ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಮತ್ತೆ ಚಂಪಾ ಅಭ್ಯರ್ಥಿ! | MLC ಚುನಾವಣೆ ಐದು ಕ್ಷೇತ್ರಗಳಿಗೆ ಕಾಂಗ್ರೇಸ್ ಟಿಕೆಟ್ ಘೋಷಣೆ !

BREAKING ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಮತ್ತೆ ಚಂಪಾ ಅಭ್ಯರ್ಥಿ !

ಬೆಂಗಳೂರು : ಮುಂಬರುವ ಎಂಎಲ್ಸಿ ಚುನಾವಣೆಗೆ‌ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ !ಬೆಂಗಳೂರು ಪದವಿಧರ ಕ್ಷೇತ್ರಕ್ಕೆ ರಾಮೋಜಿಗೌಡ, ಅದರಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣಗೆ ಟಿಕೆಟ್ ಘೋಷಣೆ ಮಾಡಿದೆ. ಬೆಂಗಳೂರು ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಕೆಕೆ ಮಂಜುನಾಥ ಮತ್ತು ಬೆಂಗಳೂರಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಈಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಟಿ.ಡಿ.ಶ್ರೀನಿವಾಸ್ ಗೆ ಟಿಕೆಟ್ ನೀಡಿದೆ.ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಮತ್ತೆ ಪ್ರಸಕ್ತ ಎಂಎಲ್ಸಿ ಚಂಪಾ ಅಂದರೆ ಚಂದ್ರಶೇಖರ ಪಾಟೀಲ್ ಅವರಿಗೆ ನೀಡಿದೆ ಎಂದು ತಿಳಿದು ಬಂದಿದೆ.