ಬರ ಪರಿಹಾರ ನೀಡುವುದರಲ್ಲಿ ಕೇಂದ್ರ ಸರಕಾರದ ಮಲತಾಯಿ ಧೋರಣೆ ಮಾಡುತ್ತಿದೆ ಪಾಟೀಲ್ ಆಕ್ರೋಶ

ಶಹಪುರ : ಈ ವರ್ಷ ರಾಜ್ಯದಲ್ಲಿ ಮುಂಗಾರಿನ ಮಳೆಯ ಕೊರತೆಯಿಂದ ಬರ ಆವರಿಸಿದೆ. ಕೇಂದ್ರ ತಂಡದವರು ಬರ ಅಧ್ಯಯನ ಮಾಡಿಕೊಂಡು ಹೋದರು. ಕೇಂದ್ರ ಸರಕಾರ ಇನ್ನು ಅನುದಾನ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಸಚಿವರಾದ ಎಚ್ ಕೆ ಪಾಟೀಲರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ 37 ಸಾವಿರ ಕೋಟಿ ಬೆಳೆ ಹಾನಿಯಾಗಿದೆ. ಮೂರು ಸಾವಿರ ಕೋಟಿ ಬರ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಲ್ಕು ಬಾರಿ ಪ್ರಧಾನಮಂತ್ರಿ ಭೇಟಿಗಾಗಿ ಸಮಯ ಕೇಳಿದ್ದರೂ ಪ್ರಧಾನ ಮಂತ್ರಿಗಳು ಸಮಯ ನೀಡಿಲ್ಲ. ಕೃಷಿ ಸಚಿವರಾದ ಕೃಷ್ಣಭೈರೇಗೌಡ ಮತ್ತು ಸಚಿವರಾದ ಪ್ರಿಯಾಂಕ ಖರ್ಗೆ ರವರು ಕೂಡ ಪ್ರಧಾನಮಂತ್ರಿ ಭೇಟಿಗೆ ಸಮಯ ನೀಡಿಲ್ಲ.
 ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈಗ ಬರ ಪರಿಹಾರ ಅಧ್ಯಯನ ಮಾಡಲು ಹೊರಟಿದ್ದಾರೆ. ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರಕಾರಕ್ಕೆ ಬರ ಪರಿಹಾರ ಕೇಳಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಯಡಿಯೂರಪ್ಪನವರು ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎನ್ನುತ್ತಾರೆ. ರಾಜ್ಯ ಸರ್ಕಾರ ಬಡವರಿಗೆ ಅನ್ನಭಾಗ್ಯ, ಉಚಿತವಾಗಿ ಗೃಹಜ್ಯೋತಿ, ಪ್ರತಿ ಕುಟುಂಬಕ್ಕೆ ಎರಡು ಸಾವಿರ ರೂಪಾಯಿಯಂತೆ ಗೃಹಲಕ್ಷ್ಮಿ ಯೋಜನೆಯನ್ನು ಬಡವರ ಹೇಳಿಕೆಗಾಗಿ ತಂದಿದ್ದೇವೆ. ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ರಾಜ್ಯದಲ್ಲಿ ಶೇ. 97 ರಷ್ಟು ಈ ಯೋಜನೆಗಳು ಈಡೇರಿವೆ. ಇದು ಆರ್ಥಿಕ ಸಂಕಷ್ಟವೇ ಎಂದು ಪ್ರಶ್ನಿಸಿದರು. ಮಾಜಿ ಮುಖ್ಯಮಂತ್ರಿಗಳು ಮಾತನಾಡುವ ಮೊದಲು ಎಚ್ಚರಿಕೆವಹಿಸಿ ಮಾತನಾಡಬೇಕು ಎಂದರು.
ಬಡವರ ಏಳಿಗೆಗಾಗಿ 53 ಸಾವಿರ ಕೋಟಿ ಅನುದಾನವನ್ನು ನಮ್ಮ ಭರವಸೆ ಯೋಜನೆಗಳಿಗಾಗಿ ಜನರಿಗೆ ತಲುಪಿಸುತಿದ್ದೇವೆ. ಆದರೆ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿದರು. ರಾಜ್ಯದ ಮುಖ್ಯಮಂತ್ರಿಗಳು ಒಂದು ಕೋಟಿ 15 ಲಕ್ಷ ಬಡತನ ರೇಖೆಗಿಂತ ಕೆಳಗಿರುವ 50 ಸಾವಿರ ಕುಟುಂಬಗಳಿಗೆ ಉಚಿತ ಭರವಸೆ ಕೊಟ್ಟಂತಹ ಶ್ರೇಷ್ಠ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಮುಖ್ಯಮಂತ್ರಿಗಳನ್ನು ಕೊಂಡಾಡಿದರು.

About The Author