾಟಕ ಭಾಗಕ್ಕೆ  ಅವರು ಪ್ರೇರಕಶಕ್ತಿಯಾಗಿದ್ದರು ಎಂಬುದಕ್ಕೆ ನಾವೆಲ್ಲರೂ ಉನ್ನತ ಸ್ಥಾನಕ್ಕೆ ತಲುಪಿರುವುದೇ ನಿದರ್ಶನವಾಗಿದೆ ಎಂದು ಹಿರಿಯ ಧುರೀಣ ವಿಧಾನಪರಿಷತ್ ಶಾಸಕರಾದ ತಿಪ್ಪಣ್ಣ ಕಮಕನೂರು ತಿಳಿಸಿದರು.

  ದಿ.ಬಾಪುಗೌಡ ದರ್ಶನಾಪುರ ಅವರ ೩೫ನೇ ಪುಣ್ಯಸ್ಮರಣೆ ಕಾರ್ಯಕ್ರಮ ಶ್ರೀ ಚರಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿ ಬಾಪುಗೌಡರು ಸಗರನಾಡಿನ ರೈತಾಪಿ ವರ್ಗದ ಭೂಮಿಗಳಿಗೆ ನೀರು ಹರಿಸುವ ಕಾರ್ಯಕ್ಕೆ ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ ಇಂದು ಈ ಭಾಗದ ಭೂಮಿಗಳು ಹಸಿರಿನಿಂದ ಕಂಗೊಳಿಸುವುದಕ್ಕೆ ಸಾಕ್ಷಿಯಾಗಿದೆ. ಅವರ ಪುತ್ರ ಸಚಿವರಾದ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಹಿರಿಯ ಮಾರ್ಗದಲ್ಲಿ ಮುನ್ನಡೆದು ಸರ್ವರ ಆಶೋತ್ತರಗಳಿಗೆ ಸ್ಪಂಧಿಸುತ್ತಾ ರಾಜ್ಯಮಟ್ಟದ ಉತ್ತಮ ನಾಯಕರಾಗಿದ್ದಾರೆ ಎಂದರು.

    ಹಿರಿಯ ಸಹಕಾರಿ ಧುರೀಣ ಲಿಂಗಣ್ಣ ಪಡಶೆಟ್ಟಿ ಮಾತನಾಡಿ, ಬಾಪುಗೌಡರು ಶಿಕ್ಷಣವೇ ಮೂಲಮಂತ್ರವೆಂಬ ಚಿಂತನೆಯಿಂದ ಮಹಿಳಾ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅರಿವಿನ ಬೆಳಕು ನೀಡಿದ ಪುಣ್ಯ ಪುರುಷರಾಗಿದ್ದರು ಎಂದರು.ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಾಥಮಿಕ ವಿಭಾಗದಿಂದ ಹಿಡಿದು ಪದವಿ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದಕ್ಕಾಗಿ ಸನ್ಮಾನಿಸಲಾಯಿತು. ಅದಕ್ಕಿಂತ ಪೂರ್ವದಲ್ಲಿ ಭೀಗುಡಿ ವೃತ್ತದಲ್ಲಿರುವ ದಿ.ಬಾಪುಗೌಡ ಪುತ್ಥಳಿಗೆ ದರ್ಶನಾಪುರ ಅಭಿಮಾನಿಗಳು, ಹಿತೈಶಿಗಳು ಕಾರ್ಯಕರ್ತರು ಗೌರವಸಮರ್ಪಣೆ ಸಲ್ಲಿಸಿದರು.

 ಈ ಸಂದರ್ಭಲ್ಲಿ ಚರಬಸವೇಶ್ವರ ಸಂಸ್ಥಾನ ಮಠದ ವೇ.ಮೂ.ಬಸವಯ್ಯ ಶರಣರು, ನಗನೂರಿನ ಶ್ರೀ ಶರಣಬಸವೇಶ್ವರ ಮಠದ ಪೂಜ್ಯ ಶರಣಪ್ಪ ಶರಣರು, ಷ.ಬ್ರ.ಚನ್ನಬಸವ ಶಿವಾಚಾರ್ಯರು, ಹೆಗ್ಗಣದೊಡ್ಡಿಯ ಶ್ರೀಗಳು, ನಾಗನಟಗಿಯ ಶ್ರೀಗಳು, ಹಿರಿಯ ಧುರೀಣ ಶ್ರೀ.ಚ.ಬ.ವಿ.ವ.ಸಂಸ್ಥೆಯ ಅಧ್ಯಕ್ಷ ಬಸವರಾಜಪ್ಪಗೌಡ ದರ್ಶನಾಪುರ, ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ, ಭೀಮರಡ್ಡಿ ಭೈರಡ್ಡಿ, ಇದ್ದರು.

 ಶರಣಪ್ಪ ಸಲಾದಪೂರ, ಶಂಕ್ರಣ್ಣ ವಣಿಕ್ಯಾಳ, ಸನ್ನಿಗೌಡ ಪಾಟೀಲ ತುನ್ನೂರು, ಸೋಮಶೇಖರ ಗೋನಾಯಕ, ಮರಿಗೌಡ ಹುಲ್ಕಲ್, ರಾಜಶೇಖರ ಪಾಟೀಲ ವಜ್ಜಲ, ಮಾನಸಿಂಗ್ ಚವ್ಹಾಣ, ಬಸವರಾಜಪ್ಪಗೌಡ ತಂಗಡಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ, ಹಿರಿಯರಾದ ಮಾಣಿಕರೆಡ್ಡಿ ಗೋಗಿ, ವಿನೋದ ಪಾಟೀಲ,  ಸೋಮಶೇಖರ, ಬಸವರಾಜಪ್ಪಗೌಡ ವಡಗೇರಾ, ಸಿದ್ದಲಿಂಗಣ್ಣ ಆನೇಗುಂದಿ, ಬಸನಗೌಡ ಸುಬೇದಾರ, ಇಬ್ರಾಹಿಂ ಶಿರವಾಳ, ವಸಂತಕುಮಾರ ಸುರಪುರ, ಶಿವುಮಹಾಂತ ಚಂದಾಪುರ, ಸಯ್ಯದ ಮುಸ್ತಫಾ ದರ್ಬಾನ, ಸುರೇಶ ಸಜ್ಜನ, ಅಲ್ಲಾಪಟೇಲ, ಮಲ್ಲಣ್ಣ ಉಳಂಡಗೇರಿ, ಬಾಬುರಾವ ಬೂತಾಳಿ, ಸಣ್ಣನಿಂಗಣ್ಣ ನಾಯ್ಕೋಡಿ, ಈರಣ್ಣ ದೇಸಾಯಿ, ಇದ್ದರು. ಮುಖಂಡರಾದ ಘೇವರಚಂದ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕ ಅರುಣಕುಮಾರ ಜೇವರ್ಗಿ ಕಾರ್ಯಕ್ರಮ ನಿರೂಪಿಸಿದರು, ಪ್ರಾಂಶುಪಾಲ ಶಿವಲಿಂಗಣ್ಣಗೌಡ ಸಾಹು ವಂದಿಸಿದರು, ದಿ.ಬಾಪುಗೌಡರ ಅಭಿಮಾನಿಗಳು, ಕಾರ್ಯಕರ್ತರು ಹಿರಿಯ ಕಿರಿಯ ಮುಖಂಡರು, ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಧಾನ ಅಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂಧಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author