ವೈದ್ಯ ಲೋಕದಲ್ಲೊಬ್ಬ ಕನ್ನಡ ಕವಿ ಡಾ.ರಮೇಶ ಸಾಗರ

ಡಾ.ರಮೇಶ ಸಾಗರ್ ಅವರ ಪ್ರಥಮ ಕವನ ಸಂಕಲನ “
*****
ರಾಯಚೂರು : ಸುಂದರ ಕವನ, ಪುಸ್ತಕ ಹಿಡಿದರೆ ಓದಬೇಕೆನಿಸಬೇಕು. ಆ ರೀತಿಯಾಗಿ ಬರೆದು ಕನ್ನಡಿಗರಿಗೆ ಕೊಟ್ಟ ವೈದ್ಯಲೋಕದಲ್ಲೊಬ್ಬ ನಾ ಕಂಡ ಕನ್ನಡ ಕವಿ ಡಾ.ರಮೇಶ ಸಾಗರ. ನೂರಾರು ಸಾಹಿತಿಗಳನ್ನು ನಿವು ಕಂಡಿದ್ದೇವೆ.ಅಂತಹ‌ ರಾಜ್ಯ ನಮ್ಮದು. ಕುವೆಂಪು, ದರಾಬೇಂದ್ರೆ, ವೀರಭದ್ರಪ್ಪ, ಶಿವರಾಮ ಕಾರಂತ, ಮುಕ್ಕಣ್ಣ ಕರಿಗಾರ ಸೇರಿದಂತೆ ಹಲವಾರು ಸಾಹಿತಿಗಳು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಹಿಂದಿನ ದಿನಮಾನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವೈದ್ಯರು ಕೂಡ ನಾವೇನು ಕಡಿಮೆ ಎನ್ನುವಂತೆ ಹಲವು ಕವನ ಸಂಕಲನಗಳನ್ನು ರಚಿಸಿದವರಲ್ಲಿ ವೈದ್ಯ ಲೋಕದಲ್ಲಿ ಒಬ್ಬ ಕವಿರತ್ನ ಕಂಡಿದ್ದು ಡಾ. ರಮೇಶ ಸಾಗರ ಅವರಲ್ಲಿ.ರಾಯಚೂರಿನ ಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞ ಕ್ಯಾನ್ಸರ್ ರೋಗದ ಶಸ್ತ್ರಚಿಕಿತ್ಸಾ ತಜ್ಞ ಜಿಲ್ಲೆಯ ಶ್ರೇಷ್ಠ ವೈದ್ಯರಾದ ಡಾ. ರಮೇಶ ಸಾಗರ ಅವರು ಕೂಡ ಒಬ್ಬ ಕನ್ನಡ ಕವಿಗಳು.ಮೂಲತಃ ವೈದ್ಯರಾದ ಇವರು ವೈದ್ಯ ವೃತ್ತಿಯ ಜೊತೆಗೆ ಕನ್ನಡ ಕವನಗಳನ್ನು ರಚಿಸಿದ್ದಾರೆ. ವೈದ್ಯರಾಗಿದ್ದುಕೊಂಡು ಸಾಹಿತಿಗಳಾಗುವುದು ಅಪರೂಪ.ಆ ಅಪರೂಪದದಲ್ಲಿ ಮೂಡಿಬಂದಿರುವ‌ ಸಾಹಿತಿ ಡಾ. ರಮೇಶ ಸಾಗರ.
ಡಾ.ರಮೇಶ ಸಾಗರ ಅವರು ಕೇಜಿಗಟ್ಟಲೇ ತೂಕದ ಪುಸ್ತಕಗಳು ಮಧ್ಯೆ ಎನ್ನುವ ಮೊದಲ ಕವನ ಸಂಕಲವನ್ನು ಬರೆದು ರಚಿಸಿ ಬಿಡುಗಡೆಗೊಳಿಸಿದ್ದಾರೆ.ಅದರಲ್ಲಿ 31 ಕವನ ಸಂಕಲನಗಳನ್ನು. ಕನ್ನಡದ ಬಗ್ಗೆ ಅಪಾರ ಗೌರವ ಹೊಂದಿರುವವರು ಹಲವು ಕವನಗಳನ್ನು ರಚಿಸುವ ಬಯಕೆ ಒಂದಿದ್ದು ಇನ್ನೂ ಚಾಲ್ತಿಯಲ್ಲಿಟ್ಟುಕೊಂಡಿದ್ದಾರೆ.ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮ ವೃತ್ತಿ ಜೀವನದ ಜೊತೆಗೆ ಹಲವು ಕವನಗಳನ್ನು ಬರೆಯುತ್ತಿರುವ ಹವ್ಯಾಸ ಬಹುದೊಡ್ಡದು. ತಮ್ಮದೇ ಆದ ಆಸ್ಪತ್ರೆಯ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗುವುದರ ಜೊತೆಗೆ ಎಡಬಿಡದೆ ವೈದ್ಯ ವೃತ್ತಿಯ ಕೆಲಸದ ಜೊತೆಗೆ ಕವನಗಳನ್ನು ಬರೆದು ನಮ್ಮೆಲ್ಲರಿಗೂ ಗುಣ ಬಡಿಸುತ್ತಿದ್ದಾರೆ.
ಡಾ.ರಮೇಶ .ಸಿ. ಸಾಗರ.MS,Msh(surgical Oncology) FAMS,FALS,FIAGES,FAIS,CCEPX
ಚಿದಾನಂದ ಕ್ಯಾನ್ಸರ್ ಕೇರ್ ಸೆಂಟರ್ ರಾಯಚೂರು 
****
ಇತ್ತೀಚಿಗೆ ಅವರು ಮೊದಲ ಕವನ ಸಂಕಲನವನ್ನು ಬಿಡುಗಡೆ ಮಾಡಿದ್ದು, ಆ ಸುಂದರ ಪುಸ್ತಕವನ್ನು ಒಮ್ಮೆ ಓದಿ ನೋಡಿ. ಜೊತೆಗೆ ಮುಂದಿನ ದಿನಮಾನಗಳಲ್ಲಿ ಅವರ ಸುಂದರ ಕವನಗಳು ಇನ್ನು ಹೆಚ್ಚು ಮೂಡಿ ಹೊರಬರಲಿ ಎಂದು ಆಶಿಸೋಣ.

About The Author