360 ದೇವಸ್ಥಾನ, 360 ಭಾವಿಗಳು, 1000ಕ್ಕೂ ಹೆಚ್ಚು ಶಿವಲಿಂಗಗಳಿರುವ ರಾಷ್ಟ್ರಕೂಟರ ಐತಿಹಾಸಿಕ ಸ್ಥಳ ಶಿರ್ವಾಳಕ್ಕೆ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಭೇಟಿ | ಸ್ಮಾರಕಗಳ ರಕ್ಷಣೆಗೆ ಒತ್ತು | ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಲು ಗ್ರಾಮಸ್ಥರ ಸಹಕಾರ ಅಗತ್ಯ : ಎಚ್. ಕೆ. ಪಾಟೀಲ್

ಶಹಾಪುರ : ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಮಾಡುವ ಉದ್ದೇಶ,ಹಿಂದಿನ ರಾಜರ ಕಾಲದ ಸ್ಮಾರಕಗಳನ್ನು ದರ್ಶನ ಮಾಡುವುದು ಮತ್ತು ಸಂರಕ್ಷಣೆ ಮಾಡುವುದಾಗಿದೆ ಎಂದು ಪ್ರವಾಸೋದ್ಯಮ ಹಾಗೂ ಕಾನೂನು ಸಂಸದೀಯ ಸಚಿವರಾದ ಎಚ್ ಕೆ ಪಾಟೀಲ್ ಹೇಳಿದರು. ತಾಲೂಕಿನ ಶಿರವಾಳ ಗ್ರಾಮದಲ್ಲಿನ ಐತಿಹಾಸಿಕ ಸ್ಥಳವಾದ ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದರು.

ಶಿರವಾಳ : ಪಾಳು ಬಿದ್ದ ಶಿವ ದೇವಾಲಯಗಳಲ್ಲಿ ದನಕರುಗಳು ಸೇರಿದಂತೆ ಹಂದಿಗಳು ಓಡಾಡುತ್ತಿರುವುದು.

*****
ಶಿರವಾಳ ಗ್ರಾಮದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿತವಾದ 360 ದೇವಸ್ಥಾನಗಳು, 360 ಭಾವಿಗಳು ಹಾಗೂ ಸಾವಿರಕ್ಕೂ ಹೆಚ್ಚು ಶಿವಲಿಂಗಗಳಿವೆ ಎನ್ನಲಾಗಿದ್ದು, ಇಲ್ಲಿನ ಸ್ಮಾರಕಗಳ ರಕ್ಷಣೆ ನಮ್ಮ ಸರ್ಕಾರದ ಹೊಣೆಯಾಗಿದೆ. ಇಂತಹ ಸ್ಥಳಗಳ ಸಂರಕ್ಷಣೆಗಾಗಿ ಸರ್ಕಾರದ ಜೊತೆಗೆ ಗ್ರಾಮಸ್ಥರು, ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದರು. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳು ಸಪ್ಟಂಬರ್ 25ರಂದು ಸ್ಮಾರಕಗಳ ದತ್ತು ತೆಗೆದುಕೊಳ್ಳುವ ಯೋಜನೆಗೆ ಚಾಲನೆ ನೀಡಿದರು ಎಂದು ತಿಳಿಸಿದರು.

ಸಿದ್ಧಲಿಂಗೇಶ್ವರ ದೇವಸ್ಥಾನ

*****
ಶಿರವಾಳ ಗ್ರಾಮ ದಕ್ಷಿಣ ಕಾಶಿ ಎಂದು ಕರೆಯುತ್ತೇವೆ. ಇಲ್ಲಿನ ಸ್ಮಾರಕಗಳ ರಕ್ಷಣೆಗೆ ಗ್ರಾಮಸ್ಥರು ಸಹಕರಿಸಬೇಕು. ಈ ಆರ್ಥಿಕ ವರ್ಷದಲ್ಲಿ ಇಲ್ಲಿನ ಎರಡು ದೇವಸ್ಥಾನಗಳನ್ನು ದತ್ತು ಕೊಡಲಾಗುವುದು. ಮುಂದಿನ ಆರ್ಥಿಕ ವರ್ಷದಲ್ಲಿ ಐದು ದೇವಸ್ಥಾನಗಳನ್ನು ದತ್ತು ಕೊಡಲಾಗುವುದು ಎಂದರು. ಶಿರವಾಳ ಗ್ರಾಮ,ಪ್ರವಾಸಕ್ಕೆ ಆಕರ್ಷಣೀಯ ಸ್ಥಳವಾಗಿದೆ.ಶಿರವಾಳದಲ್ಲಿನ ಸ್ಮಾರಕಗಳು, ದೇವಸ್ಥಾನಗಳು, ಹಂಪಿಯ ಜೊತೆ ಹೋಲಿಕೆ ಮಾಡಲಾಗುತ್ತದೆ ಎಂದರು.
ಶಾಸಕರಾದ ಚನ್ನಾರೆಡ್ಡಿ ತುನ್ನೂರು, ಜಿಲ್ಲಾಧಿಕಾರಿ ಸುಶೀಲ,ಜಿಪಂ.ಸಿಇಓ ಗರಿಮಾ ಪನ್ವಾರ್, ಮಾಜಿ ಶಾಸಕರಾದ ಗುರುಪಾಟೀಲ್,ಅಮಾತೆಪ್ಪ ಕಂದಕೂರು, ಪುರಾತತ್ವ ಇಲಾಖೆಯ ನಿರ್ದೇಶಕರಾದ ದೇವರಾಜ, ನಗರಸಭೆ ಸದಸ್ಯರಾದ ಸುಧೀಂದ್ರ ಪಾಟೀಲ್, ಮುಖಂಡರಾದ ನಿಂಗಣ್ಣ ನಾಯ್ಕೋಡಿ ಸೇರಿದಂತೆ ಇತರ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

