ನವೆಂಬರ್ ೨೮ ರಂದು ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ

ಶಹಾಪುರ : ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ನವೆಂಬರ್ 28ರಂದು ಬೃಹತ್ ಪ್ರತಿಭಟನೆ ನಡೆಯಲಿದ್ದು ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ೨೮ ರಂದು ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಅಂಗನವಾಡಿ ನೌಕರರು ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನುವ ತಿಳುವಳಿಕೆ ಪತ್ರವನ್ನು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಮೀನಾಕ್ಷಿ ಪಾಟೀಲ್ ಅವರಿಗೆ ಸಲ್ಲಿಸಲಾಯಿತು.

“ಕರ್ನಾಟಕ  ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕ ಸಮಿತಿ ವತಿಯಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಅಂಗನವಾಡಿ ನೌಕರರ ಹೋರಾಟದ ಮಾಹಿತಿ ಪತ್ರ ನೀಡಿದರು”

ಈ ಹೋರಾಟದ ಮುಂದಾಳತ್ವ ವಹಿಸಿ ಮಾತನಾಡಿದ ಅಂಗನವಾಡಿ ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಸಲಿಂಗಮ್ಮ ನಾಟೇಕಾರ್ ಅವರು,೧೯೭೫ ರಲ್ಲಿ ಐಸಿಡಿಎಸ್ ಯೋಜನೆ ಜಾರಿಗೆ ಬಂದು ೪೯ ವರ್ಷಗಳೇ ಕಳೆದರೂ ಈ ಯೋಜನೆಯನ್ನು ಬಲಿಷ್ಠಗೊಳಿಸಲು ಮತ್ತು ಖಾಯಂ ಮಾಡಲು ಆಗಲಿಲ್ಲ ಬದಲಿಗೆ ಈ ಯೋಜನೆಗೆ ಕೊಡಬೇಕಾದ ಅನುದಾನಗಳನ್ನು ಸತತವಾಗಿ ಕಡಿಮೆ ಮಾಡಲಾಗುತ್ತಾ ಬರಲಾಗುತ್ತಿದೆ, ಯೋಜನಾ ಆಯೋಗವನ್ನು ರದ್ದು ಮಾಡಿ ನೀತಿ ಆಯೋಗವನ್ನು ರಚಿಸಿದ ನಂತರ ಈ ಯೋಜನೆಗೆ ಕೇಂದ್ರದ ಪಾಲು ೬೦% ಹಾಗೂ ರಾಜ್ಯದ ಪಾಲು ೪೦% ಅನುದಾನವನ್ನು ಕಡಿತ ಮಾಡಿ ರಾಜ್ಯ ಸರ್ಕಾರಗಳ ಮೇಲೆ ಹೊರೆ ಹೊರಿಸಲಾಗಿದೆ.

ಬೆಲೆ ಏರಿಕೆ ಆಧಾರದಲ್ಲಿ ಬಜೆಟ್‌ನಲ್ಲಿ ಅನುದಾನ ಹೆಚ್ಚಿಸುವ ಬದಲಿಗೆ ೬೦% ಅನುದಾನದಲ್ಲಿಯೂ ಕಡಿತ ಮಾಡುತ್ತಿದೆ, ಮಾತ್ರವಲ್ಲದೆ ಮಂಜೂರಾದ ಅನುದಾನವನ್ನು ಪೂರ್ಣ ಖರ್ಚು ಮಾಡದೇ ೪೦% ಮಾತ್ರ ಪೌಷ್ಠPತೆÀ ಕಾರ್ಯಕ್ರಮಗಳಿಗೆ ವೆಚ್ಚಮಾಡಿ ಉಳಿದ ಅನುದಾನವನ್ನು ಬಳಕೆ ಮಾಡದೇ ಇರುವುದು ಸರ್ಕಾರ ಆಡಳಿತ ವೈಖರಿ ಆಗಿದೆ. ಐಸಿಡಿಎಸ್ ಅನ್ನು ಬಲಿಷ್ಠಗೊಳಿಸಿ ಅದಕ್ಕೆ ಬೇಕಾದ ಅಗತ್ಯ ಬಜೆಟ್‌ನ್ನು ಒದಗಿಸುವುದರ ಬದಲಿಗೆ ಬೇರೆ ಬೇರೆ ಹೆಸರುಗಳಲ್ಲಿ ಅನುದಾನ ಕೊಡುವುದನ್ನು ಗಮನಿಸಬೇಕಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಸಂಘಟನೆ ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಅವರು ಅನುದಾನ ವಿಳಂಭ ಹಾಗೂ ಬಜೆಟ್ ಕಡಿತದಿಂದ ಮೊಬೈಲ್‌ಗಳಿಗೆ ಕರೆನ್ಸಿ ಇಲ್ಲ, ವರ್ಷಕ್ಕೊಮ್ಮೆ ಸಮವಸ್ತçದ (ಸೀರೆಯ) ಹಣವೂ ಇಲ್ಲ, ಸರ್ಕಾರದ ವೆಚ್ಚವನ್ನು ಉಳಿಸುವ ಸಲುವಾಗಿ, ದೇಶದಲ್ಲಿರುವ ೨೭ ಲಕ್ಷ ಜನರಿಗೆ ಕನಿಷ್ಠ ೨೧ ಸಾವಿರ ವೇತನ ಕೊಟ್ಟರೆ ೧ ವರ್ಷಕ್ಕೆ ತಗಲುವ ವೆಚ್ಚ ೬೮ ಸಾವಿರ ಕೋಟಿ ಮಾತ್ರವೇ, ಹಾಗೆಯೇ ಆಹಾರ-ಆರೋಗ್ಯ-ಶಿಕ್ಷಣಕ್ಕೆ ಅಗತ್ಯವಿರುವ ಅನುದಾನಗಳನ್ನು ಕೊಡಲು ಭಾರತದಲ್ಲಿ ೧೦೦ ಕೋಟಿ ಒಡೆತನವಿರುವ ಶ್ರೀಮಂತರ ಮೇಲೆ ಒಂದು ಬಾರಿ ೨% ತೆರಿಗೆ ಹಾಕಿದರೆ ೩೮ ಲಕ್ಷ ಕೋಟಿ ಸಂಗ್ರಹವಾಗುತ್ತದೆ. ಮಾತ್ರವಲ್ಲದೆ ವಾರಸುದಾರಿಕೆ ತೆರಿಗೆಯನ್ನು ಹಾಕಿದರೆ ಪ್ರತಿವರ್ಷ ೧೪ಲಕ್ಷಕೋಟಿಗಳು ಸರ್ಕಾರಕ್ಕೆ ಆದಾಯ ಬರುತ್ತದೆ. ಇದರಿಂದ ಗ್ರಾಮೀಣ ಭಾರತವನ್ನು ಸಮೃದ್ಧಿಗೊಳಿಸಲು ಸಾಕಷ್ಟು ಸಹಾಯವಾಗುತ್ತದೆ.

