ಜಿಲ್ಲಾ ನೇಕಾರರ ಸಮಾವೇಶ | ಸಮಾಜದ ಅಭಿವೃದ್ಧಿಗೆ ಶ್ರಮಿಸಿ : ಭಂಡಾರಿ

ಶಹಾಪುರ : ನೇಕಾರರು ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಆರ್ಥಿಕವಾಗಿ ಮುಂದೆ ಬರಬೇಕಿದೆ ಎಂದು ಸ್ವಕುಳ ಸಾಳಿ ಸಮಾಜದ ರಾಜ್ಯಾಧ್ಯಕ್ಷ ಸಿಎನ್ ಭಂಡಾರಿ ಹೇಳಿದರು.ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ನೇಕಾರರ ಸಮಾವೇಶ ಅಂಗವಾಗಿ ಚಿಂತನ ಮಂಥನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,ನೇಕಾರಿಕೆಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳ ಮೇಲೆ ಹೊಡೆತ ಬಿದ್ದಿದೆ. ಸರಕಾರ ಸಹಾಯಕ್ಕೆ ಬರಬೇಕು. ವಂಶಪಾರಂಪರ್ಯದಿಂದ ಬಂದ  ನೇಕಾರಿಕೆಯನ್ನು ಹಲವು ಕುಟುಂಬಗಳು ಮುಂದುವರೆಸಿಕೊಂಡು ಬಂದಿದ್ದರೆ, ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ, ವಿದ್ಯುತ್ ದರ ಏರಿಕೆ, ಕಾರ್ಮಿಕರ ಕೊರತೆ, ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಿಡಿತದಿಂದಾಗಿ ಹಲವು ಕುಟುಂಬದವರು ನೆಕಾರಕ್ಕೆ ಬಿಟ್ಟು ಬೇರೆ ಉದ್ಯೋಗ ಅರಸಿಕೊಂಡು ಹೋಗಿದ್ದಾರೆ.

 ನೇಕಾರ ಸಮುದಾಯ ಕೂಡ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸಮುದಾಯ ಆರ್ಥಿಕ, ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ, ಕೈಮಗ್ಗ ಹಾಗೂ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಚೌದರಿ, ಸ್ವಕುಳ ಸಾಳಿ ಸಮಾಜದ ತಾಲೂಕ ಅಧ್ಯಕ್ಷ ರಾಜಕುಮಾರ್ ಚಿಲ್ಲಾಳ, ಮಲ್ಲಯ್ಯ ಫಿರಂಗಿ, ವೀರ ಸಂಗಪ್ಪ ಹಾವೇರಿ, ಸತೀಶ್ ಮಿರ್ಜಿ, ಕೊಟ್ರೇಶ್ ಚಿಲ್ಲಾಳ, ಕುಮಾರಸ್ವಾಮಿ ಸೇರಿದಂತೆ ಸ್ವಕುಳ ಸಾಳಿ ಸಮಾಜದ ಮುಖಂಡರು ಇದ್ದರು.

 

 

 

 

 

 

 

About The Author