ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಅಪ್ಪಟ ದೇಶಭಕ್ತ : ಬಾಶುಮಿಯ ನಾಯ್ಕೋಡಿ

yadagiri ವಡಗೇರಾ : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಜರತ್ ಟಿಪ್ಪು ಸುಲ್ತಾನರ 273 ನೇ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಬಾಶುಮಿಯ ನಾಯ್ಕೋಡಿ ಡಾ. ಬಿ .ಆರ್ ಅಂಬೇಡ್ಕರ್ ಹಾಗೂ ಟಿಪ್ಪು ಸುಲ್ತಾನರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
                ಟಿಪ್ಪು ಸುಲ್ತಾನ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಮೊಟ್ಟ ಮೊದಲಿಗೆ ರೇಷ್ಮೆ ಬೆಳೆ ಪರಿಚಯಿಸುವುದರ ಜೊತೆಗೆ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದಂತ ಮಹಾನ್ ವ್ಯಕ್ತಿ ಮೈಸೂರು ಸುತ್ತಮುತ್ತಲಿನ ಹಿಂದೂ ದೇವಾಲಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದ್ದಾರೆ. ಅವರು ಯಾವುದೇ  ರೀತಿಯ ಜಾತಿ ಭೇದಭಾವ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆ ಹೊಂದಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದಂತ ಮಹಾನ್ ವ್ಯಕ್ತಿ ಎಂದು ಹೇಳಿದರು.
                 ಈ ಸಂದರ್ಭದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ  ಕಲ್ಯಾಣ ಕರ್ನಾಟಕ ಸಂಚಾಲಕ ಶರಣು ಇಟಗಿ, ಸೈಯದ್ ಕಾರ್ಪೆಂಟರ್, ತಿಮ್ಮಣ್ಣ ಕಡೆಚೂರ, ಮರಿಲಿಂಗ ಗೋನಾಲ್, ಶಿಕ್ಷಕ ದೇವೇಗೌಡ ಬಿರಾದಾರ,ಗುರು ನಾಟೇಕಾರ,ಶರಣು ಜಡಿ,ಸತೀಶ್ ಪೂಜಾರಿ,ಮೈಬುಬ ಮುಲ್ಲಾ, ಮಲ್ಲಪ್ಪ ನಾಟೇಕಾರ,ಮರೇಪ್ಪ ಬಾಡದ,ಇಮಾಮ ಖುರೇಶಿ,  ಇನ್ನಿತರರು ಇದ್ದರು.

About The Author