ಸರ್ಕಾರಿ ಹಿತ್ತ ಕಡೆ ಗಮನ ಹರಿಸಬೇಕಾಗಿದೆ. ರಾಜ್ಯದ ಆಯ್ದ ೨೬೨ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸುವ ಕುರಿತು ೧೧/೮/೨೦೨೩ ರ ಆದೇಶ ವಾಪಸ್ಸಾಗಬೇಕು. ಅಂಗನವಾಡಿಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ನೀಡುವಂತಾಗಬೇಕು.
ಪAಚಾಯತ್ ರಾಜ್ ಇಲಾಖೆ ೪೦೦೦ ಕೂಸಿನ ಮನೆಗಳನ್ನು ತೆರೆಯುವುದನ್ನು ಕೈ ಬಿಟ್ಟು ಇಲಾಖೆಯಿಂದಲೇ ಶಿಶುಪಾಲನಾ ಕೇಂದ್ರ ಪ್ರಾರಂಬಿಸಬೇಕು. ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಲಿ ಶಿಶುಪಾಲನಾ ಕೇಂದ್ರ ತೆರೆಯುವುದನ್ನು ಕೂಡಲೇ ನಿಲ್ಲಿಸಬೇಕು. ಕನಿಷ್ಠ ೩ ತಿಂಗಳಿಗೊಮ್ಮೆ ಇಲಾಖೆ ಸಚಿವರು, ಅಧಿಕಾರಿಗಳು ಸಂಘಟನೆಗಳೊAದಿಗೆ ಜಂಟೀ ಸಭೆ ನಡೆಸಬೇಕು.

ಗ್ರಾಚ್ಯುಟಿಯನ್ನು ಕೂಡಲೇ ಎಲ್ಲರಿಗೂ ಜಾರಿ ಮಾಡಬೇಕು.ಅವಧಿ ಮೀರಿದ ಮೊಬೈಲ್ ವಾಪಸ್ಸುಪಡೆದು ಗುಣಮಟ್ಟದ ಮೊಬೈಲ್ ಖರೀದಿಸಿ ಕೊಡಬೇಕು ಸರ್ಕಾರದ ಹಣದಿಂದಲೇ ರಿಚಾರ್ಜ್ ಮಾಡಿಸಬೇಕು. ಎನ್ನುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು,
ಇದೆ ವೇಳೆ, ಅಂಗನವಾಡಿ ನೌಕರ ಸಂಘದ ವಡಗೇರಾ ತಾಲೂಕ ಅಧ್ಯಕ್ಷೆ ಇಂದಿರಾ ದೇವಿ ಕೊಂಕಲ್, ತಾಲೂಕ ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ, ಚಂದಮ್ಮ ನಾಯ್ಕಲ್, ಉಪಾಧ್ಯಕ್ಷೆ ರೇಣುಕಾ ಹೊಸಮನಿ, ಖಜಂಚಿ ಲಕ್ಷ್ಮೀ ಶಹಾಪುರ, ಮಹದೇವಿ ತಡಿಬಿಡಿ, ಲಕ್ಷ್ಮಿ ಗೋಗಿ, ಶಾರದಾ ನಂದಿಹಳ್ಳಿ ಇದ್ದರು.

About The Author