ಎಲೆಬಿಚ್ಚಾಲಿಯ ಗ್ರಾಮದ ವರ್ಗಾವಣೆಗೊಂಡ ಶಿಕ್ಷಕ ಮಂಜುನಾಥನಿಗೆ ಅದ್ದೂರಿ ಬೀಳ್ಕೊಡುಗೆ 

ರಾಯಚೂರು : ಗಿಲ್ಲೆಸೂಗೂರು:ರಾಯಚೂರು ಜಿಲ್ಲೆ ರಾಯಚೂರು ತಾಲೂಕು ಗಿಲ್ಲೆಸೂಗೂರು ಹೋಬಳಿ, ಎಲೆಬಿಚ್ಚಾಲಿ ವಲಯದಲ್ಲಿ ಬರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಲೆಬಿಚ್ಚಾಲಿ ಕ್ಯಾಂಪ್ ಶಾಲೆಯಲ್ಲಿ 13 ವರ್ಷ 6 ತಿಂಗಳ ಕಾಲ ಸೇವೆ ಮಾಡಿದ ಮಂಜುನಾಥ.ಎಂ  ಸಹಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ಶಿಕ್ಷಕ ವರ್ಗಾವಣೆಯಾದ ನಿಮಿತ್ತ ಮಂಜುನಾಥ ಶಿಕ್ಷಕರ ಮತ್ತು ಅವ ಪತ್ನಿಯರನ್ನು ಕುದುರೆಯ ಸಾರೋಟಿಯಲ್ಲಿ ಬ್ಯಾಂಡ್, ಡೋಳ್ಳು, ಡಿಜಿಯೊಂದಿಗೆ  ಮೆರವಣಿಯೊಂದಿಗೆ ಗ್ರಾಮದೊಳಗೆ ಮುಖ್ಯರಸ್ತೆಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಬಿಳ್ಕೋಡಲಾಯಿತು.

ಗ್ರಾಪಂ. ಅಧ್ಯಕ್ಷರಾದ ಶ್ರೀಮತಿ ಮುದ್ದಮ್ಮ/ ಜಯಪ್ಪ ಅವರು ಜ್ಯೋತಿ ಬೆಳೆಗಿಸುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭ ಮಾಡಲಾಯಿತು.

2023-24ನೇ ಸಾಲಿನಲ್ಲಿ ವರ್ಗಾವಣೆಗೊಂಡ ತಮ್ಮ ಸ್ವಂತ ಜಿಲ್ಲೆಯಾದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹಳಿಪುರಗೆ ವರ್ಗಾವಣೆಗೊಂಡಿದ್ದಾರೆ. ಎಲೆಬಿಚ್ಚಾಲಿ ಕ್ಯಾಂಪ್ ಗ್ರಾಮದಲ್ಲಿ ಹದಿಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಮಕ್ಕಳಿಗೆ ಉತ್ತಮವಾದ ಶಿಕ್ಷಣ, ಉತ್ತಮವಾದ ಸಂಸ್ಕಾರ, ನೀತಿ ಪಾಠಗಳನ್ನು ಹೇಳಿ, ತಿಳಿಸಿ ತಿದ್ದುವ ಮೂಲಕ ಈ ಗ್ರಾಮದ ಜನರ ಪ್ರೀತಿ ವಿಶ್ವಾಸವನ್ನು ಗಳಿಸುವ ಸಲುವಾಗಿ ಈ ಗ್ರಾಮದ ಜನರ ನಾಡಮಿಡತದಲ್ಲಿ, ಹೃದಯದಲ್ಲಿ ಶಾಶ್ವತವಾಗಿ ನೆನಪು ಇಟ್ಟಿಕೊಳ್ಳುವಂತೆ ಸೇವೆ ಸಲ್ಲಿಸಿದ್ದಾರೆ. ಅದೇ ರೀತಿಯಾಗಿ ಗ್ರಾಮದ ಜನರು ಅಭಿಮಾನ, ಪ್ರೀತಿಯಿಂದ ಅವರಿಗೆ ಗುರುಕಾಣಿಕೆಗಳನ್ನು ನೀಡಿ ಗೌರವಿಸುವ ಮೂಲಕ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಲೆಬಿಚ್ಚಾಲಿ ವಲಯದ ಸಿ.ಆರ್.ಪಿಗಳಾದ ಶಶಿಧರ್ ಕಟ್ಟಿಮನಿ, ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಜಯಶ್ರೀ, ಅತಿಥಿ ಶಿಕ್ಷಕರಾದ ಸಾಬಣ್ಣ ಗಟ್ಟುಬಿಚ್ಚಾಲಿ, ಎಸ್.ಡಿ.ಎಂ.ಸಿ ಅಧ್ಯಕ್ಷರು ಭೀಮ, ಗಟ್ಟುಬಿಚ್ಚಾಲಿ ಶಾಲೆಯ ಮುಖ್ಯಗುರುಗಳಾದ ಸಾಬಣ್ಣ, ತಿಮ್ಮಯ್ಯ ಮುಖ್ಯಗುರುಗಳು, ಸಾವಿತ್ರಿ ಮುಖ್ಯಗುರುಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು ಸುತ್ತ-ಮುತ್ತಲಿನ ಶಾಲೆಯ ಶಿಕ್ಷಕರಗಳು ಭಾಗವಸಿದ್ದು ಇನ್ನೂ ನೂರಾರು ಜನ ಊರಿನ ಹಿರಿಯರು-ಕಿರಿಯರು, ಶಾಲಾ ಮಕ್ಕಳು, ಹಳೆಯ ವಿದ್ಯಾರ್ಥಿಗಳು ಇನ್ನಿತರು ಭಾಗವಹಿಸಿದ್ದರು.