ಗ್ರಾಮ ಪಂಚಾಯಿತಿ ಸದಸ್ಯ ಕಮಲಾದಾಸ್ ಕಾಂಗ್ರೆಸ್ ಸೇರ್ಪಡೆ

ಶಹಪುರ : ತಾಲೂಕಿನ ರವರು ಕನ್ಯಾ ಕೋಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕಮಲ್ನಾಥ್ ಇಂದು ಸಚಿವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ನಗರದ ಭೀಮರಾಯನ ಗುಡಿ ಪ್ರವಾಸ ಮಂದಿರದಲ್ಲಿ ಸಣ್ಣಕೈಗಾರಿಕೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ  ಸಮ್ಮುಖದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸಣಸಿದ್ದಪ್ಪ ಚಟ್ನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರ ಸೋಫಿಸಾಬ ರಸ್ತಾಪುರ, ದೊಡ್ಡಪ್ಪಗೌಡ ಪಾಟೀಲ, ಬಾಬುರಾವ ತಿಪ್ಪನಹಳ್ಳಿ, ಸಂಗಣ್ಣ ಬೆನಕಹಳ್ಳಿ, ಗೆನುಸಿಂಗ, ನಿಂಬಣ್ಣ, ಮುಖಂಡರಾದ ರಾಯಪ್ಪ ಕನ್ಯಾಕೊಳ್ಳೂರು, ಮಲ್ಲನಗೌಡ ತಿಪ್ಪನಹಳ್ಳಿ, ಮುದಿಯಪ್ಪ ಆಂದೇಲಿ, ಪೂಜಪ್ಪ ಅವಡಿ, ಚಾಂದಬಾಷ ದೊಡ್ಮನಿ, ಬಾಸಮಿಯ್ಯ, ಖಾಜಾಹುಷೇನಿ, ಅಂಬಣ್ಣ ತಿಮ್ಮಯ್ಯ, ಶರಬಣ್ಣ ರಸ್ತಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *