ಅಧಿಕಾರಿಗಳ ನಿರ್ಲಕ್ಷ | ಕೊನೆ ಭಾಗದ ರೈತರಿಗೆ ತಲುಪದ ನೀರು | ರೈತ ಸಂಘದಿಂದ ಹೋರಾಟದ ಎಚ್ಚರಿಕೆ

ಕೊನೆ ಭಾಗದ ರೈತರಿಗೆ ನೀರಿಲ್ಲ : ಪಂಪ್ ಸೆಟ್ ಗಳ ಮೂಲಕ ಬೆಳೆಗಳಿಗ ನೀರುಣಿಸಿ ಬೆಳೆ ಉಳಿಸಿಕೊಳ್ಳಲು ರೈತರ ಹೋರಾಟ

ಯಾದಗಿರಿ: ವಡಗೇರಾ : ಪಟ್ಟಣದ ಯುವ ರೈತ ಕಾಶಿನಾಥ ಕಲ್ಲಪ್ಪನೋರ ತನ್ನ ಎರಡು ಎಕರೆ ಹತ್ತಿ ತೊಗರಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದಾನೆ.ಬೆಳೆ ಕೈಗೆ ಬರಬೇಕೆನ್ನುವಷ್ಟರಲ್ಲಿ ಮಳೆರಾಯ ಕೈಕೊಟ್ಟ ಕಾರಣ ಕೊನೆ ಭಾಗದ ಕಾಲುವೆಗಳಿಗೆ ನೀರು ಬಾರದೆ ಇರುವುದರಿಂದ ರೈತರು ತುಂಬಾ ಕಂಗಲಾಗಿದ್ದಾರೆ.ಇದನ್ನರಿತ  ವಡಗೇರಾ ತಾಲೂಕು ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ತಾಲೂಕು ಅಧ್ಯಕ್ಷರಾದ ವಿದ್ಯಾಧರ  ನೇತೃತ್ವದಲ್ಲಿ  ರೈತ ಸಂಘದ ಪದಾಧಿಕಾರಿಗಳು ಯುವ ರೈತನ ಹೊಲಕ್ಕೆ ಭೇಟಿ ನೀಡಿ ಬೆಳೆ ವೀಕ್ಷಿಸಿದರು. ರೈತ ಸಾಲಮಾಡಿ ಬೆಳೆ ಬೆಳೆಯುತ್ತಾನೆ. ಈಗಾಗಲೇ ರೈತರು ಬಿತ್ತನೆ  ಮಾಡಿ ಬೀಜ ಗೊಬ್ಬರ ಕ್ರಿಮಿನಾಶಕ ಕಳೆ ತೆಗೆಸುವುದು ಇನ್ನಿತರ ಕೆಲಸಗಳಿಗೆ ಲಕ್ಷಾನುಗಟ್ಟಲೆ ಹಣ ಖರ್ಚು ಮಾಡಿರುತ್ತಾನೆ.

ನೀರಿಗೂ ಕೂಡ ಸಾಲ ಕೊಡುವ ಸ್ಥಿತಿ ರೈತನಿಗೆ ಬಂದಿದೆ.ಈಗ ದುಡ್ಡು ಕೊಟ್ಟು ಟ್ಯಾಂಕರ್ ಮೂಲಕ ನೀರು ಹರಿಸಬೇಕಾದರೆ, ಕನಿಷ್ಠ ಒಂದು ಎಕರೆಗೆ 20,000 ರೂಪಾಯಿಗಳು ಖರ್ಚಾಗುತ್ತದೆ. ಇದಕ್ಕೆ ನೇರ ಅಧಿಕಾರಿಗಳೆ  ಹೊಣೆ.  ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಿದ್ದರೆ  ರೈತರು ಇಷ್ಟೊಂದು ಕಷ್ಟ ಪಡಬೇಕಾಗಿರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಸರ್ಕಾರ ವಡಗೇರಾ ತಾಲೂಕನ್ನು ಬರಪೀಡಿತ ತಾಲೂಕು ಎಂದು ಹೆಸರಿಗಷ್ಟೆ ಘೋಷಣೆ ಮಾಡಿದೆ. ಇಲ್ಲಿಯವರೆಗೆ ಯಾವುದೇ ರೀತಿಯಾದ ಬರ ಪರಿಹಾರದ ಕಾರ್ಯ ಕೂಡ ಆರಂಭವಾಗಿಲ್ಲ. ಹಣವು ಕೂಡ ರೈತರಿಗೆ ದೊರಕಿಲ್ಲ. ಕೂಡಲೆ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ವಡಗೇರಾ ಕೊನೆ ಭಾಗದ ರೈತರ ಕಾಲುವೆಗಳಿಗೆ  ಸಮರ್ಪಕ ನೀರು ಹರಿಸಬೇಕು. ರೈತರ ಪಂಪ್ಸೆಟ್ಟುಗಳಿಗೆ ಕನಿಷ್ಠ 8 ಗಂಟೆ  ವಿದ್ಯುತ್  ನೀಡುವುದರ ಜೊತೆಗೆ ಬರ ಪರಿಹಾರದ ಹಣವನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು. ನಿರ್ಲಕ್ಷ ವಹಿಸಿದರೆ ತಹಸೀಲ್ದಾರ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ತಾಲೂಕು ಅಧ್ಯಕ್ಷ  ವಿದ್ಯಾಧರ ಬಿ ಜಾಕಾ, ಶರಣು ಜಡಿ, ಮಹಮ್ಮದ್ ಖುರಿಶಿ ಕೃಷ್ಣಾ ಟೇಲರ್  ವೆಂಕಟೇಶ್ ಇಟಿಗಿ ನಿಂಗಪ್ಪ ಕುರ್ಕಳಿ ಹಳ್ಳೆಪ್ಪ ತೇಜೇರ ಮಲ್ಲು ನಾಟೇಕಾರ ಮರಲಿಂಗ ಗೋನಾಲ ತಿರುಮಲ ಮುಸ್ತಾಜೀರ ಮಲ್ಲು ಬಾಡದ ರಾಘವೇಂದ್ರ ಗುತ್ತೇದಾರ ನಾಗರಾಜ ಸ್ವಾಮಿ ಸುರೇಶ್ ಬಾಡದ ಚಂದ್ರು ಕಾಡಮನೂರ ದೇವು ಜಡಿ ಸಿದ್ದಪ್ಪ ಕಲ್ಲಪ್ಪನೂರ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *