ಡಿಡಿಯು ಕಾನ್ವೆಂಟ್ ಶಾಲೆಯಲ್ಲಿ ವಾಲ್ಮೀಕಿ ಜಯಂತಿ

ಶಹಾಪುರ : ತಾಲೂಕಿನ ಡಿಡಿಯು ಕಾನ್ವೆಂಟ್ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.ಸಂಸ್ಥೆಯ ಕಾರ್ಯದರ್ಶಿಗಳಾದ ದೇವೇಂದ್ರಪ್ಪ ಮೇಟಿ ಮಾತನಾಡಿ, ಈ ಸೃಷ್ಟಿ ಇರುವ ತನಕ ರಾಮಾಯಣ ಎಂಬ ಮಹಾಕಾವ್ಯವು ಲೋಕದಲ್ಲಿ ಪ್ರಸಿದ್ಧವಾಗಿರುತ್ತದೆ. ವಾಲ್ಮೀಕಿ ರಾಮಾಯಣವು ರಾಮನನ್ನು ನಿತ್ಯ ಸತ್ಯವನ್ನಾಗಿಸಿದೆ. ರಾಮಾಯಣ ಎಂದರೆ ಅದು ಮಾತಿನ ಮಹಿಮೆ. ರಾಮನ ಹುಟ್ಟಿನಿಂದ ರಾವಣನ ಅಂತ್ಯದವರೆಗೂ ಮಾತಿನ ಶಕ್ತಿಯನ್ನು ಕಾಣುತ್ತೇವೆ. ಇಂಥದೊಂದು ಅಪೂರ್ವ ಕಾವ್ಯವನ್ನು ಸೃಷ್ಟಿಸಿದ ಋಷಿ ಕವಿ ವಾಲ್ಮೀಕಿ ಮಹಾಕವಿ ಎಂದು ಹೇಳಿದರು. ಮಕ್ಕಳಿಗೆ ರಾಮಾಯಣ ಕುರಿತು ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ, ಭಾಷಣ ಸ್ಪರ್ಧೆ ಏರ್ಪಡಿಸಿ ವಾಲ್ಮೀಕಿಯ ಬಗ್ಗೆ ಸಮಗ್ರವಾದ ಜ್ಞಾನವನ್ನು ನೀಡಿದರೆ ಮಕ್ಕಳು ಕೂಡ ಅವರ ಆದರ್ಶಗಳನ್ನು ಅಳವಡಿ‌ಸಿಕೊಳ್ಳುವರು ಎಂದರು.  ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

About The Author