ಗೋಗಿಪೇಠ ಗ್ರಾಮಕ್ಕೆ ಸಚಿವ ದರ್ಶನಾಪುರ ಭೇಟಿ | ವಿವಿಧ ಕಾಮಗಾರಿ ವಿಕ್ಷಣೆ | ಮೂಲಭೂತ ಸೌಕರ್ಯಕ್ಕೆ ಆದ್ಯತೆ

ಶಹಾಪುರ : ತಾಲೂಕಿನ ಗೋಗಿಪೇಠ ಗ್ರಾಮಕ್ಕೆ ಸಣ್ಣಕೈಗಾರಿಕೆ ಸಾರ್ವಜನಿಕ ಉದ್ಯಮ ಹಾಗೂ ಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಯಲ್ಲಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ಕೆಕೆಆರ್‌ಡಿಬಿ, ಶಾಸಕರ ಅನುದಾನದಡಿಯಲ್ಲಿನ  ಸಿಸಿ ರಸ್ತೆ, ಚರಂಡಿ, ಕೆಲಸದ ಸ್ಥಳವನ್ನು ವೀಕ್ಷಿಸಿದರು.
        ಗೋಗಿಪೇಠ ಗ್ರಾಮದಲ್ಲಿ ಭಾವಸಾರ ಕ್ಷತ್ರೀಯ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ೨ಲಕ್ಷ ರೂ ಮಂಜೂರಿಯಾಗಿದ್ದು, ಕಟ್ಟಡ ಪರಿಪೂರ್ಣಗೊಳಿಸಲು ಇನ್ನೂ ೩ಲಕ್ಷ ರೂ, ನೀಡಲಾಗುತ್ತದೆ, ಧಾರ್ಮಿಕ ದತ್ತಿ ನಿಧಿ ಇಲಾಖೆ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಯಲ್ಲಮ್ಮನ ಕಟ್ಟೆಗೆ ೨ಲಕ್ಷ ರೂ ಬಿಡುಗಡೆ ಮಾಡಲಾಗಿದೆ, ಕಾಮಗಾರಿ ನಡೆದಿದೆ. ಅಲ್ಲದೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ೨೦೨೨-೨೩ನೇಯ ಸಾಲಿನ ಬಾಕಿ ಕಾಮಗಾರಿಗೆ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ೫೦ಲಕ್ಷ ರೂ ಅನುದಾನ ಕಲ್ಪಿಸಿದೆ, ಎಂದು ತಿಳಿಸಿದ ಅವರು, ಶಾದಿಖಾನ ನಿರ್ಮಾಣಕ್ಕೆ ೩೫ಲಕ್ಷ ರೂ, ಸೇರಿದಂತೆ ನಾನಾ ಯೋಜನೆಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಅಲ್ಲದೆ ಪ್ರಸಕ್ತ ಸಾಲಿನಲ್ಲಿ, ಗೋಗಿ.ಪಿ ಯಿಂದ ಗೋಗಿ.ಕೆ ಮಾರ್ಗದ ಕರೆಯ ಮೇಲಿನ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುತ್ತಿದೆ ಎಂದು ಸಚಿವರು  ತಿಳಿಸಿದರು.
ಈ ಸಂದರ್ಭದಲ್ಲಿ ಗೋಗಿಪೇಟೆ ಗ್ರಾಮದ ಮಾರುಕಟ್ಟೆ, ಹಾರಣಗೇರಾ, ಅಗಸಿ, ಸಿಸಿ ರಸ್ತೆ ಕಾಮಗಾರಿಯನ್ನು ಪರೀಶೀಲನೆ ಮಾಡಿ, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಬಸವರಾಜ ಸಗರ, ಶಂಕರ ಪಟ್ಲೆಗಾರ, ಮಲ್ಲಯ್ಯ ಲೋಕರೆ, ಬಸವರಾಜಪ್ಪಗೌಡ ತಂಗಡಗಿ, ಮೋಹನರಡ್ಡಿ ಹುಡೇದ, ಚಾಂದಪಾಶಾ, ಅಬಿದಹುಸೇನಿ ಅನ್ವರಿ, ಬಸವರಾಜ ಚೂರಿ, ಮಲ್ಲಿಕಾರ್ಜುನ ತಂಗಡಗಿ, ಮಲ್ಲಣ್ಣ ಗೋಗಿ. ವೆಂಕಟೇಶ ಗುರುಗುಂಟಿ, ಯಮನಪ್ಪ ಹಡಪದ ಸೇರಿದಂತೆ ಅನೇಕರು ಇದ್ದರು.

About The Author