ಸಮಾಜದ ಒಳಿತಿಗಾಗಿ ಕೆಲಸ ಮಾಡಿ ಬಿ.ಎಮ್ ಪಾಟೀಲ್ ಕರೆ

ರಾಯಚೂರು : ಸಮಾಜದ ಒಳಿತಿಗಾಗಿ ಹೋರಾಟ ಮಾಡಿ. ಯಾವುದೇ ಸಮಸ್ಯೆಗಳಿದ್ದರೆ, ಕುಂದು ಕೊರತೆಗಳಿದ್ದರೆ ನಮ್ಮಲ್ಲಿಯೆ ಪರಿಹರಿಸಿಕೊಳ್ಳಿ. ಪ್ರತಿ ಗ್ರಾಮದಲ್ಲಿಯೂ ಕೂಡ ಸಂಘಟನೆಯನ್ನು ಮಾಡಿ ಎಂದು ರಾಜ್ಯ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಅಧ್ಯಕ್ಷರಾದ ಬಿಎಮ್ ಪಾಟೀಲ್ ಕರೆ ನೀಡಿದರು. ಇಂದು ಸಿಂಧನೂರು ನಗರದ ಪ್ರವಾಸಿ ಮಂದಿರದಲ್ಲಿ ಸಿಂಧನೂರು ತಾಲೂಕಿನ ಯುವ ಕುರುಬರ ಘಟಕದ ತಾಲೂಕು ಸಮಿತಿ ರಚನೆಯ ಸಂದರ್ಭದಲ್ಲಿ ಮಾತನಾಡಿದವರು.
                               ಹಿಂದುಳಿದ ವರ್ಗದ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿರುವುದು ಕುರುಬ ಸಮಾಜದ ಹೆಮ್ಮೆ. ಎರಡನೇ ಹಂತದ ನಾಯಕರು ಮುಖ್ಯಮಂತ್ರಿ ಆಗಿರುವುದು ಇತರರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಇದನ್ನು ನಾವು ತಲೆಕೆಡಿಸಿಕೊಳ್ಳದೆ ಹೋರಾಡಬೇಕಿದೆ. ರಾಜ್ಯದಲ್ಲಿ ಕುರುಬ ಸಮಾಜವನ್ನು ಎಸ್ ಟಿ ಸೇರ್ಪಡೆಗಾಗಿ  ಹೋರಾಡಬೇಕು ಎಂದರು.
                  ರಾಯಚೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ ಪಾಟೀಲ್ ಮಾತನಾಡಿ ರಾಜ್ಯದಲ್ಲಿಯೇ ಕುರುಬ ಸಮಾಜ  ದೊಡ್ಡ ಸಮಾಜ. ಯಾವುದೇ ಸಮಸ್ಯೆಗಳು ಬಂದರೂ ನಾವೆಲ್ಲರೂ ಒಗ್ಗಟ್ಟಾಗಿ ಕ ಕೆಲಸ ಮಾಡೋಣ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಿಂಧನೂರು ತಾಲೂಕು ಅಧ್ಯಕ್ಷರನ್ನಾಗಿ ವೀರೇಶ್ ಎಂ, ಉಪಾಧ್ಯಕ್ಷರನ್ನಾಗಿ ಗಾದಿಲಿಂಗಪ್ಪ ಮಾಡಸಿರ್ವಾಳ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಒಳಬಳ್ಳಾರಿ, ಖಜಾಂಚಿಯಾಗಿ ಸುರೇಶಗೌಡ ದಡೆಸುಗೂರು, ಸದಸ್ಯರಾಗಿ ದೇವರಾಜ ರವರನ್ನು ಆಯ್ಕೆ ಮಾಡಲಾಗಿದ್ದು. ಪದಗ್ರಹಣ ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮದಲ್ಲಿ ನಿರುಪಾದಿ ಸುಕಾಲಪೇಟೆ, ಮುತ್ತು ಬರ್ಸಿ, ಶಿವು ಬಿಂಗಿ ಗಂಗಣ್ಣ ಸೇರಿದಂತೆ ಇತರರು ಇದ್ದರು.

About The Author