ರಾಷ್ಟ್ರಕೂಟರ ಐತಿಹಾಸಿಕ ಸ್ಮಾರಕಗಳು

*****
ಶಿರವಾಳ ಗ್ರಾಮದಲ್ಲಿರುವ ಸ್ಮಾರಕಗಳು ಮತ್ತು ದೇವಸ್ಥಾನಗಳು ಪಾಳು ಬಿದ್ದಿವೆ.ಗ್ರಾಮದಲ್ಲಿ 360 ಶಿವದೇವಾಲಯಗಳಿವೆ. 360 ಭಾವಿಗಳಿವೆ. ಸಾವಿರಕ್ಕೂ ಹೆಚ್ಚು ಶಿವಲಿಂಗಗಳಿವೆ ಎನ್ನುವ ಪ್ರತೀತ. ಇದು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿತವಾದ ಈ ದೇವಸ್ಥಾನಗಳು ಶಿರ್ವಾಳ ಗ್ರಾಮದ ಜನರು ದೇವಸ್ಥಾನಗಳಿಗೆ ಮನೆಗಳ ಗೋಡೆಗಳನ್ನಾಗಿ ನಿರ್ಮಿಸಿಕೊಂಡಿದ್ದಾರೆ. ದುರಾದೃಷ್ಟವೆಂದರೆ ಕೆಲವು ಶಿವಲಿಂಗಗಳು ಹಣದಾಸೆಗಾಗಿ ಕಳವು ಮಾಡಲಾಗಿದೆ. ಕೆಲವು ದೇವಸ್ಥಾನಗಳು ಪಾಳು ಬಿದ್ದಿವೆ. ಕೆಲವು ದೇವಸ್ಥಾನಗಳು ಭೂಮಿಯ ಆಳದಲ್ಲಿ ಹೂತು ಹೋಗಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಕೆಲವು ದೇವಸ್ಥಾನಗಳಲ್ಲಿ ಹಂದಿಗಳು ಓಡಾಡುತ್ತಿವೆ. ಕೆಲವು ದೇವಸ್ಥಾನಗಳಲ್ಲಿ ಸಾರ್ವಜನಿಕರು ವಾಸ ಮಾಡುತ್ತಿರುವುದು ಆತಂಕದ ವಿಷಯ.ಇದನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿ ಪ್ರವಾಸೋದ್ಯಮ ಗ್ರಾಮವನ್ನಾಗಿ ಮಾಡಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಐತಿಹಾಸಿಕ ಶಿವಲಿಂಗಗಳು

******
ಪ್ರಪಂಚದ ಮೊದಲ ಕನ್ನಡ ವಿಶ್ವವಿದ್ಯಾಲಯ ನಾಗಾವಿ ವಿಶ್ವವಿದ್ಯಾಲಯ 
ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲರು ಕಲಬುರ್ಗಿ ಜಿಲ್ಲೆಯ ನಾಗಾವಿ ಪ್ರದೇಶಕ್ಕೆ ಭೇಟಿ ನೀಡಿ, ಜಗತ್ತಿನಲ್ಲಿ ಮೊದಲ ಕನ್ನಡ ವಿಶ್ವವಿದ್ಯಾಲಯ ನಾಗಾವಿಯಲ್ಲಿರುವುದು ಇಲ್ಲಿನ ಸ್ಮಾರಕಗಳೆ ಸಾಕ್ಷಿ ಎಂದರು. ನಲಂದ ವಿಶ್ವವಿದ್ಯಾಲಯಕ್ಕಿಂತ ಮೊದಲೇ ನಾಗಾವಿ ವಿಶ್ವವಿದ್ಯಾಲಯವಿತ್ತು ಎನ್ನುವುದಕ್ಕೆ ಇಲ್ಲಿನ ಸ್ಮಾರಕಗಳು ಸಾಕ್ಷಿಯಾಗಿವೆ. ಅಲ್ಲಿನ ದ್ವಾರ ಬಾಗಿಲುಗಳು, ತರಗತಿ ಕೋಣೆಗಳು,  ನಮ್ಮ ಕಣ್ಣಿಗೆ ಗೋಚರಿಸುತ್ತಿವೆ. ಇಂಥವುಗಳನ್ನು ನಾವು ರಕ್ಷಿಸಿದರೆ ಮುಂದಿನ ಪೀಳಿಗೆಗೆ ಇತಿಹಾಸದ ಪರಿಕಲ್ಪನೆ ಜನರಿಗೆ ಬರುತ್ತದೆ ಎಂದರು.

ಐತಿಹಾಸಿಕ ಶಿಲಾ ಸ್ಮಾರಕಗಳು

*****
ಶಿರವಾಳ ಗ್ರಾಮದ ಐತಿಹಾಸಿಕ ಸ್ಥಳಗಳು ಯಾದಗಿರಿ ಜಿಲ್ಲೆಯ ಇತರ ಸ್ಥಳಗಳು ಸೇರಿದಂತೆ ಹಲವು ಸ್ಥಳಗಳ ಸಂರಕ್ಷಣೆಯ ಅವಶ್ಯಕತೆ ಇದೆ. ಮುಂದಿನ ಪೀಳಿಗೆಗೆ ಇತಿಹಾಸದ ಬಗ್ಗೆ ಪರಿಕಲ್ಪ ಮೂಡಿಸಬೇಕಿದೆ. ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗಾಗಿ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕು. ಇಲ್ಲಿನ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಸರಕಾರ ಮತ್ತು ಜಿಲ್ಲಾಡಳಿತ ನಿಮ್ಮ ಜೊತೆಗಿದೆ.
ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ

About The Author